- 291 - ೬ XV] ವಿರೋಧವುಳ್ಳವರನ್ನೂ, ಉನ್ಮತ್ತರಾದವರನ್ನೂ, ಪತಿತ (ಧರ್ಮಭ್ರಷ್ಟ)ರನ್ನೂ ಸಣ್ಣ ಮನುಷ್ಯ ರನ್ನೂ, ನೀಚವಾದ ಆಚಾರವುಳ್ಳವರನ್ನೂ ಪೂಜಿಸಬಾರದು (ಹೊಂದಿರಬಾರದು). 4. ಸರ್ವಪ್ರಾಣಿಷು ಬಂಧುಭೂತಃ ಸ್ಯಾತ ಕ್ರುದ್ದಾನಾಮನುನೇತಾ ಕೆಲವು ಸೀತಾನಾಮಾಶ್ವಾಸಯಿತಾ ದೀನಾನಾಮಭ್ಯು ಸತ್ತಾ ಸತ್ಯಸಂಧ ನಡವಳಿಕೆಗಳು ಸಾಮಪ್ರಧಾನಃ ಪರಪರುಷವಚನಸಹಿಷ್ಣು ಅಮರ್ಷಪ್ಪ ಪ್ರಶಮ ಗುಣರ್ದ ! ರಾಗದ್ವೇಷಹೇತೂನಾಂ ಹಂತಾ ! (ಚ 46.) ಸರ್ವಪ್ರಾಣಿಗಳಲ್ಲಿಯೂ ಬಂಧುಭಾವವುಳ್ಳವನಾಗಿಯೂ, ಸಿಟ್ಟುಗೊಂಡವರಿಗೆ ಸಮಾ ಧಾನ ಮಾಡುವವನಾಗಿಯೂ, ಭಯಪಟ್ಟವರಿಗೆ ಧೈರ್ಯಕೊಡುವವನಾಗಿಯೂ, ಬಡವರಿಗೆ ಸಹಾಯಕನಾಗಿಯೂ, ಸತ್ಯಸಂಧನಾಗಿಯೂ, ಸಾಮಗುಣವನ್ನು ಪ್ರಧಾನವಾಗಿಟ್ಟುಕೊಂಡವ ನಾಗಿಯೂ, ಅನ್ಯರ ಕ್ರೂರ ಮಾತುಗಳನ್ನು ಸಹಿಸುವವನಾಗಿಯೂ, ಸಿಟ್ಟನ್ನು ತಾಳಿಕೊಳ್ಳು ವವನಾಗಿಯೂ, ಶಾಂತಗುಣಪ್ರದರ್ಶಕನಾಗಿಯೂ, ಮೋಹದ ಮತ್ತು ದ್ವೇಷದ ಹತ್ತು ವನ್ನು ನಾಶಮಾಡುವವನಾಗಿಯೂ ಇರತಕ್ಕದ್ದು ೪ ೧ 5 ನಾನ್ಯಸ್ತಮಾದದ್ಯಾತ | ನಾನಸ್ತಿಯಮಭಿಲಷೇತ್ | ನಾನ್ಶಿಯಂ ನ ವೈರಂ ರೋಚಯೇತ್ | ನ ಕುರ್ಯಾತಾಪಂ ನ ಸಾಪೇsಪಿ ಪಾಪೀ ಪಾಪ ಬು ತ್ಯಾಗ " ಸ್ಯಾತ್ | ನಾನ್ಯದೋಷಾನ್ ಪ್ರೀಯಾತ್ | ನಾನ್ಯರಹಸ್ಯ ಮಾಗಮ ಯೇತ್ | (ಚ 46 ) ಇನ್ನೊಬ್ಬನ ಸೊತ್ತನ್ನು ಅಪಹರಿಸಬಾರದು, ಇನ್ನೊಬ್ಬನ ಹಂಗಸಿನ ಅಭಿಲಾಷ ಮಾಡ ಬಾರದು, ಇನ್ನೊಬ್ಬನ ಸಂಪತ್ತಿನಲ್ಲಿ ಯಾಗಲಿ, ವೈರದಲ್ಲಿಯಾಗಲಿ, ರುಚಿಯನ್ನುಂಟುಮಾಡ ಬಾರದು, ಪಾಪವನ್ನು ಮಾಡಬಾರದು, ಪಾಪಿಯ ವಿಷಯದಲ್ಲಿ ಸಹ ಪಾಪಿಯಾಗಬಾರದು, ಇನ್ನೊಬ್ಬನ ದೋಷಗಳನ್ನು ಹೇಳಬಾರದು ಮತ್ತು ಇನ್ನೊಬ್ಬನ ಗುಟ್ಟನ್ನು ತಿಳಿಯಲು ಪ್ರಯತ್ನಿಸಬಾರದು. 6 ನ ಚಾನುಸಮಂ ಕರಿನಮಾಸನ ಮಧ್ಯಾತೀತ | ನಾನಾಸ್ತೀರ್ಣಮನುಷ ಆಸನ ಹಿತಮವಿಶಾಲಮಸಮಂ ವಾ ಶಯನಂ ಪ್ರಪದ್ಯೆತ | (ಚ. 46.) ಶಯನಗಳು ಮೊಣಗಂಟಿನ ಎತ್ತರದ ಕಠಿಣವಾದ ಆಸನದ ಮೇಲೆ ಕೂತುಕೊಳ್ಳಬಾರದು; ವಸ್ತ್ರ ಹಾಸದ, ತಲೆಗಿಂಬಿಲ್ಲದ, ವಿಶಾಲವಲ್ಲದ, ಮತ್ತು ಎತ್ತರತಗ್ಗುಳ್ಳ, ಹಾಸಿಗೆಯನ್ನು ಉಪ ಯೋಗಿಸಬಾರದು ಅಳ್ವಾಸನ 7. ನಾಲ್ಪ ಕಾಷ್ಠಾಸನಮಧ್ಯಾತ | (ಸು. 508 ) ಅಲ್ಪವಾದ (ಅಬಲಿಯಾದ) ಮರನ ಆಸನದ ಮೇಲೆ ಕೂತುಕೊಳ್ಳಬಾರದು. 37*
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.