ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅ. XIX
- 352 - ಷರಾ ಈ ಆಧಾರದ ಮೇಲೆ ಬೃಹತ್ಪಂಚಮೂಲಾದಿಗಳ ಬೇರಿನ ತಿರುಳನ್ನೇ ಕೆಲವರು ಉಪಯೋಗಿಸುತ್ತಾರೆ ಆದರೆ ಶತಾವರಿಯ ಒಳಗಿನ ಕಟ್ಟಿಗೆಯನ್ನು ಉಪಯೋಗಿಸುವದಿಲ್ಲ. ಶುಂಠಿ, ಬೆಳ್ಳುಳ್ಳಿ ಮತ್ತು ಅಮೃತಬಳ್ಳಿಯಲ್ಲಿ ಕಾಷ್ಠವಿಲ್ಲ. ಆದ್ದರಿಂದ ಇದು 18ನೆ ಸಂ ಯ ಸೂತ್ರಕ್ಕೆ ಅಪವಾದವಾಗಿ ಎಣಿಸಲಿಕ್ಕೆ ಕಾರಣವಿಲ್ಲ.
20. ವಲ್ಮೀಕಕುತ್ಸಿತಾನೂಪಶ್ಮಶಾನೋಷರಮಾರ್ಗಚಾಃ | ಪ್ರಶಸ್ತವಲ್ಲದ ಜಂತುವಹ್ನಿಹಿಮವ್ಯಾಪ್ತಾ ನೋಷಧ್ಯಃ ಕಾರ್ಯಸಾಧಕಾಃ || ಔಷಧಗಳ ಲಕ್ಷಣ (ಭಾ. ಪ್ರ. 69.) ಹುತ್ತ, ಕೊಳಕು, ಕೆಸರು, ಶ್ಮಶಾನ, ಊಷರಸ್ಥಳ (ಉಪ್ಪಾಗಿರುವದು), ಮಾರ್ಗ, ಇವುಗಳಲ್ಲಿ ಹುಟ್ಟಿದ ಮತ್ತು ಹುಳ, ಬೆಂಕಿ, ಅಥವಾ ತಣಸು ತಾಗಿದ ಔಷಧಗಳು ಕಾರ್ಯಸಾಧಕವಾಗುವದಿಲ್ಲ.
21 ಸ್ನಿಗ್ಧಾಂ ಪ್ರರೋಹವತೀಂ ಮೃದ್ವೀ೦ ಸ್ದಿರಾಂ ಸಮಾಂ ಕೃಷ್ಣಾಂ ಔಷಧ ಬೆಳೆದ ಗೌರೀಂ ಲೋಹಿತಾಂ ವಾ ಭೂಮಿಮೌಷಧಾರ್ಧಂ ಪರೀಕ್ಷೇತ | ಭೂಮಿಯ ಪರೀಕ್ಷೆ (ಸು. 136.)
ತೈಲಯುಕ್ತವಾಗಿಯೂ, ಚಿಕ್ಕಗಿಡಗಳಿಂದ ತುಂಬಿದ್ದಾಗಿಯೂ,ಮೃದುವಾಗಿಯೂ, ಸ್ಥಿರವಾಗಿಯೂ, ಸಮತಟ್ಟಾಗಿಯೂ, ಕಪ್ಪು, ಅಥವಾ ಅರಸಿನ, ಅಥವಾ ಕೆಂಪುವರ್ಣವುಳ್ಳದ್ದಾಗಿಯೂ, ಇರುವ ಭೂಮಿಯನ್ನು ಪರೀಕ್ಷಿಸಿ ನೋಡಿ, ಅಂಧಾ ಭೂಮಿಯಲ್ಲಿ ಹುಟ್ಟಿದ ಔಷಧಗಳು ಪ್ರಶಸ್ತವೆಂದು ತಿಳಿಯಬೇಕು.
22. ಸೌಮ್ಯಾನ್ಯೌಷಧಾನಿ ಸೌಮ್ಯೇಷ್ವೃತುಷ್ವಾದದೀತಾಗ್ನೇಯಾನ್ಯಾಗ್ನೇಯೇ ಷ್ವೇವಮವ್ಯಾಪನ್ನಗುಣಾನಿ ಭವನ್ತಿ | ಸೌಮ್ಯಾನ್ಯೌಷಧಾನಿ ಸೌಮ್ಯೇ
ಔಷಧಗಳನ್ನು ಷ್ವೃತುಷು ಗೃಹೀತಾನಿ ಸೌಮ್ಯಗುಣಭೂಯಿಷ್ಠಾಯಾಂ ಭೂಮೌ ಸಂಗ್ರಹಿಸುವದಕ್ಕೆ ಜಾತಾನ್ಯತಿಮಧುರಸ್ನಿಗ್ಧಶೀತಾನಿ ಜಾಯಂತೇ | ಏತೇನ ಋತು ಮತ್ತು ದೇಶ ಶೇಷಂ ವ್ಯಾಖ್ಯಾ ತಂ | (ಸು. 137.)
ಸೌಮ್ಯ (ಶೀತ) ಗುಣದ ಔಷಧಗಳನ್ನು ಸೌಮ್ಯವಾದ ಋತುಗಳಲ್ಲಿ ಸಂಗ್ರಹಿಸಿದರೆ ಮತ್ತು ಅವು ಸೌಮ್ಯಗುಣ ಹೆಚ್ಚಾಗಿರುವ ಭೂಮಿಯಲ್ಲಿ ಬೆಳೆದವುಗಳಾದರೆ, ಅವುಗಳಲ್ಲಿ ಶೀತ, ಸ್ನಿಗ್ಧ, ಮತ್ತು ಮಧುರ ಗುಣಗಳು ಅತಿಯಾಗಿರುತ್ತವೆ; ಹಾಗೆಯೇ ಅಗ್ನಿಯ (ಉಷ್ಣ) ಗುಣದ ಔಷಧಗಳು ಆ ಗುಣವೇ ಹೆಚ್ಚಾಗಿರುವ ಭೂಮಿಯಲ್ಲಿ ಬೆಳೆದವಾಗಿದ್ದು, ಉಷ್ಣವಾದ ಋತುಗಳಲ್ಲಿ ಕೂಡಿಸಲ್ಪಟ್ಟರೆ, ಅವುಗಳಲ್ಲಿ ಆ ಅಗ್ನಿಯ ಗುಣಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಸೌಮ್ಯ ಔಷಧಗಳನ್ನು ಸೌಮ್ಯ ಋತುಗಳಲ್ಲಿಯೂ, ಅಗ್ನಿಯ ಗುಣದ ಔಷಧಗಳನ್ನು ಉಷ್ಣವಾದ ಋತುಗಳಲ್ಲಿಯೂ ಸಂಗ್ರಹಿಸತಕ್ಕದ್ದು. ಹಾಗೆ ಮಾಡಿದರೆ ಅವುಗಳಲ್ಲಿ ಗುಣಗಳು ಸಂಪೂರ್ಣವಾಗಿರುತ್ತವೆ.