ಈ ಪುಟವನ್ನು ಪರಿಶೀಲಿಸಲಾಗಿದೆ



               -65-      ಆ 11 

ಆ ಕೃಷ್ಣಮಣಿಯ ಗೋಲಾಕಾರವು ಪ್ರಾಯದಿಂದ ಸ್ವಲ್ಪಮಟ್ಟಿಗೆ ಹೆಚ್ಚು ಕಡಿಮೆ ಆಗುತ್ತದೆ. ದೃಷ್ಟಿ ಮಂಡಲವು ಬೇಕಾದ ಹಾಗ ದೊಡ್ಡದು ಅಧವಾ ಸಣ್ಣದು ಆಗುತ್ತದೆ. ಕಣ್ಣುಮುಚ್ಚಿ ದಾಗ್ಗೆ ಗುಡ್ಡೆ ಸ್ವಲ್ಪ ಮೇಲಕ್ಕೂ ಒಳಕ್ಕೂ ತಿರುಗಿ ನಿಲ್ಲುತ್ತದೆ

140. ಮೂಗಿನ ಮುಚ್ಚಿಗೆಯ (ಬುಡದ ಮೇಲಿನ) 3ನೇ 1 ಅಂಶದಲ್ಲಿ ಎರಡು ಕಣ್ಣುಗಳ ನಡುವೆ ಮೆದುಳಿನ ಅಡಿಯಾಗಿರುವ ಎಲುಬಿನಲ್ಲಿರುವ ಅನೇಕವಾದ (ಸುಮಾರು 20) ಮೂಗು ರಂಧ್ರಗಳ ಮುಖವಾಗಿ ಮೆದುಳಿನಿಂದ ಹೊರಟುಬಂದ ನರಗಳು ಪಸರಿಸಿ ಇವೆ.

        ಮೂಗಿನ ಆ ಭಾಗದಲ್ಲೇ ವಾಸನೆಯ ಜ್ಞಾನ ಉಂಟಾಗುವಂಧಾದ್ದು. ಸಾಧಾರಣವಾಗಿ ಎಡದ ಸೊಳ್ಳೆಯು ಬಲದ ಸೊಳ್ಳೆಗಿಂತ ಸ್ವಲ್ಪ ಸಪೂರವಾಗಿರುತ್ತದೆ. ಈ ಸೊಳ್ಳೆಗಳ ಒಳಗಿನ ದ್ವಾರಗಳು ಬಾಯಿಯೊಳಗೆ ತಾಲುವಿನ ಹಿಂದಕಡೆ ಇರುತ್ತವೆ. ಪನ್ನೀರನ್ನು ಅಧವಾ ಬೇರೆ ಪರಿಮಳವುಳ್ಳ ದ್ರವವನ್ನು ಮೂಗಿನ ಸೊಳ್ಳೆಗಳೊಳಗೆ ತುಂಬಿಸಿದಾಗ್ಗೆ ಪರಿಮಳ ಜ್ಞಾನವಿರುವದಿಲ್ಲವಾದ್ದರಿಂದ ಒಕ್ಸಿಜನ್ ಎಂಬ ಪ್ರಾಣವಾಯುವು ಆ ಜ್ಞಾನಕ್ಕೆ ಅವಶ್ಯಕವೆಂತ ತಿಳಿಯುತ್ತಾರೆ.

ಕಿವಿ 141. ಕಿವಿಯಲ್ಲಿ ಒಳಕಿವಿ, ಹೊರಕಿವಿ, ಮಧ್ಯಕಿವಿ, ಎಂಬ 3 ಭಾಗಗಳಿವೆ. ಹೊರ ಕಿವಿಯ ಸ್ರೋತಸ್ಸು (ಅಂದರೆ ತೂತು) ಸುಮಾರು 1¼ ಇಂಚು ಉದ್ದವಿದೆ. ಮಧ್ಯಕಿವಿಯಿಂದ ಎಲುಬು, ಮೃದು ಎಲುಬು ಮೊದಲಾದವುಗಳಿಂದ ಮಾಡಲ್ಪಟ್ಟ ಒಂದು ನಾಳವು ಹೊರಟು ಗಂಟಲಿಗೆ ಕೂಡಿಯದೆ. ಈ ನಾಳದೊಳಗೆ ಬಾಯಿಯಿಂದ ಗಾಳಿಯು ಮಧ್ಯ

