೪ XI - 214 - ಕೂದಲ ಕೇಶಪ್ರಸಾಧನಂ ಕೇಶಂ ರಜೋಜಂತುಮಲಾಪಹಂ || ವಾಚಣ (ಭಾ. ಪ್ರ. 46.) ಜುಟ್ಟಿನಲ್ಲಿ ಬಾಚಬಹುದಾದ್ದನ್ನು ಬಾಚಿ ಸರಿಪಡಿಸಬೇಕು. ಹಾಗೆ ಕೂದಲನ್ನು ಬಾಚು ವದರಿಂದ ದೂಳು, ಹೇನು, ಮತ್ತು ಮಲ ಹೋಗಿ, ಕೂದಲುಗಳು ಬೆಳೆಯುವವು. ನಿದ್ರಾದಾಹಶ್ರಮಹರಂ ಸೈದಕಂಡೂತೃಷಾಪಹಂ | ಹೃದ್ಯಂ ಮಲಹರಂ ಶ್ರೇಷ್ಠಂ ಸರ್ವೇಂದ್ರಿಯನಿಶೋಧನಂ || ತಂದ್ರಾಪಾಪೋಪಶಮನಂ ತುಷ್ಟಿ ದಂ ಪುಂಸ್ಕೃ ವರ್ಧನಂ || ರಕ್ತಪ್ರಸಾದನಂ ಚಾಪಿ ಸ್ನಾನಮಗ್ನೆಶ್ವ ದೀಪನಂ || ಉಣ್ಣೆನ ಶಿರಸಃ ಸ್ನಾನಮಹಿತಂ ಚಕ್ಷುಷಃ ಸದಾ || ಶೀತೇನ ಶಿರಸಃ ಸ್ನಾನಂ ಚಕ್ಷುಷ್ಯಮಿತಿ ನಿರ್ದಿಶೇತ್ || ಸ್ನಾನ ಶ್ರೇಷ್ಮಮಾರುತಕೊಪೇ ತು ಜ್ಞಾತ್ವಾ ವ್ಯಾಧಿಬಲಾಬಲಂ | ಕಾಮಮುಷ್ಣಂ ಶಿರಃಸ್ನಾನಂ ಭೈಷಜ್ಯಾರ್ಧಂ ಸಮಾಚರೇತ್ || ಅತಿಶೀತಾಂಬು ಶೀತೇ ಚ ಶ್ಲೇಷ್ಯಮಾರುತಕೊಪನಂ | ಅತ್ಯುಷ್ಣ ಮುಷ್ಣಕಾಲೇ ಚ ಪಿತ್ತ ಶೋಣಿತವರ್ಧನಂ || ತಚ್ಛಾತಿಸಾರ-ಜ್ವರಿತ-ಕರ್ಣಶೂಲಾನಿಲಾರ್ತಿಷು | ಆಧ್ಯಾನಾರೋಚಕಾಜೀರ್ಣಭುಕ್ತವತ್ತು ಚ ಗರ್ಹಿತಂ || (ಸು. 504-505.) ಸ್ನಾನವು ಸಂತೋಷಕರ, ತೃಪ್ತಿಕರ, ಒಳ್ಳೇ ಮಲಹರ ಅದರಿಂದ ನಿದ್ರೆ, ಉರಿ, ಶ್ರಮ, ಬೆವರು, ತುರಿ, ಬಾಯಾರಿಕೆ, ಆಲಸ್ಯ, ಮತ್ತು ಕಲಿ ಹೋಗುವದಲ್ಲದೆ, ಪುಂಸ್ಕೃವೃದ್ಧಿ, ಅಗ್ನಿ ದೀಪನ, ಸರ್ವ ಇಂದ್ರಿಯಗಳ ಶುದ್ಧಿ, ಮತ್ತು ರಕ್ತ ಪ್ರಸನ್ನತೆ ಉಂಟಾಗುವವು. ತಲೆಸ್ನಾನ ವನ್ನು ಬಿಸಿನೀರಿನಿಂದ ಮಾಡುವದು ಯಾವಾಗಲೂ ಕಣ್ಣಿಗೆ ಅಹಿತವೆಂತಲೂ, ತಣ್ಣೀರಿನಿಂದ ತಲೆಸ್ನಾನಮಾಡುವದು ಕಣ್ಣಿಗೆ ಹಿತವೆಂತಲೂ, ಹೇಳಬೇಕು. ಆದರೆ ಕಫವಾತ ಪ್ರಕೋಪ ಗೊಂಡಾಗ್ಗೆ, ವ್ಯಾಧಿಯ ಬಲಾಬಲ ನೋಡಿಕೊಂಡು, ಔಷಧವಾಗಿ, ತಲೆಸ್ನಾನವನ್ನು ಬಿಸಿನೀರಿನಿಂದ ಬೇಕಾದಷ್ಟು ಮಾಡಬಹುದು. ಶೀತಕಾಲದಲ್ಲಿ ಅತಿತಣ್ಣಗಾದ ನೀರಿನ ಸ್ನಾನದಿಂದ ಕಫವಾತಗಳು ಪ್ರಕೋಪಗೊಳ್ಳುವವು ಮತ್ತು ಉಷ್ಣ ಕಾಲದಲ್ಲಿ ಅತಿಬಿಸಿ ಯಾದ ನೀರಿನ ಸ್ನಾನದಿಂದ ರಕ್ತಪಿತ್ತವ ವೃದ್ದಿ ಯಾಗುವದು. ಅತಿಸಾರ, ಜ್ವರ, ಕಿವಿಶೂಲೆ, ವಾತರೋಗ, ಹೊಟ್ಟೆಯುಬ್ಬರ, ಅರುಚಿ, ಅಜೀರ್ಣ, ಈ ರೋಗಗಳಲ್ಲಿ ಯೂ, ಊಟಮಾಡಿ ದವರಿಗೂ, ಸ್ನಾನವು ನಿಂದಿತವಾದದ್ದಾಗಿರುತ್ತದೆ. 8. ಅಭ್ಯಂಗೋ ಮಾರ್ದವಕರಃ ಕಫವಾತನಿರೋಧನೆಃ | ಅಭ್ಯಂಗ ಧಾತೂನಾಂ ಪುಷ್ಟಿ ಜನನೋ ಮೃ ಜಾವರ್ಣಬಲಪ್ರದಃ | (ಸು. 502.)
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.