ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XVII 338

   18ರ ವರೆಗೆ ವ್ಯತ್ಯಾಸ ಪಡುತ್ತದೆ. ಈ ಕ್ರಮಕ್ಕೆ ಹೆಚ್ಚಾಗಿ ಅಥವಾ ಕಡಿಮೆಯಾಗಿ ಶ್ವಾಸ
   ಬಿಡುವ ಜನರು ವ್ಯಾಧಿಯಿಲ್ಲದೆ ಇರುವದುಂಟಾದರೂ, (12ರಿಂದ 24ರ ವರೆಗೆ ಇರುವ 
  ದುಂಟು) ಪ್ರಾಯಶಃ ಆ ವ್ಯತಿರೇಕವು ರೋಗಸೂಚಕವೆಂದು ತಿಳಿಯಬಹುದು.  ಹೆಚ್ಚಾ 
  ಗಿದ್ದರೆ ಫುಪ್ಪುಸವ್ಯಾಧಿ, ಅಧವಾ   ಫುಪ್ಪುಸಕ್ಕೆ ಬಾಧಿಸುವ ಬೇರೆ ವ್ಯಾಧಿ, ಕಮ್ಮಿಯಾಗಿದ್ದರೆ 
  ಧಾತುಕ್ಷೀಣತೆ  ಅಧವಾ  ನರಗಳ  ಮಂದತೆ,   ಬಹುಶಃ   ಇರುವದು.   ಎರಡು   ವರ್ಷ
  ಪ್ರಾಯದ ವರೆಗಿನ ಮಗು ಮಿನಿಟಿಗೆ 35 ಸರ್ತಿ, ಅನಂತರ 9 ವರ್ಷ   ಪ್ರಾಯದ ವರೆಗಿನ 
  ಬಾಲಕನು   ನಿದ್ರೆಯಲ್ಲಿ   18   ಸರ್ತಿ   ಎಚ್ಚರಿಕೆಯಲ್ಲಿ   23   ಸರ್ತಿ,  ಆ ಮೇಲೆ 15 ವರ್ಷ 
  ಪ್ರಾಯದ ವರೆಗಿನವರು  ನಿದ್ರೆಯಲ್ಲಿ 18 ಸರ್ತಿ, ಎಚ್ಚರಿಕೆಯಲ್ಲಿ 20 ಸರ್ತಿ ಶ್ವಾಸ ಬಿಡುವರು;
  ಹೀಗೆ   ಮಕ್ಕಳಲ್ಲಿ  ಶ್ವಾಸದ ಸಂಖ್ಯೆಯು ಹೆಚ್ಚಿರುವದಲ್ಲದೆ, ಹೊಟ್ಟೆಯ   ಮಾಂಸಖಂಡಗಳ 
  ಚಲನೆಯೂ   ಹೆಚ್ಚಾಗಿರುವದು.
         ಹೆಂಗಸಿನ ಶ್ವಾಸಸಂಖ್ಯೆಯು ಗಂಡಸಿನದಕ್ಕಿಂತ ಹೆಚ್ಚಾಗಿರುವದು.
        ನಾಡಿಯ 4 ಅಧವಾ 4.5 ಬಡತಗಳಿಗೆ 1ಕ್ಕಿಂತ ಹೆಚ್ಚು ಶ್ವಾಸವಿರುವಲ್ಲಿ, ಶ್ವಾಸಕೋಶ 
     ದಲ್ಲಿ ಯಾವದಾದರೊಂದು ವ್ಯಾಧಿ ಉಂಟಾಗಿದೆಯಂತ ತಿಳಿಯಬಹುದು. ಅಂಧಾ ಸಂಗತಿ 
    ಯಲ್ಲಿ ಶ್ವಾಸಸಂಖ್ಯೆಯು ಮಿನಿಟಿಗೆ ಅನೇಕ ಸರ್ತಿ 40-50ರ   ವರೆಗೆ,    ಕೆಲವು   ಸರ್ತಿ 
    GO-80ರ ವರೆಗೆ ಏರಿ, 5 ನಾಡಿ ಬಡತಗಳಿಗೆ 4 ಶ್ಯಾಸದಂತೆ ಆಗುವದುಂಟು.
