ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಉ ಪೋದ್ಯಾತ 1. 'ಆಯುಃ' ಅಂದರೆ ಬದುಕಿರುವದು, ಜೀವಿತ. ಜೀವಿತದ ಸುಖದುಃಖಗಳನ್ನೂ, ಹಿತಾಹಿತಗಳನ್ನೂ, ಕಾಲಪರಿಮಿತಿಗಳನ್ನೂ, ವೃದ್ದಿಕ್ಷಯಗಳಿಗೆ ಹೇತುಗಳಾದ ದ್ರವ್ಯಾದಿಗಳ ಗುಣಕರ್ಮಗಳನ್ನೂ ತಿಳಿಸುವಂಥಾದ್ದು 'ಆಯುರ್ವೇದ'. ಋಗ್ಯಜುಸ್ಸಾಮಾಧರ್ವವೇದಗ ಳೊಂದಿಗೆ ವೈದ್ಯಕವಾದ ಆಯುರ್ವೇದ ಎಂಬ ಐದನೇ ವೇದವು ಬ್ರಹ್ಮನ ಮುಖದಿಂದ ಉದ್ಭವ ವಾಯಿತೆಂತ ಗೂಢಬೋಧವು ಹೇಳುತ್ತದಾಗಿ ಶಬ್ದ ಕಲ್ಪದ್ರುಮದಿಂದ ಕಂಡುಬರುತ್ತದೆ ಆದರೆ ಚರಕ ಸುಶ್ರುತ ಮುಂತಾದ ವೈದ್ಯಗ್ರಂಧಗಳಲ್ಲಿ ಆಯುರ್ವೇದವು ಅಥರ್ವವೇದದೊಳಗೆ ಅಡಗಿದ್ದೆಂತಲೇ ಹೇಳಲ್ಪಟ್ಟಿದೆ ಅಧರ್ವದಲ್ಲಿ ಜನರ ಇಷ್ಟಪ್ರಾಪ್ತಿಕರವಾದ ಸ್ವಸ್ಯಯನ. ಬಲಿ- ಮಂಗಲಹೋಮ-ನಿಯಮ-ಪ್ರಾಯಶ್ಚಿತ-ಉಪವಾಸ-ಮಂತ್ರ ಮುಂತಾದವುಗಳ ಉಪ ದೇಶಗಳೊಂದಿಗೆ ಆಯುರ್ವೃದ್ಧಿಕರವಾದ ಕೆಲವು ರಸಾಯನದ್ರವ್ಯಗಳ ಉಪಯೋಗವೂ, ರೋಗಪರಿಹಾರಕರವಾದ ಕೆಲವು ಔಷಧಗಳ ಯೋಗಗಳೂ ಉಕ್ತವಾಗಿವೆಯಲ್ಲದೆ, ರೋಗ ಗಳ ನಿದಾನ-ಪೂರ್ವರೂಪ-ಲಿಂಗ-ಉಪಶಯ ಮುಂತಾದ ವಿವರಗಳಿಂದ ಕೂಡಿದ ಕ್ರಮವಾದ ಚಿಕಿತ್ಸೆಯು ಯಾವ ವೇದದಲ್ಲಿಯಾದರೂ ಕಾಣುತ್ತದೆಂತ ಎಣಿಸಬಾರದು. ಜನ್ಮವು ಅನಾದಿಯಾದ್ದರಿಂದ, ಅದಕ್ಕನುಬಂಧಗಳಾದ ಸುಖದುಃಖ, ಹಿತಾಹಿತ, ಇವುಗಳ ಕಾರಣ, ದುಃಖಾಹಿತಗಳ ಪರಿಹಾರ, ಮತ್ತು ಇವುಗಳ ಜ್ಞಾನಸಂಗ್ರಹವಾದ ಆಯುರ್ವೇದ ಸಹ ಅನಾದಿ. ಆಯುರ್ವೇದವಿಲ್ಲದಿದ್ದ ಕಾಲವಿಲ್ಲ. ಆದರೆ ಕಾಲಪರಿಣಾಮದಿಂದ ಲೋಕದಲ್ಲಿ ಆಯುರ್ವೇದದ ಜ್ಞಾನವು ಕೆಲವು ಸಮಯಗಳಲ್ಲಿ ಮಂದವಾದದ್ದು ಮತ್ತು ಪುನಃ ಉದ್ದರಿಸಲ್ಪಟ್ಟಿದ್ದು ಶ್ರುತವಾಗಿದೆ. ಹೀಗೆ, ಆಯುರ್ವೇದಜ್ಞಾನವು ಮಲಿನವಾಗಿ, ಜನಗಳು ಪಡುವ ಸಂಕಷ್ಟಗಳನ್ನು ತಿಳಿದು, ಮಹಾಶೇಷನು ಒಬ್ಬ ಮುನಿಪುತ್ರನಾಗಿ ಅವತರಿಸಿ, ಪುನರ್ವಸು ವಿನ ಶಿಷ್ಯರೋಳಗೊಬ್ಬನಾದ ಅಗ್ನಿವೇಶನು ರಚಿಸಿದ್ದ ವೈದ್ಧತಂತ್ರವನ್ನು ಪರಿಷ್ಕರಿಸಿ, ಚರಕ ಸಂಹಿತಾ ಎಂಬ ಗ್ರಂಧವನ್ನು ರಚಿಸಿದನೆಂತಲೂ, ಇನ್ನೊಂದು ಕಾಲದಲ್ಲಿ ಧನ್ವಂತರಿಯು ಇಂದ್ರನಿಂದ ವೈದ್ಯೋಪದೇಶವನ್ನು ಪಡೆದು, ಕಾಶಿಯಲ್ಲಿ ದಿವೋದಾಸನೆಂಬ ಹೆಸರಿನಿಂದ ಒನಿಸಿ, ಅರಸನಾದ ಮೇಲೆ ತಪಸ್ವಿಯಾಗಿ, ವಿಶ್ವಾಮಿತ್ರನ ಮಗನಾದ ಸುಶ್ರುತ ಮುಂತಾದ ಶಿಷ್ಯರುಗಳಿಗೆ ಆಯುರ್ವೇದವನ್ನು ಉಪದೇಶಮಾಡಿದ ಪ್ರಕಾರ, ಆ ಸುಶ್ರುತನು 'ಸುಶ್ರುತ ಎಂಬ ಗ್ರಂಥವನ್ನು ರಚಿಸಿದನೆಂತಲೂ, ಇತಿಹಾಸವಿರುತ್ತದೆ 2 ಅಥರ್ವವೇದದ ಉಪಾಂಗವಾದ ಆಯುರ್ವೇದವನ್ನು ಬ್ರಹ್ಮನು ಪ್ರಜೆಗಳನ್ನು ಸೃಷ್ಟಿಸುವದಕ್ಕೆ ಮೊದಲೇ ಸಹಸ್ರ ಅಧ್ಯಾಯಗಳಾಗಿ ಒಂದು ಲಕ್ಷ ಶ್ಲೋಕಗಳಿಂದ ರಚಿಸಿದ ನೆಂತಲೂ, ಆ ಮೇಲೆ ಮನುಷ್ಯರು ಅಲ್ಪಾಯುಸ್ಸುಳ್ಳವರೂ ಅಲ್ಪಬುದ್ದಿಯವರೂ ಆಗಿರು ವದನ್ನು ಆಲೋಚಿಸಿ, ಎರಡನೇ ಅದನ್ನು ಶಲ್ಯ, ಶಾಲಾಕ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭೃತ್ಯ, ಅಗದತಂತ್ರ, ರಸಾಯನತಂತ್ರ ಮತ್ತು ವಾಜೀಕರಣತಂತ್ರ, ಎಂಬ ಅಷ್ಟಾಂಗಗಳಾಗಿ ವಿಭಾಗಿಸಿ, ಗ್ರಂಧಗಳನ್ನು ರಚಿಸಿದನೆಂತಲೂ, ಸುಶ್ರುತಸಂಹಿತೆಯಲ್ಲಿ ಹೇಳ