ಅ 1\ - 86 – ಮಾಧುರ್ಯ, ಸ್ನೇಹ, ಗೌರವ, ಶೈತ್ಯ, ಪೈಚ್ಛಿಲ್ಯ ಈ ಗುಣಗಳು ಕಫದ ಲಕ್ಷಣಗಳು. ಅದಕ್ಕೆ ಸಮಾನಯೋನಿಯುಳ್ಳ ರಸವು ಸೀ ಆ ರಸವು ಮಾಧುರ್ಯದಿಂದ ಕಫದ ಮಾಧುರ್ಯವನ್ನೂ, ಸ್ನೇಹದಿಂದ ಸ್ನೇಹವನ್ನೂ, ಗೌರವದಿಂದ ಗುರುತ್ವವನ್ನೂ ಶೈತ್ಯದಿಂದ ಶೈತ್ಯವನ್ನೂ, ಪೈಚ್ಛಿಲ್ಯದಿಂದ ಪಿಚ್ಛಿಲತ್ವವನ್ನೂ, ವೃದ್ದಿ ಪಡಿಸುತ್ತದೆ. ಮತ್ತು ಅದಕ್ಕೆ ವಿರೋಧಯೋನಿಯಿಂದ ಹುಟ್ಟಿದ ರಸವು ಖಾರ. ಅದು ಶ್ಲೇಷ್ಮಕ್ಕೆ ಶತ್ರುವಾದದ್ದರಿಂದ, ಖಾರ ದಿಂದ ಸೀಯನ್ನೂ, ರೂಕ್ಷತೆಯಿಂದ ಸ್ನೇಹವನ್ನೂ, ಲಘುತ್ವದಿಂದ ಗುರುತ್ವವನ್ನೂ, ಉಷ್ಣತೆ ಯಿಂದ ಶೈತ್ಯವನ್ನೂ, ವೈಶದ್ಯದಿಂದ ಪೈಚ್ಛಿಲ್ಯವನ್ನೂ ಜಯಿಸುತ್ತದೆ. ಇದು ಉದಾಹರಣ ವಾಗಿ ಮಾತ್ರ ಹೇಳಿದ್ದಾಗಿರುತ್ತದೆ |
ಷರಾ ಇದೇ ಪ್ರಕಾರ ಬೇರೆ ರಸಗಳ ವಿಷಯವಾಗಿ ಸ್ವಯೋ ಎಯೋನಿ ಬೇದಗಳನ್ನೂ ತಿಳಿಯತಕ್ಕದ್ದೆಂತ ತಾತ್ಪರ್ಯ ದ್ರವ್ಯಗಳ ಗುಣವಾಚಕ ಪದಗಳ ಅರ್ಥ ಅ III 2ರಲ್ಲಿ ಕಾಣುತ್ತದೆ
10, ಮಧುರಾದಿ ರಸಗಳ ಲಕ್ಷಣಗಳು
ತತ್ರ ಯಃ ಪರಿತೋಷಮುತ್ಪಾದಯತಿ ಪ್ರಹ್ಲಾದಯತಿ ತರ್ಪಯತಿ ಜೀವಯತಿ ಮುಖಾವಲೇಪಂ ಜನಯತಿ ಶ್ಲೇಷ್ಮಣಂ ಚಾಭಿವರ್ಧಯತಿ ಸ ಮಧುರಃ | ಯೋ ದಂತಹರ್ಷಮುತ್ಪಾದಯತಿ ಮುಖಾಸ್ರಾವಂ ಜನ ಯತಿ ಶ್ರದ್ದಾಂ ಚೋತ್ಪಾದಯತಿ ಸೋಮಃ | ಯೋ ಭುಕ್ತರುಚಿ ಮುತ್ಪಾದಯತಿ ಕಫಪ್ರಸೇಕಂ ಜನಯತಿ ಮಾರ್ದವಂ ಚಾಪಾದಯತಿ ಸ ಲವಣಃ | ಯೋ ಜಿಹ್ವಾಗ್ರಂ ಬಾಧತೇ ಉದ್ವೇಗಂ ಜನಯತಿ ಶಿರೋ ಗೃಹಣೀತೇ ನಾಸಿಕಾಂ ಚ ಸ್ರಾವಯತಿ ಸ ಕಟುಕಃ | ಯೋ ಗಲೇ ಚೂಷಮುತ್ಪಾದಯತಿ ಮುಖವೈಶದ್ಯಂ ಜನಯತಿ ಭುಕ್ತರುಚಿಂ ಚಾಪಾದಯತಿ ಹರ್ಷಂ ಚ ಸ ತಿಕ್ತಃ | ಯೋ ವಕ್ತಂ ಪರಿಶೋಷಯತಿ ಜಿಹ್ವಾಂ ಸ್ತಂಭಯತಿ ಕಂರಂ ಬಧ್ನಾತಿ ಹೃದಯಂ ಕರ್ಷತಿ ಪೀಡಯತಿ ಚ ಸ ಕಷಾಯಃ | (ಸು. 156 )
ಯಾವ ರಸವು ಸಂತೋಷವನ್ನೂ, ಆನಂದವನ್ನೂ, ಉಂಟುಮಾಡುತ್ತದೋ, ತೃಪ್ತಿ ಗೊಳಿಸುತ್ತದೋ, ಬದುಕಿಸುತ್ತದೋ, ಬಾಯಿಯೊಳಗೆ ಮಲವನ್ನುಂಟುಮಾಡುತ್ತದೋ, ಮತ್ತು ಕಫವನ್ನು ಹೆಚ್ಚಿಸುತ್ತದೋ ಅದು ಸೀ. ಯಾವದು ದಂತಹರ್ಷ (ಹಲ್ಲುಗಳಲ್ಲಿ ಜುಮ್ಮು) ವನ್ನುಂಟುಮಾಡುತ್ತದೋ, ಬಾಯಿಯೊಳಗೆ ದ್ರವವನ್ನು ಸುರಿಸುತ್ತದೆ, ಮತ್ತು ರುಚಿಯನ್ನುಂಟುಮಾಡುತ್ತದೋ, ಅದು ಹುಳಿ, ಯಾವದು ಆಹಾರದ ರುಚಿಯನ್ನುಂಟು ಮಾಡುತ್ತದೋ, ಕಫ ಸುರಿಯುವ ಹಾಗೆ ಮಾಡುತ್ತದೋ ಮತ್ತು ಮೃದುತ್ವವನ್ನುಂಟುಮಾಡುತ್ತದೋ , ಅದು ಉಪ್ಪು ಯಾವದು ನಾಲಿಗೆಯ ತುದಿಯನ್ನು ಬಾಧಿಸುತ್ತದೋ, ಅಸಂತೋಷ ಅಧವಾ ಮೇಲೆ ಅಮಲೇರಿಕೆಯನ್ನುಂಟುಮಾಡುತ್ತದೋ, ತಲೆಗೇರಿ ಹಿಡಕೊಳ್ಳುತ್ತದೋ ಮತ್ತು ಮೂಗಿನಲ್ಲಿ ದ್ರವ ಸುರಿಯುವಂತೆ ಮಾಡುತ್ತದೋ ಅದು ಖಾರ ಯಾವದು ಗಂಟಲನ್ನು ಒಣಗಿಸುತ್ತದೆ ಮತ್ತು ಬಾಯಿಯು ಶುಚಿಯಾಗುವ ಹಾಗೂ, ಆಹಾರವು ರುಚಿಯಾಗುವ ಹಾಗೂ ಮಾಡಿ ಸುಖ ಕೊಡುತ್ತದೋ, ಅದು ಕಹಿ, ಯಾವದು ಬಾಯಿಯನ್ನು ಒಣಗಿಸು