ಈ ಪುಟವನ್ನು ಪರಿಶೀಲಿಸಲಾಗಿಲ್ಲ.
---313--- ಅXVII.
ಪಿತ್ತಪ್ರಕೋಪದಲ್ಲಿ ಮೂತ್ರವು ಸ್ವಚ್ಛ ಮತ್ತು ಅರಸಿನವಾಗುವುದು. ಸಮಧಾತುವಿನ ಮೂತ್ರವು ಬಾವಿಯ ನೀರಿಗೆ ಸದೃಶವಾಗಿರುತ್ತದೆಂತ ಹೇಳುತ್ತಾರೆ. ಮೂತ್ರದ ಮೇಲಿನಂಶ ನೀಲವಾಗಿ ಅಡಿಯಂಶ ಕೆಂಪಾಗಿದ್ದರೆ , ಅದು ರಕ್ತದೋಷದಿಂದ ಎಂತ ತಿಳಿಯಬೇಕು. ಮೂತ್ರವು ಸ್ನಿಗ್ದವಾಗಿಯೂ, ತೈಲಸಮವಾದ ಪ್ರಭೆಯುಳ್ಳದ್ದಾಗಿಯ ಹೋಗುತ್ತಿದ್ದರೆ, ಅಂಧವನ ಹೊಟ್ಟೆಯು ಆಹಾರದಿಂದ ವೃದ್ಧಿಯನ್ನು ಹೊಂದುತ್ತದೆ ಮೂತ್ರ ಮೇಲಿನ ಭಾಗವು ಅರಸಿನವಾಗಿ ಅಡಿಭಾಗವು ಕೆಂಪಾಗಿದ್ದರೆ, ಆ ರೋಗಿಗೆ ಪಿತ್ತಪ್ರಕೃತಿಯಿಂದ ಹುಟ್ಟಿದ ಸನ್ನಿಪಾತ ಎಂದು ವೈದ್ಯನು ಹೇಳಬೇಕು. ಮೂತ್ರವು ಕಬ್ಬಿನ ರಸದ ಹಾಗೆ ಇದ್ದು, ಕಣ್ಣು ಕೆಂಪು ಮಿಶ್ರ ಅರಸಿನವಾಗಿದ್ದರೆ, ಆ ರೋಗಿಗೆ ರಸವು ಅಧಿಕವಾಗಿದೆ ಎಂದು ತಿಳಿದು, ಲಂಘನ ವನ್ನು ವಿಧಿಸತಕ್ಕದ್ದು. ಕೆಂಪಾಗಿ ಸ್ವಚ್ಛವಾಗಿರುವ ಮೂತ್ರವು ಅಧಿಕವಾದ ಜ್ವರದ ಲಕ್ಷಣ; ಹಾಗೆಯೇ, ಹೊಗೆಬಣ್ಣದ ಮೂತ್ರ ಸಹ ಜ್ವರಾಧಿಕ್ಯದ ಲಕ್ಷಣವೆಂತ ತಿಳಿಯಬೇಕು. ಕಪ್ಪಾಗಿ ಸ್ವಚ್ಛವಾದ ಮೂತ್ರವು ಸನ್ನಿಪಾತ ಜ್ವರದ ಲಕ್ಷಣ. ಮೂತ್ರದ ಮೇಲಿನ ಭಾಗವು ಅರಸಿನವಾಗಿ, ಅಡಿಭಾಗವು ಕಪ್ಪಾಗಿ, ಗುಳ್ಳೆಗಳುಳ್ಳದ್ದಾಗಿದ್ದರೆ, ಅದು ಅತಿಯಾಗಿ ಬೆಳೆದ' ದೋಷದ ಲಕ್ಷಣವೆನ್ನುವದರಲ್ಲಿ ಸಂಶಯವಿಲ್ಲ. ನಿರಾಮಜ್ವರದಲ್ಲಿ ಮೂತ್ರವು ಕರ ಕಬ್ಬಿನ ಹಾಲಿಗೆ ಸದೃಶವಾಗಿ, (ಪಿತ್ತದಲ್ಲಿ) ಸ್ವಲ್ಪ ಅರಸಿನವಾಗಿಯೂ, (ಕಫದಲ್ಲಿ) ನೊರೆಯುಕ್ತವಾ ಗಿಯೂ, (ವಾತದಲ್ಲಿ ) ಕೆಂಪೊತ್ತಿದ ಕಪ್ಪಾಗಿಯೂ, ಇರುವದು. ತೈಲಬಿಂದುವ ಸರಿಯಾಗಿ ಪಸರಿಸಿದರೆ ಕ್ಷೇಮವಾಗುತ್ತದೆನ್ನಬೇಕು ಬಿಂದುವಾಗಿಯೇ ನಿಂತರೇ, ರೋಗಿಯ ಚಿಕಿತ್ಸೆಯು ಅಸಾಧ್ಯವಾಗುವದೆಂತ ತಿಳಿಯಬೇಕು . ತೈಲಬಿಂದುವು ಪೂರ್ವದಿಕ್ಕಿಗೆ, ಪಶ್ಚಿಮಕ್ಕೆ, ಅಧವಾ ಉತ್ತರಕ್ಕೆ, ಪಸರಿಸಿದರೆ ರೋಗಿಗೆ ರೋಗದಿಂದ ವಿಮೋಚನೆಯಾಗುತ್ತದೆಂದು ಹೇಳಬೇಕು. * 'ಪ್ರಭೂತದೋಷೇಣ' ಎಂಬಲ್ಲಿ (ಪ್ರಸೂತದೋಷೇಣ' ಎಂತ ಪಾರಾಂತರ ಕಾಣುತ್ತದೆ ಆಗ್ಗೆ 'ಪ್ರಸೂತಿಯ ದೋಷ' ಎಂತ ಅರ್ಥದಲ್ಲಿ ಓದಿಕೊಳ್ಳಬೇಕಾಗುತ್ತದೆ (9) ನಿಮಜ್ಜತಿ ಯದಾ ಮೂತ್ರೇ ಭ್ರಮದ್ವಾ ನೈವ ಸರ್ಪತಿ | ತದಾರಿಷ್ಟಂ ವಿಜಾನೀಯಾದ್ರೋಗಿಣೋ ನಾತ್ರ ಸಂಶಯಃ || (ಚಿ. ಸಾ. ಸಂ.1028 ) ಯಾವಾಗ ತೈಲಬಿಂದುವು ಮೂತ್ರದಲ್ಲಿ ಮುಳುಗುತ್ತದೋ, ಅಥವಾ ತಿರುಗುವದಲ್ಲದೆ ಪಸರಿಸುವದಿಲ್ಲವೋ, ಆಗ್ಗೆ ಆ ರೋಗಿಗೆ ನಿಃಸಂಶಯವಾಗಿ ಅನಿಷ್ಟ ಸಂಭವಿಸುತ್ತದೆಂದು ತಿಳಿಯಬೇಕು. (h) ವಾತಪಿತ್ತ ಕಫಮೇಹಸಮುತ್ಥಂ ಮೂತ್ರಮಗ್ನಿಕೃಧಿತಂಪರಿಪಾಕಾತ್ | ಪಂಚ-ಸಪ್ತ-ನವ-ಭಾಗತಃ ಕ್ರಮಾತ್ಕಲ್ಕಮುದ್ಭವತಿ ಚೇತ್ತ ದಸಾಧ್ಯಂ || ( ವೈದ್ಯಚಿಂತಾಮಣಿ.) ಮೇಹರೋಗದಲ್ಲಿ ಮೂತ್ರವನ್ನು ಬೆಂಕಿಯಿಂದ ಕುದಿಸಿ ಬತ್ತಿಸಿದ್ದಲ್ಲಿ, ವಾತಮೇಹವಾದರೆ 5ನೇ ಅಂಶ, ಪಿತ್ತಮೇಹವಾದರೆ 7ನೇ ಅಂಶ, ಕಫಮೇಹವಾದರೆ 9 ನೇ ಅಂಶ, (ಇಷ್ಟು ಅಧವಾ ಇದಕ್ಕೆ ಹೆಚ್ಚಾಗಿ,) ಮಡ್ದು ಉಂಟಾದರೆ, ರೋಗವು ಅಸಾಧ್ಯವೆಂದು ತಿಳಿಯಬೇಕು.
40