ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಉಪೋದ್ಘಾತ

                                     XLI

ಹೇಳಿ, ಆ ಶಾಸ್ತ್ರವು ಹ್ಯಾಗಿರಬೇಕೆಂದು, ಅನಂತರ ಅದೇ ರೀತಿ ಗುರುಪರೀಕ್ಷೆ, ಅಂಥಹ ಗುರುವಿನ ಹತ್ತಿರ ಶಿಷ್ಯನು ಹ್ಯಾಗೆ ನಡಕೊಳ್ಳಬೇಕೆಂಬದು, ಕಲಿತ ಶಾಸ್ತ್ರಜ್ಞಾನವನ್ನು ದೃಢಪಡಿಸುವುದಕ್ಕೆ ಉಪಾಯವಾದ ಅಧ್ಯಯನ, ಅಧ್ಯಾಪನ, ಮತ್ತು ಆ ವಿದ್ಯೆಗೆ ಸಂಬಂಧಪಟ್ಟ ಸಂಭಾಷಣ, ಇವಗಳ ಕ್ರಮ, ಅಧ್ಯಾಪನಾರಂಭದಲ್ಲಿ ಉಪನಯನರೂಪವಾದ ಹೋಮದ ಕ್ರಮ, ಶಿಷ್ಯನಲ್ಲಿರಬೇಕಾದ ಗುಣಗಳು, ನಿಯಮಗಳು ಮತ್ತು ಆಚಾರಗಳು. ಆ ಕುರಿತು ಶಿಷ್ಯನಿಗೆ ಅನುಜ್ಞೆಗಳು, ಸಂಭಾಷಣೆಯಲ್ಲಿ ವಿಶ್ವಾಸವುಳ್ಳವರ ಕೂಡೆ ಮತ್ತು ಸಭೆಯಲ್ಲಿ ಎಂಬ ಭೇದ, ಸಭಾಲಕ್ಷಣ, ತರ್ಕದ ರೀತಿ, ತರ್ಕದಲ್ಲಿ ಉಪಯೋಗಿಸಲ್ಪಡುವ ವಾದ, ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯು, ಪ್ರತಿಜ್ಞಾ, ಸ್ಥಾಪನಾ, ಪ್ರತಿಷ್ಠಾಪನಾ, ಹೇತು, ಉಪನಯ, ನಿಗಮನ, ಉತ್ತರ, ದೃಷ್ಟಾಂತ, ಸಿದ್ದಾಂತ, ಶಬ್ದ, ಪ್ರತ್ಯಕ್ಷ, ಅನುಮಾನ, ಔಪಮ್ಯ, ಐತಿಹ್ಯ, ಸಂಶಯ, ಪ್ರಯೋಜನ, ಸವ್ಯಭಿಚಾರ, ಜಿಜ್ಞಾಸಾ, ವ್ಯವಸಾಯ, ಅರ್ಧ ಪ್ರಾಪ್ತಿ, ಸಂಭವ, ಅನುಯೋಜ್ಯ, ಅನನುಯೋಜ್ಯ, ಅನುಯೋಗ, ಪ್ರತ್ಯನುಯೋಗ, ವಾಕ್ಯದೋಷ, ವಾಕ್ಯಪ್ರಶಂಸಾ, ಛಲ, ಅಹೇತು, ಅತೀತಕಾಲ, ಉಪಾಲಂಭ, ಪರಿಹಾರ, ಪ್ರತಿಜ್ಞಾಹಾನಿ, ಅಧ್ಯನುಜ್ಞಾ, ಹೇತ್ವಂತರ, ಅರ್ಧಾಂತರ, ನಿಗ್ರಹಸ್ಥಾನ ಎಂಬ ಪದಗಳ ಉದಾಹರಣ ಪುರಸ್ಸರವಾದ ವ್ಯಾಖ್ಯಾನ, ಅನಂತರ ಆಯುರ್ವೇದವಾದದ ಕೆಲವು ಪ್ರಕರಣಗಳು, ಈ ಪ್ರಕರಣಗಳೊಳಗೆ ಶರೀರದ ಪ್ರಕೃತಿಭೇದಗಳು, ವಿಕೃತಿ, ಬಲವರ್ಣಾದಿಗಳು, ಶರೀರದ ಅಂಗ ಗಳ ಪ್ರಮಾಣಗಳು, ಶಕ್ತಿಭೇದಗಳು, ಆಯುಃಪ್ರಮಾಣ, ಸಂವತ್ಸರ, ಅಯನಾದಿಕಾಲ ವಿಭಾಗಗಳು, ಋತುಚರ್ಯ, ವಮನವಿರೇಚನದ್ರವ್ಯಗಳ ಪಟ್ಟಿಗಳು, ಆಸ್ಥಾಪನಾದ್ರವ್ಯಗಳ ಷಡ್ರಸಗಳ ವಿಭಾಗದಿಂದ ಪಟ್ಟಿಗಳು, ಇತ್ಯಾದಿ ಬಹು ವಿಧವಾದ ಪ್ರಸ್ತಾಪಗಳು ಮುದ್ರಾಕ್ಷರಗಳ 33 ಪುಟಗಳಲ್ಲಿ ಇವೆ.ಇಂಥಾ ಪ್ರಸಂಗಗಳು ಸುಶ್ರುತಸಂಹಿತೆಯಲ್ಲಿ ಕಾಣಬಾರವು. ಮೂರನೇ ಕಾರಣವಾಗಿ ಹೇಳಲ್ಪಡುವ ವಾಕ್ಯಗಳ ಮತ್ತು ಪದಗಳ ರಚನಾರೀತಿಯ ಭೇದವೆಂಬುದು ಸ್ಪಷ್ಟವಾಗಿಲ್ಲ. ಚರಕಸಂಹಿತೆಯುಂಟಾಗಿ ಎಷ್ಟೋ ಕಾಲದನಂತರ ಸುಶ್ರುತಸಂಹಿತೆ ರಚಿತವಾದ್ದೆಂಬದಕ್ಕೆ ವಿರೋಧವಾಗಿ ಆಲೋಚಿಸಬಹುದಾದ ಕೆಲವು ವಿಷಯಗಳು ಯಾವವೆಂದರೆ -

