- 347 - XIXನೇ ಅಧ್ಯಾಯ. ಚಿಕಿತ್ಕಪಕ್ರಮ 1. ಭಿಷಕ್ ದ್ರವ್ಯಾಣ್ಯುಪಸ್ದಾತಾ ರೋಗೀ ಪಾದಚತುಷ್ಟಯಂ | ಗುಣವತ್ಕಾರಣಂ ಜ್ಞೇಯಂ ವಿಕಾರವ್ಯಪಶಾಂತಯೇ | ಚಿಕಿತ್ಸೆಯ ನಾಲ್ಕುಪಾದಗಳು ವಿಕಾರೋ ಧಾತುವೃಷಮ್ಯಂ ಸಾಮ್ಯಂ ಪ್ರಕೃತಿರುಚ್ಯತೇ | ಸುಖಸಂಜ್ಞಕಮಾರೋಗ್ಯಂ ವಿಕಾರೋ ದುಃಖಮೇವ ಚ | ಚತುರ್ಣಾ೦ ಭೀಷಗಾದೀನಾಂ ಶಸ್ತಾನಾಂ ಧಾತುವೈಕೃತೇ | ಪ್ರವೃತ್ತಿರ್ಧಾತುಸಾಮ್ಯಾರ್ಧಾ ಚಿಕಿತ್ಸೇತ್ಯಭಿಧೀಯತೇ || (ಚ 50.) ವೈದ್ಯ, ಔಷಧಗಳು, ಪರಿಚಾರಕ, ರೋಗಿ, ಈ ನಾಲ್ಕು ಪಾದಗಳು ವಿಕಾರಗಳ ಉಪ ಶಾಂತಿಗೆ ಬಲವಾದ ಕಾರಣಗಳೆಂತ ತಿಳಿಯಬೇಕು ವಾತಾದಿ ದೋಷಗಳ ವಿಷಮಸ್ಥಿತಿಯು ವಿಕಾರ; ಅವುಗಳು ಸಮವಾಗಿರುವದು ಸ್ವಸ್ಥ ಸ್ಥಿತಿ, ಆರೋಗ್ಯ ಎಂಬದು ಸುಖದ ಸಂಜ್ಞೆ, ಮತ್ತು ವಿಕಾರ ಎಂಬದು ದುಃಖವೇ, ಧಾತುಗಳು ವಿಕಾರ ಹೊಂದಿದಾಗ್ಗೆ ಅವುಗಳನ್ನು ಸಮಮಾಡುವ ಉದ್ದಿಶ್ಯ ಮಾಡಲ್ಪಡುವ ಪ್ರಶಸ್ತವಾದ ವೈದ್ಯ ಮೊದಲಾದ ನಾಲ್ಕು ಅಂಗಗಳ ಪ್ರವರ್ತನೆಗೆ ಚಿಕಿತ್ಸೆ ಎನ್ನುತ್ತಾರ. 2. ಪಕ್ತೌ ಹಿ ಕಾರಣಂ ಪಕ್ತುಯ೯ಧಾ ಪಾತ್ರೇಂಧನಾನಲಾಃ | ಸಿದ್ದಿಗೆ ನಾಲ್ಕು ವಿಜೇತುರ್ವಿಜಯೇ ಭೂಮಿಶ್ವಮೂಃ ಪ್ರಹರಣಾನಿ ಚ || ಪಾದಗಳ ಆವ ಆತುರಾದ್ಧಾಸ್ತಧಾ ಸಿದ್ಧೌ ಪಾದಾಃ ಕಾರಣಸಂಜ್ಞೆತಾಃ | ವೈದ್ಯಸ್ಯಾತಶ್ಚಿಕಿತ್ಸಾಯಾಂ ಪ್ರಧಾನಂ ಕಾರಣಂ ಭಿಷಕ್ || (ಚ. 50.) ಅಡಿಗೆಮಾಡುವವನಿಗೆ ಪಾಕಮಾಡುವದಕ್ಕೆ ಪಾತ್ರಗಳು, ಕಟ್ಟಿಗೆ ಮತ್ತು ಬೆಂಕಿ ಮತ್ತು ಯುದ್ಧದಲ್ಲಿ ಜಯಿಸಲಪೇಕ್ಷಿಸುವವನಿಗೆ ಭೂಮಿ, ಸೇನೆ ಮತ್ತು ಆಯುಧಗಳು ಹ್ಯಾಗೆ ಅಗತ್ಯ ಕಾರಣಗಳೋ, ಹಾಗೆಯೇ ವೈದ್ಯನಿಗೆ ಸಿದ್ದಿಯಾಗುವದಕ್ಕೆ ರೋಗಿ ಮೊದಲಾದ ಮೂರು ಪಾದಗಳು ಅಗತ್ಯವಾದ ಕಾರಣಗಳು. ಆದ್ದರಿಂದ, ಚಿಕಿತ್ಸೆಯಲ್ಲಿ ಪ್ರಧಾನ ಕಾರಣ ವೈದ್ಯನಾಗಿರುತ್ತಾನೆ. 3. ಗುಣವದ್ಭಿಸ್ತ್ರಿಭಿಃ ಪಾದೈಶ್ಚತುರ್ಥೋ ಗುಣವಾನ್ ಭಿಷಕ್ | ಪ್ರಶಸ್ತ ಪಾದಗಳ ವ್ಯಾಧಿಮಿನ ಕಾಲೇನ ಮಹಾಂತಮಪಿ ಸಾಧಯೇತ್ || (ಸು 125.) ಪ್ರಯೋಜನ ನಾಲ್ಕನೇ ಪಾದವಾದ ಗುಣಾಢ್ಯ ವೈದ್ಯನು, ಇತರ ಮೂರು ಪಾದಗಳು ಗುಣಕರವಾಗಿದ್ದರೆ, ವ್ಯಾಧಿಯು ಮಹತ್ತಾಗಿದ್ದರೂ, ಅಲ್ಪಕಾಲದಲ್ಲಿಯೇ ಅದನ್ನು ಸಾಧಿಸಲು ಶಕ್ತನಾಗುತ್ತಾನೆ.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.