 ಕಿವಿ         ಕಿವಿಗೆ ಹೋಗುತ್ತದೆ ನುಂಗುವ ಕಾಲದಲ್ಲಿ ‌  ಬಾಯಿಯಲ್ಲಿರುವ ಈ ನಾಳದ

ದ್ವಾರವು ತೆರೆಯುತ್ತದೆ. ಇದು ಸುಮಾರು 1½ ಇಂಚು ಉದ್ದವಿದೆ. ಹೊರ ಕಿವಿಗೂ ಮಧ್ಯಕಿವಿಗೂ ಇರುವ ಒಂದೇ ದ್ವಾರವು ಪರದೆ ಹಾಗಿನ ಒಂದು ತೆಳ್ಳಗಿನ ಸ್ವಚ್ಛ ಪರೆಯಿಂದ ಮುಚ್ಚಲ್ಪಟ್ಟದೆ ಈ ಮುಚ್ಚಳವಿಲ್ಲದಿದ್ದರೆ, ಕಿವಿಗೆ ಹೊಕ್ಕ ಗಾಳಿ ಮುಂತಾದ್ದು ಬಾಯಿಗೆ ಬರುತ್ತಿತ್ತು. ಮಧ್ಯಕಿವಿಗೂ ಒಳಕಿವಿಗೂ ಮಧ್ಯ ಇರುವ 2 ರಂಧ್ರಗಳು ಸಹ ಪರೆಗಳಿಂದ ಮುಚ್ಚಲ್ಪಟ್ಟವೆ. ಮಧ್ಯಕಿವಿ, ಒಳಕಿವಿ ಸಹ ಕಪಾಲದ ಭಾಗ ವಾದ ಕೆನ್ನೆಲುಬಿನೊಳಗೆ ಇರುತ್ತವೆ. ಮಧ್ಯದ ಕಿವಿಯೊಳಗೆ ಮೂರು ಸೂಕ್ಷ್ಮವಾದ ಎಲುಬುಗಳಿಂದ ಕೂಡಿದ ಅಲಗಾಡುವ ಒಂದು ಸರಪಣಿಯ ಹಾಗಿನದು ಹೊರಕಿವಿಯ ಒಳ ಗಿನ ಅಂತ್ಯದ ಪರೆಯಿಂದ ಒಳಕಿವಿಗೆ ಕೂಡಿರುತ್ತದೆ. ಒಳಕಿವಿಯು ಕೇಳುವಿಕೆಗೆ ಮುಖ್ಯ ವಾದ ಅಂಗವಾಗಿ, ವರ್ಣಿಸಲಿಕ್ಕೆ ಕಷ್ಟವಾದ ಆಕಾರವುಳ್ಳದ್ದಾಗಿದೆ. ಶಬ್ದಜ್ಞಾನಕ್ಕೆ ಕಾರಣ ವಾದ ಮೆದುಳಿನ ನರವು ಈ ಒಳಕಿವಿಯಲ್ಲಿ ವಿಸ್ತರಿಸಿಯದೆ. ಈ ಒಳಕಿವಿಯ ಮಧ್ಯ ಇರುವ ಅನೇಕವಾದ ಅರೆಗಳಲ್ಲಿ ಒಂದು ಅಂಟಾಗಿರುವ ದ್ರವಪದಾರ್ಧವಿದೆ. ಶಬ್ದಕ್ಕೆ ಹೇತು ವಾಯುವಿನ ತೆರೆಗಳು ಈ ತೆರೆಗಳು ಮಧ್ಯಕಿವಿಯ ಪರೆಗೆ ಬಡಿಯುವದರಿಂದ ಅದು ಅದರುತ್ತದೆ. ಈ ಚಲನೆಯು ಮಧ್ಯಕಿವಿಯ ಅಲಗಾಡುವ 3 ಎಲುಬುಗಳ ಪರಿಮುಖವಾಗಿ ಒಳಕಿವಿಯ ದ್ವಾರಕ್ಕೆ ತಗಲಿ, ಅಲ್ಲಿಂದ ಅದನ್ನು ಶ್ರೋತ್ರ ನರವು ಮೆದುಳಿಗೆ ಒಯ್ಯುತ್ತದೆ. ಗಾಳಿಯಲ್ಲಿ ಶಬ್ದವು ಒಂದು ಸೆಕುಂದಿಗೆ 1100 ಅಡಿ ಪ್ರಕಾರ ಸಂಚಾರಮಾಡುತ್ತದೆ.