    
    27.        ಸ್ವಸ್ಥಸ್ಥಿತಿಯಲ್ಲಿ    ಸಾಧಾರಣವಾಗಿ    ಮಲಪ್ರವೃತ್ತಿಯು 24   ತಾಸುಗಳಲ್ಲಿ    ಒಮ್ಮೆ
  ಆಗುವದು.  ಪ್ರಕೃತ್ಯನುಸಾರವಾಗಿ   ಕೆಲವರಿಗೆ   ದಿನಕ್ಕೆ  ಎರಡಾವರ್ತಿ, ಕೆಲವರಿಗೆ ಎರಡು ದಿನ 
  ಪಾಶ್ಚಾತ್ಯಾ ರೀತ್ಯಾ  ಗಳಲ್ಲಿ  ಒಮ್ಮೆ,  ಮಲಪ್ರವೃತ್ತಿಯಾಗುವ  ಕ್ರಮವು   ಸೌಖ್ಯದಲ್ಲಿಯೂ  ಇರು 
  ಮಲಪರೀಕ್ಷೆ    ವದುಂಟು   ಮಕ್ಕಳಲ್ಲಿ   ಮಲಪ್ರವೃತ್ತಿಯ   ಸರ್ತಿಗಳು   ಹೆಚ್ಚಿರುವವು.    ಚಿಕ್ಕ 
 ಕೂಸುಗಳು  24 ತಾಸುಗಳಲ್ಲಿ  3 -4 ಸರ್ತಿ  ಹೇಲುವದು     ಸುಖಸ್ಥಿತಿಯನ್ನಬಹುದು.    ಮಲ 
 ಪ್ರವೃತ್ತಿಯ   ಮೇಲೆ   ರೋಗವಿಚಾರಮಾಡುವಲ್ಲಿ,  ರೋಗಿಯು  ಭುಂಜಿಸಿದ  ಆಹಾರದ  ಗುಣ 
 ಮತ್ತು   ಪ್ರಮಾಣವನ್ನೂ, ಅವನು   ಹೊಂದಿದ   ದೇಹಾಯಾಸವನ್ನೂ,  ತಿಳಿದು   ಆಲೋಚಿಸ 
 ತಕ್ಕದ್ದು. ಭುಂಜಿಸಿದ ಆಹಾರವು ಅಲ್ಪವಾಗಿ, ಮಡ್ಡುಬಿಡದೆ ದೇಹಕ್ಕೆ  ವ್ಯಾಪಿಸತಕ್ಕೆ  ಸ್ವಭಾವ 
 ದ್ದಾದರೆ,  ಮಲವು   ಕಡಿಮೆಯಾಗಿ,   ಪ್ರವೃತ್ತಿಯ   ಸರ್ತಿಯು  ಕಡಿಮೆಯಾಗುವದು ಸಹಜ. 
 ದೇಹಾಯಾಸಕರವಾದ  ಉದ್ಯೋಗ  ಇಲ್ಲದಿದ್ದರೂ ಹಾಗೆ  ಆಗುವದುಂಟು. 3-4   ದಿನಗಳ 
 ಮಲಬದ್ಧತೆಯು ರೋಗಲಕ್ಷಣವಂದು ತಿಳಿಯಬೇಕು. ಆದರೆ ಕೆಲವರು 6-7 ದಿನಗಳ  ವರೆಗೆ 
 ಮಲ ಹೋಗದೆ ಇದ್ದರೂ, ಅದು   ತನ್ನ   ಪ್ರಕೃತಿಯೆಂತ   ತಿಳಕೊಳ್ಳುವವರಿದ್ದಾರೆ.  ಮಲ
 ಪರೀಕ್ಷೆಯಲ್ಲಿ ಮಲವು ತೆಳ್ಳಗೋ, ಗಟ್ಟಿಯೋ, ಹೆಂಟೆಯಾಗಿದ್ದರೆ, ಅದರ ಆಕಾರವು   ಕರುಳಿ 
 ನಂತೆ ದುಂಡಾಗಿದೆಯೋ, ಅಧವಾ ಚಟ್ಟಿಯಾಗಿದೆಯೋ, ಸಪೂರವೋ, ತೋರವೋ, ಬಿಕ್ಕುವ 
 ದಿದ್ದರೆ, ಮಲ   ಗಟ್ಟಿಯಾಗಿ   ಹೊರಗೆ  ಹಾಕಲಿಕ್ಕೆ   ಪ್ರಯಾಸವಾದದ್ದರಿಂದಲೋ,  ಅಧವಾ 
 ಆಮದ ದೆಸೆಯಿಂದಲೋ, ವರ್ಣವು ಕೆಪ್ಪೋ,  ಅರಸಿನವೋ,   ಬೆಳ್ಳಗೋ,  ಕೆಂಪೋ, ಹಸುರೋ, 
 ವೇದನೆ ಇದ್ದರೆ, ಅದು ಯಾವ ಕಾರಣದ್ದು ಎಂಬದನ್ನು ಆಲೋಚಿಸಬೇಕು. ಕಪ್ಪು ವರ್ಣವು 
 ರಕ್ತ ಮಿಶ್ರವಾದದ್ದರಿಂದಲೂ, ಕಬ್ಬಿಣ ಇತ್ಯಾದಿ ಔಷಧಗಳಿಂದಲೂ, ಮಸಿ ಇತ್ಯಾದಿ ತಿಂದದ