ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                  -349-              ಅ XIX
 
  ಗಳು ಯಾರಲ್ಲಿ ಮಧ್ಯಬಲವಾಗಿ ಉಂಟಾಗಿಯವೋ, ಅವರನ್ನು ಪ್ರಾಜ್ಞನಾದ ವೈದ್ಯನು ಹೆಚ್ಚಾಗಿ ಆರಂಭದಲ್ಲಿ ಪಾಚನ ಯೋಗಗಳಿಂದ ಉಪಚರಿಸಬೇಕು.
   41.  ಅತ ಏವ ಯಧೋದ್ದಿಷ್ಟಾ ಯೇಷಾಮಲ್ಪ ಬಲಾ ಗದಾಃ |

ಪಿಪಾಸಾನಿಗ್ರಹೈಸೇಷಾಮುಪವಾಸೈತ್ವ ತಾನ್ ಜಯೇತ್ || ಬಾಯಾರಿಕೆ ತಡೆ (ಚ. 121)

  ಮೇಲೆ ಹೇಳಿದ ರೋಗಗಳು ಯಾರಲ್ಲಿ (ಪಾಚನೋಪಚಾರ ನಡೆಸಿದ 
ಮೇಲೆ) ಅಲ್ಪ ಬಲವುಳ್ಳವಾಗಿ ಇವೆಯೋ, ಅಂಧವರಿಗೆ ಬಾಯಾರಿಕೆಯ ತಡೆಗಳಿಂದಲೂ, ಉಪವಾಸ ಗಳಿಂದಲೂ ರೋಗಗಳನ್ನು ಗುಣಮಾಡಬೇಕು.
   42.  ರೋಗಾನ' ಜಯೇನ್ಮಧ್ಯ ಒಲಾನ್ವ್ಯಾ ವಾಯಾಮಾತಡಮಾರುತೈಃ |                      ವ್ಯಾಯಾಮಾತ     ಬಿನಾಂ ಕಿಂ ಪುನರ್ಯೇಷಾಂ ರೋಗಾಣಾಮವರಂ ಬಲಂ ||

ಉಪಯೋಗ (ಚ. 121.)

ಮಧ್ಯಬಲವಾದ ರೋಗಗಳಾದರೆ ಅವುಗಳನ್ನು ವ್ಯಾಯಾಮದಿಂದಲೂ, ಬಿಸಿಲು ಗಾಳಿಗಳಿಂದಲೂ, ಜಯಿಸಬೇಕು. ರೋಗಿಯು ಬಲಿಷ್ಠನಾಗಿ ರೋಗವು ಅಬಲಿಯಾದರೆ, ಅದೇ ಪ್ರಕಾರ ಉಪಚರಿಸಬೇಕೆಂಬದಕ್ಕೆ ಸಂದೇಹವಿಲ್ಲ.

   43.  ಸ್ನಾನಮುತ್ಸಾದನಂ ಸ್ವವೋ ಮಧುರಾಃ ಸ್ನೇಹವಯಃ | ಬೃಹಣ     ಶರ್ಕರಾ ಕ್ಷೀರಸರ್ಪೀಂಷಿ ಸರ್ವೇಷಾಂ ವಿದ್ದಿ ಬೃಂಹಣಂ ||

ರೋಗಗಳು

                                  (ಚ. 121-12.) ಸ್ನಾನ, ಮೈತಿಕ್ಕುವದು, ನಿದ್ರೆ, ಮಧುರವಾದ ಸ್ನೇಹವಸ್ತ್ರಗಳು, ಸಕ್ಕರೆ, ಹಾಲು, ತುಪ್ಪ, ಇವು ಸರ್ವರಿಗೂ ಬೃಂಹಣವೆಂದು ತಿಳಿಯಬೇಕು.
   44.  ಕಟುತಿಕಷಾಯಾಣಾಂ ಸೇವನಂ ಗ್ರೀಷ್ಟ ಸಂಯಮ: || ರೂಕ್ಷಣ    ಖಲೀಪಿಣ್ಯಾ ಕತಕ್ರಾಣಾಂ ಮಧ್ವಾದೀನಾಂ ಚ ರೂಕ್ಷಣಂ || 

ಯೋಗಗಳು (ಚ. 122 )

ಖಾರ, ಕಹಿ, ಚೊಗರು, ಪದಾರ್ಥಗಳು, ತೈಲದ ಕಿಟ್ಟಿ, ಹಿಂಡಿ, ಮಜ್ಜಿಗೆ, ಜೇನು ಮೊದ ಲಾದವುಗಳ ಸೇವನೆ ಮತ್ತು ಸ್ತ್ರೀಸಂಭೋಗದಲ್ಲಿ ನಿಯಮವಿಲ್ಲದಿರುವದು ಸಹ ರೂಕ್ಷಣ ಯೋಗಗಳು

  45. ಅಭಿಷ್ಯಂದಾ ಮಹಾದೋಪಾ ಮರ್ಮಸ್ಥಾ ವ್ಯಾಧಯಶ್ಚ ಯೇ || ರೂಕ್ಷಣಕ್ಕೆ ಯೋ ಊರುಸ್ತಂಭಪ್ರವೃತಯೋ ರೂಕ್ಷಣೀಯಾ ನಿದರ್ಶಿತಾಃ || 
                                      (ಚ.122)
  ಅತಿಯಾದ ಬೆಳಿಕೆ, ಮಹಾದೋಷಗಳು, ಮರ್ಮಸ್ಥಾನಗಳನ್ನಾಶ್ರಯಿಸಿದ ಊರು ಸ್ತಂಭ ಮೊದಲಾದ ವ್ಯಾಧಿಗಳು, ಇವುಗಳಲ್ಲಿ ರೋಗಿಗೆ ರೂಕ್ಷಣ ಹೇಳಲ್ಪಟ್ಟಿದೆ.