ಈ ಗ್ರಂಥದಲ್ಲಿ ಉಪಯೋಗಿಸಲ್ಪಟ್ಟ ಸಂಕ್ಷಿಪ್ತ ಶಬ್ದಗಳ ವ್ಯಾಖ್ಯಾನ. ಅ. – ಅರುಣದತ್ತ ವಾಗ್ಭಟನ ಅಷ್ಟಾಂಗಹೃದಯಕ್ಕೆ ಸರ್ವಾಂಗಸುಂದರ ಎಂಬ ಪ್ರಸಿದ್ಧ ವಾದ ವ್ಯಾಖ್ಯಾನವನ್ನು ರಚಿಸಿದವರು. ಚ - ಚರಕಸಂಹಿತಾ ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ ವಿದ್ಯಾಸಾಗರ ಭಟ್ಟಾಚಾರ್ಯ ರಿಂದ 1896 ನೇ ಇಸವಿಯಲ್ಲಿ ಪ್ರಕಾಶಿತವಾದ 2ನೇ ಮುದ್ರಣದ ಪ್ರತಿಯ ಪುಟಗಳನ್ನು ಕಾಣಿಸಿಯದೆ ಚಿ. ನಾ ಸಂ.- ಚಿಕಿತ್ಸಾನಾರಸಂಗ್ರಹ (ಶ್ರೀ ವಂಗಸೇನಸಂಕಲಿತ) ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ ವಿದ್ಯಾಸಾಗರ ಭಟ್ಟಾಚಾರ್ಯರಿಂದ 189 3ನೇ ಇಸವಿಯಲ್ಲಿ ಪ್ರಕಾಶಿತವಾದ ಎರಡನೇ ಮುದ್ರಣದ ಪ್ರತಿಯ ಪುಟಗಳನ್ನು ಕಾಣಿಸಿಯದೆ. ಧ. – ಧನ್ವಂತರಿ, ಮುಂಬಯಿ ಲಕ್ಷ್ಮೀ ವೆಂಕಟೇಶ್ವರ' ಛಾಪಖಾನೆಯಲ್ಲಿ 1957ನೇ ಸಂವ ದ್'ದಲ್ಲಿ ಪ್ರಕಾಶಿತವಾದ ಮುದ್ರಣದ ಪ್ರತಿಯ ಪುಟಗಳನ್ನು ಕಾಣಿಸಿಯದೆ. ಧ ನಿ. - ಧನ್ವಂತರಿ ನಿಘಂಟು | ಪುನೆಯ ಆನಂದಾಶ್ರಮ ಮುದ್ರಾಲಯದಲ್ಲಿ ಶಾಲಿವಾಹನ ರಾ ನಿ. - ರಾಜನಿಘಂಟು ಶಕ ವರ್ಷ 1818ರಲ್ಲಿ ಪ್ರಕಾಶಿತವಾದ ರಾಜನಿಘಂಟು - ಸಹಿತ ಧನ್ವಂತರೀಯ ನಿಘಂಟು ಎಂಬ ಗ್ರಂಧದ ಪ್ರತಿಯ ಪುಟಗಳು ಕಾಣಿಸ ಲ್ಪಟ್ಟಿವೆ ನಾ. ಪ್ರ. - ನಾಡೀಜ್ಞಾನ ಪ್ರಕಾಶಿಕಾ ಕನ್ನಡ ಅರ್ಧಸಹಿತವಾಗಿ ಕನ್ನಡಾಕ್ಷರದಲ್ಲಿ (ಪ್ರಾಯಶಃ ಬೆಂಗಳೂರಲ್ಲಿ) ಛಾಪೆಯಾದ ಒಂದು ಹಳೇ ಪ್ರತಿಯ ಪುಟಗಳನ್ನು ಕಾಣಿಸಿಯದೆ - ಕಣಾದ ವಿರಚಿತವಾದ 'ನಾಡೀವಿಜ್ಞಾನ' ಎಂಬ ಗ್ರ೦ಧವನ್ನು ನಾನಾ ಭಾಷೆಗಳಲ್ಲಿ ಅರ್ಧ ಸಹಿತವಾಗಿ ನಾಮಭೇದದಿಂದ ಮುದ್ರಿಸಿರುವ ಹಾಗೆ ಕಾಣುತ್ತದೆ. ಅವುಗಳೊಳಗೆ ಅನೇಕ ಕಡೆಗಳಲ್ಲಿ ಒಂದಕ್ಕೊಂದು ಭಿನ್ನವಾಗಿ ಇದೆ. ಈ ಕನ್ನಡ ಪ್ರತಿಯಲ್ಲಿ ಅಶುದ್ಧತೆ ಬಹಳ ಉಂಟು ನಾಲ್ಕು ಪ್ರತಿ ಗಳನ್ನು ನೋಡಿ ಬೇಕಾದ ಶುದ್ಧವಾದಂಶಗಳನ್ನು ಇದರಲ್ಲಿ ಸೇರಿಸಿಯದೆ, ನಿ, ರ, ಅಧವಾ ನಿ. ರತ್ನಾಕರ. - ನಿಘಂಟು ರತ್ನಾಕರ, ಶ್ರೀ ವಿಷ್ಣು ವಾಸುದೇವ ಗೋಡ - ಬೋಲೆಯವರಿಂದ ಮುಂಬಯಿಯಲ್ಲಿ 1867ನೇ ಇಸವಿಯಲ್ಲಿ ಪ್ರಕಾಶಿತವಾದ ಮುದ್ರಣದ ಪ್ರತಿಯು ಉಪಯೋಗಿಸಲ್ಪಟ್ಟಿದೆ. ನಿ. ಸಂ. ವ್ಯಾ, ಅಧವಾ ನಿ. ಸಂ.- ನಿಬಂಧಸಂಗ್ರಹ ವ್ಯಾಖ್ಯಾನ. ಇದು ಸುಶ್ರುತಕ್ಕೆ ಡಲ್ಲಣಾಚಾರ್ಯರಿಂದ ರಚಿಸಲ್ಪಟ್ಟ ಪ್ರಸಿದ್ದವಾದ ಪುರಾತನದ ವ್ಯಾಖ್ಯಾನ. (ನಿರ್ಣಯಸಾಗರ' ಮುದ್ರಾ ಯಂತ್ರಾಲಯದಲ್ಲಿ 1915ನೇ ಇಸವಿಯಲ್ಲಿ ಮುದ್ರಿತವಾದ ಪ್ರತಿಯನ್ನು ಉಪಯೋಗಿಸಿದ್ದಾಗಿರುತ್ತದೆ.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.