ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XII -234-

೬.ನೀರಿನಲ್ಲಿ ವೀರ್ಯದೋಷ ಮತ್ತು ವಿಪಾಕದೋಷ

        ಯದುಪಯುಕ್ತಂ ತೃಷ್ಣಾ-ಗೌರವ-ಶೂಲ-ಕಫ-ಪ್ರಸೇಕಾನಾ 
        ಪಾದಯತಿ ಸ ವೀರ್ಯದೋಷಃ | ಯದುಪಯುಕ್ತಂ 
        ಚಿರಾದ್ವಿಪಚ್ಯತೇ ವಿಷ್ಟಭ್ನಾತಿ* ವಾ ಸ ವಿಪಾಕದೋಷ 
        ಇತಿ | ತ ಏತೇ ಅಂತರಿಕ್ಷೇ ನ ಸಂತಿ | (ಸು. 171.) 
 ಯಾವ ನೀರನ್ನು ಉಪಯೋಗಿಸಿದ್ದರಿಂದ, ಬಾಯಾರಿಕೆ, ಗುರುತ್ವ, ಶೂಲೆ, ಕಫ ಮತ್ತು ನೆಗಡಿ ಉಂಟಾಗುತ್ತವೋ, ಅದು ವೀರ್ಯದೋಷವುಳ್ಳದ್ದೆಂತಲೂ, ಯಾವ ನೀರು ಸೇವಿಸಲ್ಪಟ್ಟನಂತರ ಸಾವಕಾಶದಿಂದ ಜೀರ್ಣವಾಗುತ್ತದೋ, ಅಧವಾ ಜೀರ್ಣವಾಗದೆ ನಿಲ್ಲುತ್ತದೋ (ಅಧವಾ ತಡೆಯನ್ನುಂಟುಮಾಡುತ್ತದೋ), ಅದು ವಿಪಾಕದೋಷವುಳ್ಳದ್ದು ಎಂತಲೂ, ತಿಳಿಯ ಬೇಕು ಈ (ಸ್ಪರ್ಶಾದಿ ಆರು) ದೋಷಗಳು ಅಂತರಿಕ್ಷದ ನೀರಿನಲ್ಲಿರುವದಿಲ್ಲ

ಷರಾ * ವಿಷ್ಟಮ್ಭ ಯತಿ' ಎಂತಲೂ ಪಾರ ಊಂಟು


೭.ನೀರಿನ ಶೋಧನ ಕ್ರಮ

       ವ್ಯಾಪನ್ನಾನಾಮಗ್ನಿಕ್ವಧನಂ ಸೂರ್ಯಾತಪಪ್ರತಾಪನಂ ತಪ್ತಾಯ್ಯ.
       ಪಿಂಡಸಿಕತಾಲೋಷ್ಟ್ರಾಣಾಂ ವಾ ನಿರ್ವಾಪಣಂ ಪ್ರಸಾದನಂ ಚ ಕರ್ತ
       ವ್ಯಂ ನಾಗಚಂಪಕೋತ್ಪಲಪಾಟಲಾಪುಷ್ಪಪ್ರಭೃತಿಭಿಶ್ಚಾಧಿವಾಸನಮಿತಿ |
                                                        (ಸು. 171.) 
 
 ದೋಷಯುಕ್ತವಾದ ನೀರನ್ನು ಬೆಂಕಿಯಿಂದ ಕುದಿಸಿ, ಅಧವಾ ಸೂರ್ಯನ ಬಿಸಿಲಲ್ಲಿಟ್ಟು ಕಾಯಿಸಿ, ಅಧವಾ ಕಾಯಿಸಿದ ಕಬ್ಬಿಣದ ಗಟ್ಟಿಯನ್ನಾಗಲಿ, ಹೂಯಿಗೆಯನ್ನಾಗಲಿ ಮಣ್ಣಿನ ಗಟ್ಟಿಯನ್ನಾಗಲಿ ಅದರಲ್ಲಿ ಮುಳುಗಿಸಿ, ಹನಿಸಿಕೊಳ್ಳಬೇಕು, ಮತ್ತು ನಾಗ ಸಂಪಿಗೆ, ಸಂಪಿಗೆ, ನೆಲಸಂಪಿಗೆ, ಪಾದರಿ, ಈ ಹೂವುಗಳು ಮುಂತಾದವುಗಳಿಂದ ಅದಕ್ಕೆ ಪರಿಮಳ ಕೊಡಬೇಕು.

೮.ಒ೦ಪಾನಕ್ಕೆ ಪ್ರಶಸ್ತ ಪಾತ್ರಗಳು

       ಸೌವರ್ಣೇ ರಾಜತೇ ತಾಮ್ರೇ ಕಾಂಸ್ಯೇ ಮಣಿಮಯೇ ತಧಾ |
       ಪುಷ್ಪಾವತಂಸಂ ಭೌಮೇ ವಾ ಸುಗಂಧಿ ಸಲಿಲಂ ಪಿಬೇತ್ || 
       (ಸು. 171-72.) .
 ಹೂವಿನ ತೊಕ್ಕೆ (ಕಟ್ಟು) ಹಾಕಿ ಸುಗಂಧವಾದ ನೀರನ್ನು ಚಿನ್ನದ, ಅಧವಾ ಬೆಳ್ಳಿಯ, ಅಧವಾ ತಾಮ್ರದ, ಅಧವಾ ಕಂಚಿನ, ಅಧವಾ ರತ್ನದ ಕಲ್ಲಿನ, ಅಧವಾ ಮಣ್ಣಿನ, ಪಾತ್ರೆಯಲ್ಲಿ ಕುಡಿಯಬೇಕು

೯.ಅಶುದ್ಧ ಜಲ ಪಾನದ ದೋಷಗಳು

        ವ್ಯಾಪನ್ನಂ ವರ್ಜಯೇನ್ನಿತ್ಯಂ ತೋಯಂ ಯದ್ವಾಪ್ಯನಾರ್ತವಂ |
        ದೋಷಸಂಜನನಂ ಹ್ಯೇತನ್ಮಾದದೀತಾಹಿತಂ ತು ತತ್ || 
        ವ್ಯಾಪನ್ನಂ ಸಲಿಲಂ ಯಸ್ತು ಪಿಬತೀಹಾಪ್ರಸಾಧಿತಂ |
        ಶ್ವಯಧುಂ ಪಾಂಡುರೋಗಂ ಚ ತ್ವಗ್ದೋಷಮವಿಪಾಕತಾಂ || 
        ಶ್ವಾಸ-ಕಾಸ-ಪ್ರತಿಶ್ಯಾಯ-ಶೂಲ-ಗುಲ್ಮೋದರಾಣಿ ಚ |