  • (1) ವಾಗ್ಭಟಾದಿ ಅನಂತರದ ಗ್ರಂಥಗಳಲ್ಲಿ ಕಾಣುವ ಪ್ರಕಾರ ಸುಶ್ರುತಸಂಹಿತೆಯಲ್ಲಿ ಚರಕಸಂಹಿತೆಯ ಹೆಸರು ಇಲ್ಲ.

(2) ಎಲುಬುಗಳ ಸಂಖ್ಯೆಯು ಚರಕನ ಪ್ರಕಾರ 360, ಸುಶ್ರುತನ ಪ್ರಕಾರ 300 ಮಾತ್ರ ಈ ಸಂಖ್ಯೆಯನ್ನು ಹೇಳುವಾಗ ಸುಶ್ರುತನು 'ತ್ರೀಣಿ ಸಷಷ್ಟೀನ್ಯಸ್ಧಿಶತಾನಿ ವೇದವಾದಿ ನೋ ಭಾಷನ್ತೇ | ಶಲ್ಯತನ್ತ್ರೇ ತು ತ್ರೀಣ್ಯೇವ ಶತಾನಿ' | ಅಂದರೆ - ವೇದವಾದಿಗಳು 360 ಎಲುಬುಗಳೆಂತ ಹೇಳುತ್ತಾರೆ, ಆದರೆ ಶಲ್ಯತಂತ್ರ ಪ್ರಕಾರ ಮುನ್ನೂರೇ ಎಂತ ಬರದಿದ್ದಾನೆ. ಇಲ್ಲಿ ವೇದವಾದಿಗಳೆಂಬ ಸಾಮಾನ್ಯಪಕ್ಷವೇ ಹೇಳಲ್ಪಟ್ಟಿದ್ದಲ್ಲದೆ, ಚರಕನ ಹೆಸರು ಕಾಣುವುದಿಲ್ಲ. (3) ವಿಪಾಕದ ವಿಷಯದಲ್ಲಿ ಸುಶ್ರುತನು.- " ಆಗಮೇ ಹಿ ದ್ವಿವಿಧ ಏವ ಪಾಕೋ ಮಧುರಃ ಕಟುಕಶ್ಚಃ” ಶಾಸ್ತ್ರದಲ್ಲಿ ಪಾಕವು ಸೀ ಮತ್ತು ಖಾರ ಎಂಬ ಎರಡೇ ವಿಧ ಎಂತ,

                                   6 A