ಈ ಪುಟವನ್ನು ಪರಿಶೀಲಿಸಲಾಗಿದೆ
- 341 - ಅxvii
ವಾತರೋಗಿಯಲ್ಲಿ ಬಾಕು, ಚರ್ಮನಿರ್ಜೀವವಾಗಿರುವದು, ಒಡಕು, ನಡುಕು, ಹೊಟ್ಟೆಯುಬ್ಬರ, ಸಂಕಟಕರವಾದ ನೋವು, ಈ ಲಕ್ಷಣಗಳು ಕಂಡರೆ, ಆ ಮನುಷ್ಯನು ಬದುಕಲಾರನು. ಷರಾ ಅವು ಯಾಪೃಲಕ್ಷಣಗಳಂತ ವಾ ಪ್ರ (ಪ 420) 3. ಪ್ರಮೇಹದಲ್ಲಿ ಅಶುಭಸೂಚನೆ ಯಧೋಕ್ತೋಪದ್ರವಾವಿಷ್ಟ ಮತಿಪ್ರಸ್ರುತಮೇವ ವಾ | ಪಿಡಕಾಪೀಡಿತಂ ಗಾಢಂ ಪ್ರಮೇಹೋ ಹಂತಿ ಮಾನವಂ || (ಸು. 122.) ಪ್ರಮೇಹವ್ಯಾಧಿಗೆ ಉಕ್ತವಾದ ಉಪದ್ರವಗಳೂ, ಅಥವಾ ಅತಿಯಾಗಿ ಮೂತ್ರಹೋಗು ತ್ತಿರೋಣ, ಅಥವಾ ಕಠಿಣವಾದ ಪಿಡಕಗಳು, ಇವುಗಳು ಸೇರಿದರೆ ಪ್ರಮೇಹವುಳ್ಳ ಮನು ಷ್ಯನು ಬದುಕಲಾರನು ಷರಾ 'ವಾ'ದ ಸ್ಥಾನದಲ್ಲಿ ಚ' ಧ ಪ್ರ ದಲ್ಲಿ ಕಾಣುತ್ತದೆ ಆ ಪಾರಪ್ರಕಾರ, ಮೂರು ವಿಧವಾದ ದೋಷ ಗಳೆಲ್ಲಾ ಕೂಡಿರುವದು ಮರಣಸೂಚಕ ಎಂತ ಆರ್ದವಾಗುತ್ತದ 4. ಕುಷ್ಠದಲ್ಲಿ ಅಶುಭಸೂಚನೆ ಪ್ರಭಿನ್ನಂ ಪ್ರಸ್ತುತಾಂಗಂ ಚ ರಕ್ತನೇತ್ರ ಹತಸ್ವರಂ || ಪಂಚಕರ್ಮಗುಣಾತೀತಂ ಕುಷ್ಠಂ ಹಂತೀಹ ಕುಟ್ಟಿನಂ || (ಸು. 129 ) ಅಂಗಗಳು ಹಚ್ಚಾಗಿ ಒಡದು ಸುರಿಯುತ್ತಿರುವದು, ಕಣ್ಣುಗಳು
ರಕ್ತವರ್ಣವಾಗಿರುವದು, ಸ್ವರ ಬಿದ್ದಿರುವದು, ಮತ್ತು (ವಮನಾದಿ) ಪಂಚಕರ್ಮಗಳು ನಿಷ್ಪ್ರಯೋಜನವಾಗಿರುವದು. ಈ ಲಕ್ಷಣಗಳುಳ್ಳ ಕುಷ್ಠ ರೋಗಿಯು ಆ ರೋಗದಿಂದ ಸಾಯುವನು.
5. ಅರ್ಶಸ್ಸಿನಲ್ಲಿ ಅಶುಭಸೂಚನೆ ತೃಷ್ಣಾ ರೋಚಕಶೂಲಾರ್ತ ಮತಿಪ್ರಸ್ತುತಶೋಣಿತಂ | ಶೋಫಾತಿಸಾರಸಂಯುಕ್ತಮರ್ಶೋ ವ್ಯಾಧಿರ್ವಿನಾಶಯೇತ್ || (ಸು 123.) ಬಾಯಾರಿಕೆ, ಅರುಚಿ, ಶೂಲೆ, ಅತಿಯಾಗಿ ರಕ್ತ ಸ್ರವಿಸೋಣ, ಶೋಫ, ಅತಿಸಾರ, ಈ ಲಕ್ಷಣಗಳುಳ್ಳವನನ್ನು ಮೂಲವ್ಯಾಧಿಯು ಕೊಲ್ಲುವದು.
6. ಭಗಂದರದಲ್ಲಿ ಅಶುಭಸೂಚನೆ ವಾತಮೂತ್ರಪುರೀಷಾಣಿ ಕ್ರಿಮಯಃ ಶುಕ್ರಮೇವ ಚ | ಭಗಂದರಾತ್ ಪ್ರಸ್ರವಂತಿ ಯಸ್ಯ ತಂ ಪರಿವರ್ಜಯೇತ್ || (ಸು 123 ) ಭಗಂದರವ್ರಣದಿಂದ ವಾಯು, ಮೂತ್ರ, ಮಲ, ಕ್ರಿಮಿಗಳು, ಶುಕ್ರ, ಇವ್ರ ಸ್ರವಿಸು ತ್ತಿದ್ದರೆ, ಆ ರೋಗಿಯ ಚಿಕಿತ್ಸೆ ನಿಷ್ಪಯೋಜನವೆಂದರಿಯುವದು. 7. ಆಶ್ಮರಿಯಲ್ಲಿ ಅಶುಭಸೂಚನೆ ಪ್ರಶೂನನಾಭಿವೃಷಣಂ ರುದ್ಧಮೂತ್ರಂ ರುಗನ್ವಿತಂ || ಅಶ್ಮರೀ ಕ್ಷಪಯತ್ಯಾಶು ಸಿಕತಾಶರ್ಕರಾನ್ವಿತಾ || (ಸು. 123.) ಹೊಕ್ಕುಳು ಮತ್ತು ಅಂಡ ಹೆಚ್ಚಾಗಿ ಬಾತಿರುವದು, ಮೂತ್ರ ಒದ್ದವಾಗಿರುವದು, ನೋವು ಕೂಡಿರುವದು ಮಳಲಿನ ಹಾಗಿನ ಕಾಳುಗಳು ಸವಿಸುತ್ತಿರುವದು, ಈ ಲಕ್ಷಣ ಗಳುಳ್ಳವನನ್ನು ಅಶ್ಮರೀವ್ಯಾಧಿಯು ಬೇಗನೇ ಕೊಲ್ಲುವದು.