ಈ ಪುಟವನ್ನು ಪರಿಶೀಲಿಸಲಾಗಿಲ್ಲ.
-131- ಆ VI
ಸರ್ವ ವ್ಯಾಧಿಗಳಿಗೂ ವಾತ ಪಿತ್ತ ಶ್ಲೇಷ್ಮಗಳೇ ಮೂಲ. ಅವುಗಳ ಲಕ್ಷಣಗಳಿರುವದ ರಿಂದಲೂ, ಅವುಗಳಿಗೆ ತಕ್ಕ ಪರಿಹಾರದಿಂದ ಫಲ ಕಾಣುವದರಿಂದಲೂ, ಶಾಸ್ತ್ರಾಧಾರವಿರುವದ ರಿಂದಲೂ.
4. ದೋಷಧಾತುಮಲಸಂಸರ್ಗಾದಾಯತನವಿಶೇಷಾನ್ನಿಮಿತ್ತತಶ್ಚೆಷಾಂ ವಿ ಕಲ್ಪಾ ಭವಂತಿ | ದೋಷದೂಷಿತೇಷ್ವತ್ಯಧ೯ಂ ತ್ಯರ್ಧಂ ಧಾತುಷು ಸಂಜ್ಞಾ ಕ್ರಿ ಧಾತ್ವಾದಿ ಭೇ ಯತೇ ರಸಜೋSಯಂ ಶೋಣಿತಜೋSಯಂ ಮಾಂಸಜೋsಯಂ ಮೇ ದದ ಮೇಲೆ ದೋಜೋsಯಮಸ್ಧಿಬೋsಯಂ ಮಜ್ಜಜೋಯಂ ಶುಕ್ರಜೋsಲೆ ಯಂ ವ್ಯಾಧಿರಿತಿ | (ಸು. 94.)
ವಾತಾದಿ ದೋಷಗಳು, ರಸಾದಿ ಧಾತುಗಳು, ಸ್ವೇದಾದಿ ಮಲಗಳು, ಇವುಗಳು ಒಂದ ಕ್ಕೊಂದು ಕೂಡುವದರ ದೆಸೆಯಿಂದಲೂ, ಸ್ಥಾನವಿಶೇಷದ ದೆಸೆಯಿಂದಲೂ, ಹೇತುವಿನ ದೆಸೆ ಯಿಂದಲೂ, ವಾತಾದಿ ದೋಷಗಳ ವಿಕಾರಗಳು ಉಂಟಾಗುತ್ತವೆ. ಧಾತುಗಳು ದೋಷ ಗಳಿಂದ ಅತಿಯಾಗಿ ಕೆಡಿಸಲ್ಪಟ್ಟಾಗ್ಗೆ, ಅದನ್ನು ಸೂಚಿಸುವದಕ್ಕಾಗಿ ಈ ವ್ಯಾಧಿಯು ರಸದಿಂದು ತನ್ನವಾದದ್ದು, ಇದು ರಕ್ತದಿಂದುತ್ಪನ್ನವಾದದ್ದು, ಇದು ಮಾಂಸದಿಂದುತ್ಪನ್ನವಾದದ್ದು ಇದು ಮೇದಸ್ಸಿನಿಂದುತ್ಪನ್ನವಾದದ್ದು, ಇದು ಎಲುಬಿನಿಂದ ಹುಟ್ಟಿದ್ದು, ಇದು ಮಚ್ಚೆಯಿಂದ ಹುಟ್ಟಿದ್ದು, ಇದು ಶುಕ್ರದಿಂದುತ್ಪನ್ನವಾದದ್ದು, ಎಂಬ ಸಂಜ್ಞೆಮಾಡಲ್ಪಡುತ್ತದೆ
5. ತತ್ರಾನ್ನಾ ಶ್ರದ್ವಾರೋಚಕಾವಿಪಾಕಾಂಗಮರ್ದ-ಜ್ವರ - ಹೃಲ್ಲಾಸ- ತೃಪ್ತಿ- ರಸದೋಷಜ ಗೌರವ- ಹೃತ್ಪಾಂಡುರೋಗ - ಮಾರ್ಗೋಪರೋಧ-ಕಾರ್ಶ್ಯ-ವೈರಸ್ಯಾಂಗ ವ್ಯಾಧಿಗಳು ಸಾದಾಕಾಲವಲಪಲಿತದರ್ಶನ-ಪ್ರಭೃತಯೋ ರಸದೋಷಜಾ ವಿಕಾರಾಃ | (ಸು. 94.) ಈ ಪಕ್ಷದಲ್ಲಿ, ಅನ್ನದಲ್ಲಿ ಉದಾಸೀನ, ಅರುಚಿ, ಅಜೀರ್ಣ, ಮೈಬತ್ತಿಬರುವಿಕೆ, ಜ್ವರ, ಬಿಕ್ಕಟ್ಟು, ತೃಪ್ತಿ, ಮೈಭಾರ, ಹೃದಯರೋಗ, ಪಾಂಡುರೋಗ, ದ್ವಾರಗಳ ತಡೆ, ಕೃಶತೆ, ಬಾಯಿ ಒಣಗುವದು, ಅಂಗಗಳ ಜಾಡ್ಯ, ಕಾಲಕ್ಕೆ ಮೊದಲೇ ನರೆ ಮತ್ತು ನೆರಿ ಕಾಣುವದು, ಇವು ಮೊದಲಾದ ವಿಕಾರಗಳು ರಸದೋಷದಿಂದ ಉಂಟಾಗತಕ್ಕವು
6. ಕುಷ್ಠ - ವಿಸರ್ಪ - ಪಿಡಿಕಾ - ಮಶಕ- ನೀಲಿಕಾ-ತಿಲಕಾಲಕ - ಸ್ವಚ್ಚ-ವ್ಯಂ ರಕ್ತ ದೋಷಜ ಗೇಂದ್ರಲುಪ್ತ - ಪ್ಲೀಹ - ವಿದ್ರಧಿ - ಗುಲ್ಮ- ವಾತಶೋಣಿತಾರ್ಶೋಬು೯ ವ್ಯಾಧಿಗಳು ದಾಂಗಮರ್ದಾಸೃಗ್ಪರ - ರಕ್ತಪಿತ್ತಪ್ರಭೃತಯೋ ರಕ್ತದೋಷಜಾಃ | (ಸು. 94-95.) ಕುಷ್ಠ ರೋಗ, ವಿಸರ್ಪ, ಬೊಕ್ಕೆ, ಮಶಕ (ಕರಿ ದದ್ದು), ನೀಲಿಕಾ (ಕರಿ ಸಿಬ್ಬು), ತಿಲ ಕಾಲಕ (ಎಳ್ಳು), ಮಚ್ಛೆ, ಬಂಗು, ಇಂದ್ರುಲುಪ್ತ (ರೋಮ ಉದುರುವದು), ಪ್ಲೀಹವ್ಯಾಧಿ, ವಿದ್ರಧಿ (ಹುಣ್ಣ), ಗುಲ್ಮ, ವಾತರಕ್ತ, ಮೂಲವ್ಯಾಧಿ, ಅರ್ಬುದ, ಮೈನೋವು, ಅಸೃಗ್ದರ, ರಕ್ತಪಿತ್ತ, ಮುಂತಾದವ ರಕ್ತದೋಷದಿಂದುಂಟಾಗುವ ವಿಕಾರಗಳು. 17*