– 217 - ಆ XI. ಪಾದಗಳಿಗೆ ತೈಲಾಭ್ಯಂಗಮಾಡುವದರಿಂದ, ಪಾದಗಳು ಮುಳ್ಳಾಗಿ, ಒಣಗಿಕೊಂಡು, ರೂಕ್ಷವಾಗಿ, ಮತ್ತು ನಿರ್ಜೀವವಾಗಿರುವ ದೋಷಗಳು ಮತ್ತು ಪಾದಗಳ ಬಚ್ಚುವಿಕೆ, ಕೂಡಲೇ ಉಪಶಮನವಾಗುವವು; ಪಾದಗಳಲ್ಲಿ ಬಲ, ನೀರು, ಮತ್ತು ಕೋಮಲ ಉಂಟಾಗುವವು; ದೃಷ್ಟಿಯು ಪ್ರಸನ್ನವಾಗುವದು; ವಾತವು ಶಾಂತವಾಗುವದು; ಗೃಧ್ರಸಿ ವಾತಗಳು, ಪಾದಗಳು ಒಡೆಯುವದು, ಪಾದಗಳಲ್ಲಿ ಸಿರಾನಾಳಗಳ ಮತ್ತು ಸ್ನಾಯುಗಳ ಸಂಕೋಚ, ಈ ರೋಗಗಳು ಪಾದಾಭ್ಯಂಗನ ಮಾಡಿಕೊಳ್ಳುತ್ತಿರುವವನಿಗೆ ಉಂಟಾಗ ಲಾರವು. ನ
- # # #
14. ಸ್ನಾನಸ್ಥಾನಂತರಂ ಸಮ್ಯಗ್ರಸ್ಕಣಾಂಗಸ್ಯ ಮಾರ್ಜನಂ || ವಸ್ತಮಾರ್ಜನ ಕಾಂತಿಪ್ರದಂ ಶರೀರಸ್ಯ ಕಂಡೂತ್ವಗೇಷನಾಶನಂ || (ಭಾ, ಪ್ರ. 47.) ಸ್ನಾನಮಾಡಿದನಂತರ ವಸ್ತದಿಂದ ಮೈಯನ್ನು ಚೆನ್ನಾಗಿ ಉಜ್ಜಿಕೊಳ್ಳುವದರಿಂದ, ಶರೀ ರಕ್ಕೆ ಕಾಂತಿ ಉಂಟಾಗುವದಲ್ಲದೆ, ತುರಿ ಮತ್ತು ಚರ್ಮದೋಷಗಳು ನಾಶವಾಗುವವು. 15. ಸಿರ್ಮಲವಸ್ತ ಕಾವ್ಯಂ ಯಶಸ್ಯ ಮಾಯುಷ್ಯಮಲಕ್ಷ್ಮೀಘ್ನಂ ಪ್ರಹರ್ಷಣಂ | ಧಾರಣ ಶ್ರೀಮಾರಿಷದಂ ಶಸ್ತಂ ನಿರ್ಮಲಾಂಬರಧಾರಣಂ || (ಚ. 32.) ನಿರ್ಮಲವಾದ ವಸ್ತ್ರಗಳನ್ನು ಧರಿಸಿಕೊಳ್ಳೋಣವು ಕಾಮ್ಯವಾದದ್ದು (ಕಾಮೋದ್ದೀಪಕ ವಾದದ್ದು), ಕೀರ್ತಿಕರ, ಆಯುಷ್ಕರ, ಕಲಿನಾಶಕ, ಹರ್ಷಕರ, ಸಂಪದ್ಯುಕ್ತವಾದದ್ದು, ಸಭಾ ಯೋಗ್ಯವಾದದ್ದು ಮತ್ತು ಪ್ರಶಸ್ತವಾದದ್ದು ಆಗಿರುತ್ತದೆ.
- # #
8 16. ಸೀತಂ ವಸನಂ ಶೌರ್ಯಹಾನಿದೌರ್ಭಾಗ್ಯದಾಯಕಂ | ತಾಜ ವಸ್ಸ ಸಂಧಿತಂ ತುಟಿತಂ ಚೈವ ದಗ್ಗಂ ಚಾನ್ಯ ಧೃತಂ ತಥಾ || ದಾರಿದ್ರಕಾರಕಂ ಪ್ರೋಕ್ತಂ ರೋಗಕೃಷ್ಟ ಮತಂ ಬುಧೈಃ | (ನಿ. ರ.) ಸ್ತ್ರೀಯರು ಧರಿಸಿದ ವಸ್ತ್ರವನ್ನು ಪುರುಷನು ಧರಿಸುವದರಿಂದ ಶೌರ್ಯಹಾನಿ ಮತ್ತು ದೌರ್ಭಾಗ್ಯ ಉಂಟಾಗುತ್ತವೆ; ಹಾಗೆಯೇ, ಸಂದುಗೂಡಿಸಿದ, ಹರಿದ, ಸುಟ್ಟ ಮತ್ತು ಅನ್ಯ ರಿಂದ ಧರಿಸಲ್ಪಟ್ಟ ವಸ್ತ್ರಧಾರಣದಿಂದ ದರಿದ್ರತೆಯೂ, ರೋಗವೂ ಉಂಟಾಗುತ್ತವೆಂತ ಸುಜ್ಞರು ಆಲೋಚಿಸುತ್ತಾರೆ. ಕದಾಪಿ ನ ಜನೈ ಸನ್ನಿರ್ಧಾರ್ಯಂ ಮಲಿನಮಂಬರಂ || ತತ್ತು ಕಂಡೂಕ್ರಿಮಿಕರಂ ಗ್ಲಾನ್ಯಲಕ್ಷ್ಮೀಕರಂ ಪರಂ || (ಭಾ, ಪ್ರ. 48.) ಸತ್ಪುರುಷರು ಮಲಿನವಾದ ವಸ್ತ್ರವನ್ನು ಯಾವಾಗಲಾದರೂ ಧರಿಸಿಕೊಳ್ಳಬಾರದು. ಅದರಿಂದ ತುರಿ, ಕ್ರಿಮಿ, ಮತ್ತು ದರಿದ್ರತೆ ಉಂಟಾಗುವವು; ಮತ್ತು ಅದು ಉಲ್ಲಾಸವಿಲ್ಲದಂತೆ ಮಾಡುವದು. 28