ಈ ಪುಟವನ್ನು ಪರಿಶೀಲಿಸಲಾಗಿದೆ

ಅ XVI

                  - 298 -

24. ಅನ್ಯರು ಧರಿಸಿದ ಮಾ ಲಾದಿಗಳು ತ್ಯಾಜ್ಯ

     ಸ್ರಜಂ ಛತ್ರೋಪಾನಹೌ ಕನಕಮತೀತವಾಸಾಂಸಿ ನ ಚಾನ್ಯೈಧೃ೯                                     
      ತಾನಿ ಧಾರಯೇತ್ | (ಸು.509.)                           
             

ಹೂವಿನ ಮಾಲೆ, ಕೊಡೆ, ಪಾದರಕ್ಷೆ, ಚಿನ್ನಾಭರಣ, ಹಳೆ ವಸ್ತ್ರ, ಸಹ ಅನ್ಯರಿಂದ ಧರಿಸಲ್ಪಟ್ಟದ್ದನ್ನು ಧರಿಸಬಾರದು ಷರಾ ಅನ್ಯರು ಧರಿಸಿದ ವಸ್ತ್ರವನ್ನು ತೊಳಕೊಂಡು ಸಹ ಉಪಯೋಗಿಸಬಾರದಾಗಿ ಸಿ ಸಂ ವ್ಯಾ. 25. ಧಮ೯ಪರನಾಗಬೇಕು

   ಸುಖಾರ್ಧಾಃ ಸರ್ವಭೂತಾನಾಂ ಮತಾಃ ಸರ್ವಾಃ ಪ್ರವೃತ್ತಯಃ |  ಸುಖಂ ಚ ನ ವಿನಾ ಧರ್ಮಾತ್ತಸ್ಮಾದ್ದರ್ಮಪರೋಭವೇತ್ || (ವಾ. 6.)

ಸರ್ವ ಪ್ರಾಣಿಗಳ ಸರ್ವ ಪ್ರವರ್ತನೆಗಳು ಸುಖಪ್ರಾಪ್ತಿಗೋಸ್ಕರ, ಅಂಧಾ ಸುಖವು ಧರ್ಮ ವಿನಾ ದೊರಯಲಾರದು, ಆದದರಿಂದ ಜನರು ಧರ್ಮರತರಾಗಿ ಇರತಕ್ಕದ್ದು.

   26    ಹತ್ತು ವಿಧವಾದ ಪಾಪತ್ಯಾಗ                               
                              ಹಿಂಸಾಸ್ತೇಯಾನ್ಯಧಾಕಾಮಂ ಪೈಶುನ್ಯಂ ಪರುಷಾನೃತೇ |      

ಸಂಭಿನ್ನಾಲಾಪವ್ಯಾಪಾದಮಭಿಧ್ಯಾದೃಗ್ವಿಪರ್ಯಯಮ್ || ಪಾಪಂ ಕರ್ಮೇತಿ ದಶಧಾ ಕಾಯವಾಬಾನಸೈಜೇತ್ | (ವಾ. 6.)

                                          ಹಿಂಸೆ, ಕಳ್ಳತನ, ವ್ಯಭಿಚಾರ (ಇವು 3 ಕಾಯಿಕ ಪಾಪಗಳು),ಚಾಡಿ, ನಿಷ್ಠುರ, ಸುಳ್ಳು, ಅಸಂಬದ್ಧ ಮಾತು (ಇವು 4 ವಾಕ್ಕಿನ ಪಾಪಗಳು), ದ್ರೋಹಚಿಂತನೆ, ಅಸೂಯೆ, ವಿಪರೀತ ಬುದ್ಧಿ (ನಾಸ್ತಿಕ್ಯಾದಿ), (ಇವು 3 ಮಾನಸಿಕ ಪಾಪಗಳು) ಎಂಬ ಹತ್ತು ವಿಧವಾದ ಪಾಪ ವನ್ನು ಕಾಯವಾಚ್ಮನಸ್ಸುಗಳಿಂದ ಬಿಡತಕ್ಕದ್ದು.

27. ಆತ್ಮವತ್ಕೀಟಪಿಪೀಲಿಕಮ್

   ಆತ್ಮವತ್ ಸತತಂ ಪಶ್ಯೇದಪಿ ಕೀಟಪಿಪೀಲಿಕಮ್ |               
                            (ವಾ, 7)                                     ಒಂದು ಹುಳವನ್ನಾದರೂ ಅಥವಾ ಒಂದು ಇರುವೆಯನ್ನಾದರೂ ತನ್ನ ಹಾಗಿನದೆಂತ ಸದಾ ನೋಡ (ಭಾವಿಸಿಕೊಂಡಿರ) ಬೇಕು.

28. ಉಪಕಾರಪ್ರಧಾನನಾಗಬೇಕು

     ಉಪಕಾರಪ್ರಧಾನಃ ಸ್ಯಾದಪಕಾರಪರೇsಷ್ಯರೌ ||       
                             (ವಾ, 7.)                             ಅಪಕಾರಪರನಾದ ಶತ್ರುವಿಗೆ ಸಹ ಉಪಕಾರ ಮಾಡುವ ಬುದ್ಧಿಯುಳ್ಳವನಾಗಬೇಕು.

29. ಲೋಕವನ್ನನುಸರಿಸು ಆಚಾರ್ಯಃ ಸರ್ವಚೇಷ್ಟಾಸು ಲೋಕ ಏವ ಹಿ ಧೀಮತಃ | ಅನುಕುರ್ಯಾತ್ತಮೇವಾತೋ ಲೌಕಿಕೇsರ್ಧೇ ಪರೀಕ್ಷಕಃ || (ವಾ. 8.) ಬುದ್ದಿವಂತನಿಗೆ ಸರ್ವ ವ್ಯವಹಾರಗಳಲ್ಲಿಯೂ ಲೋಕವೇ ಗುರುವಾದದ್ದರಿಂದ, ಲೌಕಿಕ ಪುರುಷಾರ್ಧದಲ್ಲಿ ಲೋಕವನ್ನು (ಜನಸಮುದಾಯವನ್ನು) ಸರಿಯಾಗಿ ನೋಡಿಕೊಂಡು ಅನುಸರಿಸತಕ್ಕದ್ದು.