YXXV111
ಉಪೋದ್ಘಾತ
ಅದನ್ನು ಜನರು ಓದುವದು ಕಡಿಮೆಯಾಗಿತ್ತೆಂಬದು ಅದರಲ್ಲಿಯ ಈ ಕೆಳಗಣ ಶ್ಲೋಕದಿಂದ ತಿಳಿದುಬರುತ್ತದೆ -
ಋಷಿಪ್ರಣೀತೇ ಪ್ರೀತಿಶ್ಚೇನ್ಮುಕ್ತ್ವಾ ಚರಕಸುಶ್ರುತೌ | ಭೇಡಾದ್ಯಾಃ ಕಿಂ ನ ಪರ್‍ಯಂತೇ ತಸ್ಮಾದ್ಗ್ರಾ ಹ್ಯಂ ಸುಭಾಷಿತಮ್ ||
ಅಂದರೆ 'ಋಷಿಪ್ರಣೀತವಾದ ತಂತ್ರದಲ್ಲಿಯೇ ಜನರಿಗೆ ಪ್ರೀತಿಯಂತಾದರೆ, ಚರಕ ಸುಶ್ರುತಗಳಲ್ಲದೆ ಭೇಳಾದ್ಯರ ತಂತ್ರಗಳನ್ನು ಅವರು ಯಾಕೆ ಓದುವದಿಲ್ಲ? ಆದ್ದರಿಂದ ಸುಭಾಷಿತವಾದದ್ದು ಯಾರದೇಯಾದರೂ ಗ್ರಾಹ್ಯವಾಗಿರುತ್ತದೆ' ಹಾರೀತಸಂಹಿತಾ ಮುಂತಾದ ಅನೇಕ ಪುರಾತನಗ್ರಂಧಗಳು ಹಸ್ತಲಿಖಿತವಾಗಿ ಇತ್ತಲಾಗಿನ ವರೆಗೆ ಅಪರೂಪವಾಗಿ ದೊರೆಯುತಿದ್ದವು ಎಂಬದು ವೈದ್ಯಸಾರಸಂಗ್ರಹದ ಈ ಕೆಳಗಣವಾಕ್ಯದಿಂದ ಕಾಣುತ್ತದೆ- “ಶ್ರೀಮನ್ಮಹೀ ಶೂರ ಮಹಾರಾಜರವರ ಸೇನಾಪತಿಯಾಗಿದ್ದ ನಂಜರಾಜೇ ಅರಸಿನವರು ಸಕಲ ಜನೋಪ ಕಾರದೃಷ್ಟಿಯಿಂದ ಆಯುರ್ವೇದ, ಧನ್ವಂತರೀಯ, ಹಾರೀತಸಂಹಿತಾ, ಕಾಶ್ಯಪಸಂಹಿತಾ, ಬಾಹಟ, ಭಗೀರಧಸಂಹಿತಾ, ಮಹಾಯಾನಸಂಹಿತಾ, ಕುಮಾರಸಂಹಿತಾ, ಹಿರಣ್ಯಕೇಶೀಯ, ಅಗ್ನಿವರ್ಮ, ಋಷ್ಯಶೃಂಗಸಂಹಿತಾ, ನಾರಾಯಣೀಯ, ಭರದ್ವಾಜಸಂಹಿತಾ, ಆತ್ರೇಯಸಂಹಿತಾ, ವೃದ್ದಾತ್ರೇಯಸಂಹಿತಾ, ವೈದ್ಯಕಲ್ಪತರು, ಸಿದ್ಧತಂತ್ರ, ಸಿದ್ಧಸಾರ, ಭೋಜರಾಜೀಯ, ಅಗ್ನಿವೇಶೀಯ, ಚಿಕಿತ್ಸಾಮೃತ, ನಿತ್ಯನಾಧ, ಪ್ರಯೋಗಾಮೃತ, ಸಿದ್ದಪ್ರಯೋಗ, ವೈದ್ಯಸಂಗ್ರಹ, ಯೋಗಾಮೃತ, ಮಹಾಸಾರ, ಭಷಘೃಷ್ಟಿ, ಚಂದ್ರಿಕಾ, ಕಾಂಚೀನಾಧ, ಶಾರ್ಖ್ಗಧರ, ಸುಶ್ರುತ, ಶತಶ್ಲೋಕಿ, ಲೋಲಂಬರಾಜೀಯ, ಪ್ರಯೋಗಸಾರ, ಶಬರಸಂಹಿತೆ, ಮೊದಲಾದ ಇನ್ನೂ ಅನೇಕ ಪೂರ್ವಗ್ರಂಧಗಳನ್ನು ಸಂಗ್ರಹಿಸಿ, ಸಕಲ ವೈದ್ಯಗ್ರಂಧ ಸಾರ ಪ್ರತಿಪಾದಕವಾದ ವೈದ್ಯಸಾರ ಸಂಗ್ರಹವೆಂಬ ಈ ಗ್ರಂಧವನ್ನು ರಚಿಸಿದರು” ಮೇಲಿನ ಪಟ್ಟಿಯಲ್ಲಿ ಉದಾಹೃತವಾದ ಕೆಲವು ಗ್ರಂಧಗಳಿಗಿಂತ ಹೆಚ್ಚು ಗುಣವತ್ತಾಗಿ ಪ್ರಸಿದ್ದವಾಗಿರುವ ವೃದ್ದವಾಗ್ಭಟ, ಮಾಧವನಿದಾನ, ರಸಾರ್ಣವ, ರಸಸಮುಚ್ಚಯ, ರಸೇಂದ್ರಚಿಂತಾಮಣಿ, ರಸರತ್ನಾಕರ, ಭಾವಪ್ರಕಾಶ, ಚಿಕಿತ್ಸಾಸಾರಸಂಗ್ರಹ, ಮುಂತಾದ ಅನೇಕ ಪುರಾತನ ಗ್ರಂಧಗಳು ಪ್ರಕಟವಾಗಿವ ಇನ್ನು ಸಂಸ್ಕೃತದಲ್ಲಿಯೂ, ಬೇರೆ ಬೇರೆ ದೇಶಭಾಷ ಗಳಲ್ಲಿಯೂ, ರಚಿಸಲ್ಪಟ್ಟಿರುವ ಅರ್ವಾಚೀನ ಗ್ರಂಧಗಳು ಅಸಂಖ್ಯಾತವಾಗಿವ. ಆದರ,
ನಿದಾನೇ ಮಾಧವಃ ಶ್ರೇಷ್ಠಃ ಸೂತ್ರಸ್ಥಾನೇ ತು ವಾಗ್ಭಟಃ | ಶಾರೀರೇ ಸುಶ್ರುತಃ ಪ್ರೋಕ್ತಶ್ಚರಕಸ್ತು ಚಿಕಿತ್ಸಿತೇ ||
ಅಂದರೆ “ರೋಗದ ನಿದಾನದ ವಿಷಯದಲ್ಲಿ ಮಾಧವ, ಸೂತ್ರಸ್ಥಾನದಲ್ಲಿ ವಾಗ್ಭಟ, ಶಾರೀರದಲ್ಲಿ ಸುಶ್ರುತ, ಮತ್ತು ಚಿಕಿತ್ಸೆಯಲ್ಲಿ ಚರಕ, ಶ್ರೇಷ್ಠ” ಈ ಅಭಿಪ್ರಾಯ ಆ ನಾಲ್ಕು ಗ್ರಂಧಗಳು ಪ್ರಕಟವಾದ ಕಾಲದಿಂದ ಈ ವರೆಗೂ ಅಂಗೀಕೃತವಾಗಿದೆ. ಆ ಗ್ರಂಧಗಳ ಅರಬಿಯಲ್ಲಿ ಮಾಡಲ್ಪಟ್ಟ ಭಾಷಾಂತರಪ್ರತಿಗಳು ಕ್ರಿಸ್ತಶಕದ 8ನೇ ಶತಮಾನದಲ್ಲಿ ಅರಬಿಸ್ಥಾನದ ಮುಖ್ಯ ಪಟ್ಣವಾದ ಬಾಗ್ದಾದಿನಲ್ಲಿ ಸ್ಥಾಪಿತವಾದ ರಾಜರ ಪುಸ್ತಕಾಲಯದಲ್ಲಿ ಇದ್ದವು ಎಂಬದು ನಿರ್ಣೀತವಾಗಿದೆ.
4. ಚರಕ ಮತ್ತು ಸುಶ್ರುತ ಸಂಹಿತೆಗಳು ಬಹಳ ದೊಡ್ಡ ಗ್ರಂಧಗಳಾಗಿ, (ಛಾಪಖಾನೆಯಿಲ್ಲದ ಕಾಲದಲ್ಲಿ) ಅವುಗಳನ್ನು ಸಂಗ್ರಹಿಸಿ ಕಲಿಯುವದು ಸಾಮಾನ್ಯ ಜನರಿಗೆ ಅತಿ