ಆ XI – 212 - ಶಿರೋರುಗಾರ್ತಸ್ತ್ರಷಿತಃ ಶ್ರಾಂತಃ ಪಾಕಕಮಾನ್ವಿತಃ | ಅರ್ದಿತೋ ಕರ್ಣಶೂಲೀ ಚ ದಂತರೋಗೀ ಚ ಮಾನವಃ | (ಸು. 500-501.) ಬೆಳಿಗ್ಗೆ ಎದ್ದ ಮೇಲೆ, ಪ್ರಥಮತಃ ಹನ್ನೆರಡಂಗುಲ ಉದ್ದವಾದ, ಕಿರಿಬೆರಳಷ್ಟು ತೋರ ವಾದ, ನೆಟ್ಟಗಾದ, ಒಂದೇ ತುಂಡಾದ, ಹುಣ್ಣಿಲ್ಲದ, ಜೋಡಲ್ಲದ ಗಂಟು, ಹೊಸತಾದ, ಪ್ರಶಸ್ತ ಸ್ಥಳದಲ್ಲಿ ಬೆಳೆದ, ಋತು, ದೋಷ, ರಸ ಮತ್ತು ವೀರ್ಯ, ಇವುಗಳ ವಿಚಾರದ ಮೇಲೆ ಯುಕ್ತವಾದ, ಚೊಗರು, ಸೀ, ಕಹಿ, ಅಧವಾ ಖಾರ, ರುಚಿಯುಳ್ಳ, ಹಲ್ಲು ಉಜ್ಜುವ ಕಡ್ಡಿ ಯನ್ನು ಸಂಗ್ರಹಿಸಬೇಕು. ಕಹಿ ಚಾತಿಯಲ್ಲಿ ಕಹಿಬೇವು, ಚೊಗರು ಜಾತಿಯಲ್ಲಿ ಖದಿರಮರ, ಸೀ ಜಾತಿಯಲ್ಲಿ ಇಪ್ಪೆಮರ, ಖಾರ ಜಾತಿಯಲ್ಲಿ ಕಾಡು ಹಲ್ಲೆ ಮರ (ಹೊಂಗೆ), ಶ್ರೇಷ್ಠವಾದ ದ್ದು. ಆ ಕಡ್ಡಿಯ ತುದಿಯನ್ನು ಕೂರ್ಚಮಾಡಿಕೊಳ್ಳಬೇಕು. ಒಣಶುಂಠಿ, ಹಿಪ್ಪಲಿ, ಮೆಣಸು, ದಾಲ್ಗನಿ ಕೆತ್ತೆ, ಯಾಲಕ್ಕಿ, ಮತ್ತು ಪಚ್ಚೆಲೆ, (ಅಧವಾ ದಾಲ್ವನಿ ಎಲೆ), ಇವುಗಳ ಪುಡಿಗೆ ಜೇನು ಮತ್ತು ಎಣ್ಣೆ ಕೂಡಿಸಿ ಕಲಸಿ ಆ ಕೂರ್ಚಕ್ಕೆ ತಾಗಿಸಿಕೊಂಡು ಅದರಿಂದಲೂ, ಸೈಂಧವ ಲವಣದ ಪುಡಿ ಕೂಡಿಸಿದ ತೇಜೋವತಿಯ ಚೂರ್ಣದಿಂದಲೂ, ಹಲ್ಲುಗಳನ್ನು ನಿತ್ಯದಲ್ಲೂ ಶುಚಿಮಾಡಬೇಕು. ಹಲ್ಲಿನ ಮಾಂಸಗಳಿಗೆ ಬಾಧಕ ಬಾರದ ರೀತಿಯಲ್ಲಿ ಮೃದುವಾದ ಕೂರ್ಚದಿಂದಲೂ, ದಂತಶೋಧನದ ಚೂರ್ಣದಿಂದಲೂ ಹಲ್ಲುಗಳನ್ನು ಒಂದೊಂದಾಗಿ ಉಜ್ಜ ಬೇಕು. ಅದರಿಂದ ಹಲ್ಲಿಗೆ ಹಿಡುಕೊಂಡ ಮಲವೂ, ದುರ್ವಾಸನೆಯೂ, ಕಫವೂ, ಹೋಗಿ ನಿರ್ಮಲತೆಯೂ, ಅನ್ನದ ರುಚಿಯೂ, ಮನಃಸಂತೋಷವೂ, ಉಂಟಾಗುತ್ತವೆ. ಗಂಟಲು, ತಾಲು, ತುಟಿ, ನಾಲಿಗೆ, ಇವುಗಳಿಗೆ ಸಂಬಂಧ ಪಟ್ಟ ರೋಗಗಳಲ್ಲಿಯೂ, ಬಾಯಿಹುಣ್ಣು, ಉಬ್ಬಸ, ಕೆಮ್ಮು, ಬಿಕ್ಕಟ್ಟು ಮತ್ತು ವಾಂತಿ, ಈ ವ್ಯಾಧಿಗಳಲ್ಲಿಯೂ, ಬಲಹೀನನಾದವನೂ, ಹಸಿದವನೂ, ಮದ-ಮರ್ಚ್ಚೆಗಳಿಂದ ಪೀಡಿತನಾದವನೂ, ಶಿರೋರೋಗವುಳ್ಳವನೂ, ಬಾಯಾರಿದವನೂ, ಶ್ರಮಪಟ್ಟವನೂ, ಪಚನಾಯಾಸವುಳ್ಳವನೂ, ಅರ್ದಿತರೋಗವುಳ್ಳವನೂ, ಕಿವಿಶೂಲೆಯವನೂ, ಹಲ್ಲಿನ ರೋಗವುಳ್ಳವನೂ, ದಂತ ಉಜ್ಜುವ ಕಡ್ಡಿಯನ್ನು ಉಪಯೋ ಗಿಸಬಾರದು. 4. ಕೇಪ್, ಕರವೀರಾರ್ಕಕರಂಜಬಕುಲಾಸನಾನ್ | ದಂತಕಾಷ್ಟಾರ್ಧವನ್ನೇ ತು ಸರ್ವಾನಂಟಕಿನೋ ವಿದುಃ || ದಂತಕಾಷ್ಟ್ರ ಗುವಾಕತಾಲಹಿಂತಾಲಖರ್ಜೂರೈ ಕೇತಕೀಯುತೈಃ | ನಾರಿಕೇಲೇನ ತಾಡ್ಯಾ ಚ ನ ಕುರ್ಯಾದ್ದಂತಧಾವನಂ || (ರಾ. ವ. 6-4 ) ದಂತಕಾಷ್ಠ ವಾಗಿ ಉಪಯೋಗಿಸುವದಕ್ಕೆ ಕೆಲವರು ಕಣಿಗಲು, ಎಕ್ಕೆ, ಕಾಡುಹಲ್ಲೆ (ಹೊಂಗೆ), ರೆಂಜೆ, ಅಸನ (ಬೇಬ), ಈ ಮರಗಳನ್ನು ಹೇಳುತ್ತಾರೆ; ಬೇರೆಯವರು ಮುಳ್ಳು ಸರ್ವ ಮರಗಳೂ ಆಗಬಹುದೆನ್ನುತ್ತಾರೆ. ಕಂಗು, ತಾಳಿ, ಹಿಂತಾಳಿ, ಖರ್ಜೂರ, ಕೇದಕೆ, ತೆಂಗು, ಬಳ್ಳಿ ತಾಳಿ, ಈ ವೃಕ್ಷಗಳ ಕಡ್ಡಿಯನ್ನು ಹಲ್ಲುಜ್ಜುವದಕ್ಕೆ ಉಪಯೋಗಿಸಬಾರದು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.