- 104 - ದೋಷಧಾತ್ವಗ್ನಿಸಮತಾಂ ಸಂಪ್ರಾಪ್ತಿಂ ವಿಷಯೇಷು ಚ || ಕ್ರಿಯಾಣಾಮಾನುಲೋಮ್ಯಂ ಚ ಕರೋತ್ಯ ಕುಪಿತೋ ನಿಲಃ | ಯಧಾಗ್ನಿಃ ಪಂಚಧಾ ಭಿನ್ನೋ ನಾಮಸ್ಥಾನಾತ್ಮಕರ್ಮಭಿಃ || ಭಿನ್ನೋನಿಲಸ್ತ ಧಾ ಹೈಕೋ ನಾಮಸ್ಥಾನಕ್ರಿಯಾಮಯೈಃ | ಪ್ರಾಣೋದಾಸೌ ಸಮಾನಶ್ಚ ವ್ಯಾನಶ್ಚಾಸಾನ ಏವ ಚ || ಸ್ಥಾನಸ್ಥಾ ಮಾರುತಾಃ ಪಂಚ ಯಾಪಯಂತಿ ಶರೀರಿಣಂ || ವಾಯುರ್ಯೋ ವಕ್ತ್ರಸಂಚಾರಿ ಸ ಪ್ರಾಣೋ ನಾಮ ದೇಹಧೃಕ್ || ಸೋನ್ನಂ ಪ್ರವೇಶಯತ್ಯಂತಃ ಪ್ರಾಣಾಂಶ್ಚಾಪ್ಯವಲಂಬತೇ | ಪ್ರಾಯಶಃ ಕುರುತೇ ದುಷ್ಟೋ ಹಿಕ್ಕಾಶ್ವಾಸಾದಿಕಾನ್ ಗದಾನ್ | ಉದಾನೋ ನಾಮ ಯಸ್ತೂರ್ಧ್ವಮುಪೈತಿ ಪವನೋತ್ತಮಃ | ತೇನ ಭಾಷಿತಗೀ ತಾದಿವಿಶೇಷೋಭಿಪ್ರವರ್ತತೇ || ಊರ್ಧ್ವಜತ್ರುಗತಾನ್ರೋಗಾಸ್ಕರೋತಿ ಚ ವಿಶೇಷತಃ | ಆಮಪಕ್ವಾಶಯಚರಃ- ಸಮಾನೋ ವಹ್ನಿಸಂಗತಃ | ಸೋನ್ನಂ ಪಚತಿ ತಜ್ಜಾಂಶ್ಚ ವಿಶೇಷಾನ್ವಿವಿನಕ್ತಿ ಹಿ || ಗುಲ್ಮಾಗ್ನಸಂಗಾತೀಸಾರಪ್ರಭೃತೀನ್ಕುರುತೇ ಗದಾನ್ || ಕೃತ್ಸ್ನದೇಹಚರೋ ವ್ಯಾನೋ ರಸಸಂವಹನೋದ್ಯತಃ || ಸ್ವೇದಾಸೃಕ್ಸ್ರಾಣೋ ವಾಪಿ ಪಂಚಧಾ ಚೇಷ್ಟಯತ್ಯಪಿ || ಕ್ರುದ್ದಶ್ಚ ಕುರುತೇ ರೋಗಾನ್ಪ್ರಾಯಶಃಸರ್ವದೇಹಗಾನ್ | ಪಕ್ಷಾಧಾನಾಲಯೋಪಾನಃ ಕಾಲೇ ಕರ್ಷತಿ ಚಾಪ್ಯಯಂ || ಸಮೀರಣಃ ಸಕೃನ್ಮೂತ್ರಶುಕ್ರಗರ್ಭಾರ್ತವಾನ್ಯಧಃ || ಕ್ರುದ್ಧಶ್ವ ಕುರುತೇ ರೋಗಾನ್ಘೊರಾನ್ವಸ್ತಿಗುದಾಶ್ರಯಾನ್ || ಶುಕ್ರದೋಷಪ್ರಮೇಹಾಸ್ತು ವ್ಯಾನಾಪಾನಪ್ರಕೋಪಜಾಃ | ಯುಗಪತ್ಕುಪಿತಾಶ್ಚಾಪಿ ದೇಹಂ ಭಿಂದ್ಯುರಸಂಶಯಂ || (ಸು. 243-44.) ಈ ವಾಯುವು ಸ್ವತಂತ್ರಿಕನಾದ್ದರಿಂದಲೂ, ನಿತ್ಯನಾದ್ದರಿಂದಲೂ, ಸರ್ವವ್ಯಾಪಕ ನಾದ್ದರಿಂದ, ಅವನಿಗೆ ಭಗವಂತನಾದ ಸ್ವಯಂಭು ಎಂಬ ಖ್ಯಾತಿ ಉಂಟು. ಸರ್ವ ಸ್ಥಾವರ ಜಂಗಮವಸ್ತುಗಳಲ್ಲಿ ಯೂ ಸರ್ವಾತ್ಮಕನಾಗಿ (ಸರ್ವ ಕಾರಣಕಾರ್ಯಗಳಿಗೆ ಆತ್ಮ ನಾಗಿ) ಸರ್ವ ಲೋಕ ಪೂಜಿತನಾಗಿದ್ದಾನೆ, ಭೂತಗಳ ಸ್ಥಿತಿ, ಉತ್ಪತ್ತಿ, ನಾಶಗಳಿಗೆ ಇವನು ಕಾರಣನು, ಅವ್ಯಕ್ತ (ಅದೃಶ್ಯನಾದಾಗ್ಯೂ ವ್ಯಕ್ತವಾದ (ಪ್ರಕಟವಾದ) ಕರ್ಮ ಮಾಡತಕ್ಕವನು. ಇವನು ರೂಕ್ಷ, ಶೀತ, ಲಘು, ಖರ, ಈ ಗುಣಗಳುಳ್ಳವನು, ಅಡ್ಡವಾಗಿ ಚಲಿಸುವವನು, ದ್ವಿಗುಣನು (ಶಬ್ದ ಸ್ಪರ್ಶಗುಣಗಳೆರಡುಳ್ಳವನು), ರಜೋಗುಣ ಹೆಚ್ಚಾ ಗುಳ್ಳವನು, ನೆನಸಕೂಡದ ಶಕ್ತಿಯುಳ್ಳವನು, ದೋಷಗಳಿಗೆ ನಾಯಕನು, ಮತ್ತು ರೋಗಸಮೂಹದಲ್ಲಿ ಶೋಭಿಸುವವನು ಆಗಿದ್ದಾನೆ. ಪದೇ ಪದೇ ಚಲಿಸತಕ್ಕ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.