ಈ ಪುಟವನ್ನು ಪರಿಶೀಲಿಸಲಾಗಿದೆ

ಆ X1. -226-


ಭವೇನ್ಮಾಣಾಂ ದಿವಾನ್ವಪ್ನ ಸಾಹಿತಸ್ಯ ನಿಷೇವಣಾತ್ || ತಸ್ಮಾದ್ಧಿತಾಂತಂ ಸ್ವಪ್ನಂ ಬುದ್ದಾ ಸ್ವಪ್ಯಾಕ್ ಸುಖಂ ಬುಧಃ ||.

                        ( ಚ. 117-18.)

ಯಾವಾಗ ಮನಸ್ಸು ಬಳಲುತ್ತಲೇ, ಕರ್ಮಾತ್ಮಗಳು ಸಹ ಬಳಲಿ ತಮ್ಮತಮ್ಮ ವಿಷಯ ಗಳನ್ನು ಬಿಟ್ಟು ಹಿಂತಿರುಗುತ್ತವೋ, ಆಗ್ಗೆ ಮನುಷ್ಯನು ನಿದ್ರೆಹೋಗುತ್ತಾನೆ. ಸುಖದುಃಖಗಳು,ಸ್ತೂಲಕ್ರುಶತೆಗಲು, ಬಲಾಬಲಗಳು, ವೃಷತ್ವ ನಪುಂಸಕತ್ವಗಳು, ಜ್ಞಾನಾಜ್ಞಾನಗಳು, ಜೀವಿತ ಮರಣಗಳು, ಸಹ ನಿದ್ರೆಯನ್ನು ಹೊಂದಿರುತ್ತವೆ. ಅಕಾಲದಲ್ಲಿ ನಿದ್ರೆಮಾಡುವದು, ಅತಿಯಾಗಿ ನಿದ್ರೆಮಾಡುವದು, ಮತ್ತು ನಿದ್ರೆಮಾಡದೆ ಇರುವದು, ಇವು, ಇನ್ನೊಂದು ಕಾಳರಾತ್ರಿ ಯಂತೆ, ಸುಖವನ್ನೂ, ಆಯುಸ್ಸನ್ನೂ ದೂರಮಾಡುವವು. ಆದರೆ, ಯೋಗಿಯಾದ ಪುರುಷ ನಿಗೆ ಪ್ರಾಪ್ತವಾದ ಬುದ್ದಿಯಿಂದ ಸಾಯುಜ್ಯಸಿದ್ದಿಯಾದಂತೆ, ಅದೇ ನಿದ್ರೆಯು ಯುಕ್ತವಾಗಿದ್ದಾಗ, ಅದರಿಂದ ದೇಹಕ್ಕೆ ಸುಖವೂ, ಆಯುಸ್ಬಂಸ್ಸೂ, ಬಂದು ಕೂಡುವವು,ಹಾದು, ಅಧ್ಯಯನ, ಮದ್ಯ, ಸ್ತ್ರೀ, ಕೆಲಸ, ಭಾರ, ದಾರಿ, ಇವುಗಳಿಂದ ಬಳಲಿದವರು, ಜೀರ್ಣವಿಲ್ಲ ದವರು, ಕ್ಷತರು, ಕ್ಷೀಣರು, ಮುದುಕರು, ಬಾಲರು, ಬಲಹೀನರು. ಬಾಯಾರಿಕೆ ಮತ್ತು ಅತಿ ಸಾರದ ಶೂಲೆ, ಇವುಗಳಿಂದ ಪೀಡಿತರಾದವರು, ಉಬ್ಬಸದವರು, ಶೂಲೆರೋಗವುಳ್ಳವರು, ಕೃಶರು, ಬಿದ್ದವರು, ಪೆಟ್ಟುತಾಗಿದವರು, ಉನ್ಮಾದರೋಗದವರು, ಯಾನದಿಂದ ಅಥವಾ ಜಾಗರಣದಿಂದ ಬಳಲಿದವರು, ಸಿಟ್ಟಿನಿಂದ ಅಥವಾ ಶೋಕದಿಂದ ಅಧವಾ ಭಯದಿಂದ ಆಯಾಸಪಟ್ಟವರು ಮತ್ತು ಹಗಲು ನಿದ್ರೆ ಯಾರಿಗೆ ಸಾತ್ಮ್ಯವೊ ಅವರು, ಇವರೆಲ್ಲಾ ಯಾವ ಕಾಲದಲ್ಲಿಯಾದರೂ ಹಗಲು ನಿದ್ರೆಯನ್ನು ಸೇವಿಸಬಹುದು. ಹಾಗೆ ಹಗಲು ನಿದ್ರೆ ಮಾಡುವದರಿಂದ ಅವರಿಗೆ, ಧಾತುಗಳು ಸಮವಾಗಿ, ಬಲವು ಕೂಡಿಬರುವದು; ಶ್ರೇಷ್ಟವು ಅಂಗಗಳನ್ನು ಪೋಷಣೆಮಾಡುವದು, ಮತ್ತು ಆಯುಸ್ಸಿನ ಸ್ಥಿರತ್ವ ಉಂಟಾಗುವದು. ರಾತ್ರಿಗಳು ಅತಿಸಂಕ್ಷೇಪವಾಗಿ, ವಾಯುವು ವೃದ್ದಿಯಾಗುತ್ತಾ, (ಉತ್ತರಾಯಣದ ಸೂರ್ಯನ) ಆದಾನದಿಂದ ಕಫ ಕಡಿಮೆಯಾಗಿ, ರೂಕ್ಷವಾದವರಿಗೆ, ಕಫಕರವಾದ ಹಗಲು ನಿದ್ರೆಯು ಪ್ರಶಸ್ತವಾದದ್ದಾಗಿರುತ್ತದೆ. ಗ್ರೀಷ್ಮಋತುವಲ್ಲದೆ ಇತರ ಕಾಲಗಳಲ್ಲಿ ಹಗಲು ನಿದ್ರೆಮಾಡುವದರಿಂದ ಕಫ ಮತ್ತು ಪಿತ್ತ ಪ್ರಕೋಪಪಡುತ್ತವಾದ್ದರಿಂದ, ಆ ಋತುಗಳಲ್ಲಿ ಹಗಲು ನಿದ್ರೆ ಹಿತ ವಲ್ಲ. ಮೇದಸ್ಸು ಹೆಚ್ಚುಳ್ಳವರೂ, ನಿತ್ಯದಲ್ಲೂ ಸ್ನೇಹ ಉಪಯೋಗಿಸುವವರೂ, ಕಫ ಹೆಚ್ಚಾಗಿರುವವರೂ, ಕಫರೋಗಿಗಳೂ, ದೂಷಿವಿಷಗಳಿಂದ ಪೀಡಿತರೂ, ಯಾವಾಗಲಾದರೂ ಹಗಲು ನಿದ್ರೆಮಾಡಬಾರದು. ಹಲೀಮಕರೋಗ, ತಲೆಶೂಲೆ, ಸ್ತೈಮಿತ್ಯ, ಶರೀರ ಭಾರವಾಗಿ ರೋಣ, ಅಂಗಗಳ ನೋವು, ಅಗ್ನಿಯಿಲ್ಲದೆ ಹೋಗೋಣ, ಹೃದಯದಲ್ಲಿ ಪ್ರಲೇಪ, ಶೋಫ, ಅರುಚಿ, ಬಿಕ್ಕಟ್ಟು, ಪೀನಸ, ಅರತಲೆ ಒಡೆಯುವದು, ಕೋಷ್ಠ, ಪಿಡಕ, ತುರಿಗಜ್ಜಿ, ತಂದ್ರಾ, ಕೆಮ್ಮು, ಗಂಟಲರೋಗಗಳು, ನೆನಪಿಲ್ಲದಿರುವದು, ಬುದ್ದಿವ್ಯತ್ಯಾಸ, ಸ್ರೊತಸ್ಸುಗಲ ತಡೆ, ಜ್ವರ, ಇಂದ್ರಿಯಗಳಿಗೆ ಸಾಮರ್ಧ್ಯವಿಲ್ಲದಿರೋಣ, ವಿಷವೇಗಪ್ರವೃತ್ತಿ, ಈ ದೋಷಗಳು ಅಹಿತವಾದ ಹಗಲು ನಿದ್ರೆಯನ್ನು ಸೇವಿಸುವ ಜನರಿಗೆ ಉಂಟಾಗುವವು. ಆದ್ದರಿಂದ ನಿದ್ರೆಯು ಹಿತವೋ ಅಹಿತವೋ ಎಂಬದನ್ನು ವಿಚಾರಬುದ್ದಿಯಿಂದ ತಿಳಿದು ಬುದ್ದಿವಂತನು ಸುಖವಾಗಿ ನಿದ್ರೆಮಾಡತಕ್ಕದ್ದು