ಈ ಪುಟವನ್ನು ಪರಿಶೀಲಿಸಲಾಗಿದೆ

XIV ಉಪೋದ್ಘಾತ ತಾರೆ. ಅದು ಬರೇ ಊಹೆ ಮತ್ತು ಬಾಲವಿವಾಹಪದ್ದತಿಯನ್ನು ನಿಲ್ಲಿಸಬೇಕೆಂಬ ಪ್ರತಿಜ್ಞೆ ಯುಳ್ಳವರಿಂದ ಹುಟ್ಟಿದ್ದು, ಈ ಭರತಖಂಡದಲ್ಲಿರುವ ಎಲ್ಲಾ ಜನಸಮಾಜಗಳಲ್ಲಿ ಬಾಲವಿವಾ ಹದ ಪದ್ಧತಿಯು ಇಲ್ಲ. ಆ ಪದ್ದತಿಯನ್ನು ಆಚರಿಸುವ ಸಮಾಜಗಳಲ್ಲಿ ಆಯುಃಪ್ರಮಾಣವು ಇತರ ಭಾರತೀಯ ಸಮಾಜಗಳಲ್ಲಿಯದಕ್ಕಿಂತ ಕಡಿಮೆ ಎಂತ ನಿರ್ಣೀತವಾದ ಪಕ್ಷದಲ್ಲಿ ಆ ಸಂದೇಹ ಹುಟ್ಟಬಹುದು. ಆ ಭೇದವನ್ನು ಕಂಡುಹಿಡಿದದ್ದಿಲ್ಲ. ಹದಿನಾರು ವರ್ಷ ಪ್ರಾಯದನಂತರ ಸ್ತ್ರೀಯು ಗರ್ಭಾಧಾನಕ್ಕೆ ಅರ್ಹಳು ಎಂತ ಮಹರ್ಷಿಗಳು ಬರದಿದ್ದಾರೆ ಈ ಅಭಿಪ್ರಾಯವು ಪಕ್ಷಪಾತಿಗಳಲ್ಲದ ಸರ್ವರೂ ಒಪ್ಪಬೇಕಾದ್ದೇ. ಬೆಳಿಕೆಯ ಕಾಲ ದಾಟಿದ ಮಧ್ಯವಯಸ್ಸಿನಲ್ಲಿ ವಿವಾಹಮಾಡಿಕೊಳ್ಳುವ ವಾಡಿಕೆ ಹೆಚ್ಚಾಗಿರುವ ಬಹು ದೇಶ ಗಳಲ್ಲಿ ಸಾಕಷ್ಟು ಸಂತತಿ ವೃದ್ಧಿಯಾಗದ್ದನ್ನು ನೋಡಿ, ಆಯಾ ದೇಶದ ಸರಕಾರದವರು ಆ ನ್ಯೂನತೆಯ ಪರಿಹಾರಕ್ಕಾಗಿ ಬಸುರಿಗಳಿಗೂ, ಬಾಣಂತಿಯರಿಗೂ, ಶಿಶುಗಳಿಗೂ ವೇತನ ಕೊಡಲಿಕ್ರಾರಂಭಿಸಿದ್ದಾರೆ. ಭಾರತೀಯರ ಅಲ್ಲಾಯುಸ್ಸಿಗೆ ಮುಖ್ಯ ಕಾರಣಗಳು ಎರಡು ಅನುಭವಸಿದ್ಧವಾದವು ಒಂದನೇದು ದಾರಿದ್ರ, ಎರಡನೇದು ಆರೋಗ್ಯಶಾಸ್ತ್ರಜ್ಞಾನದ ಕ್ಷಯ, ಭಾರತೀಯರಲ್ಲಿ ದುಃಖಕರವಾದ ದಾರಿದ್ರವಿರುತ್ತದಾದರೂ, ಆ ದಾರಿದ್ರವು ವೃದ್ಧಿಯಾಗುತ್ತಾ ಬರುತ್ತದೆನ್ನುವದಕ್ಕೆ ಸಾಕಷ್ಟು ಕಾರಣವಿಲ್ಲ ಆದರೆ ಆರೋಗ್ಯಶಾಸ್ತ್ರದ ಜ್ಞಾನವು, ಎಣ್ಣೆ ಆರಿದ ದೀಪದ ಪ್ರಕಾಶದಂತೆ, ಕಡಿಮೆಯಾಗುತ್ತಾ ಬರುತ್ತದೆನ್ನುವದಕ್ಕೆ ಸಂದೇಹವಿಲ್ಲ. ಈ ಮಾತನ್ನು ಪಾಶ್ಚಾತ್ಯ ವಿದ್ಯೆಯು ದಿನೇದಿನೇ ಈ ದೇಶದಲ್ಲಿ ಹಬ್ಬುತ್ತಾ ಬರುವದನ್ನೂ, ಬಿ , ಇತ್ಯಾದಿ ಮಾನ್ಯ ಪರೀಕ್ಷೆಗಳಲ್ಲಿ ತೇರ್ಗಡೆಪಡುವ ನಮ್ಮ ತರುಣರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರುತ್ತಾ ಒರುವದನ್ನೂ ನೋಡಿ, ಕೆಲವರು ಶಂಕಿಸ್ಯಾರು ಪಾಶ್ಚಾತ್ಯ ವಿದ್ಯೆಯಿಂದ ಈ ವಿಷಯದಲ್ಲಿ ನಮ್ಮ ತರುಣರಿಗೆ ಸಿಕ್ಕುವ ಜ್ಞಾನವು ಅಪೂರ್ಣವಾಗಿ ವಸ್ತುತಃ ಸಾರ್ಧಕವಾಗುವದಿಲ್ಲ ಸುಮಾರು ೨೦ ವರ್ಷ ಇಂಗ್ಲಿಷ ವಿದ್ಯೆ ಕಲಿತು ರಸಾ ಯನಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವನಿಗಾದರೂ ತನ್ನ ಮನೆಬಾವಿಯ ನೀರಿನಲ್ಲಿ ಯಾವ ದೋಷವೂಂಟು ಮತ್ತು ಆ ದೋಷವನ್ನು ತೆಗೆದುಬಿಡುವ ಸುಲಭ ಉಪಾಯವೇನು ಎಂಬ ದನ್ನು ಗೊತ್ತು ಮಾಡುವದು ಕಷ್ಟಸಾಧ್ಯ. ಕೆಲವು ವರ್ಷಗಳ ಮೊದಲು ನೀರನ್ನು ಶುದ್ಧ ಮಾಡುವದಕ್ಕೆ ಮೂರು ಗಡಿಗೆಗಳನ್ನು ಒಂದರ ಮೇಲೆ ಒಂದನ್ನಾಗಿ ಇಟ್ಟು, ಮೇಲಿನ ಒಂದನ ಗಡಿಗೆಗೆ ಮಳಲು ತುಂಬಿಸಿ, ಅದಕ್ಕೆ ಕುದಿಸಿ ಹಾಕಿದ ನೀರು ಬೊಟ್ಟುಬೊಟ್ಟಾಗಿ ಎರಡನೆ ಗಡಿಗೆಗೆ ಇಳಿಯುವಂತೆ ಅದರ ಅಡಿಯಲ್ಲಿ 3, 4 ತೂತುಗಳನ್ನು ಮಾಡಿ, ತೂತುಗಳಿಗೆ ಹುಲ್ಲ ಕಡ್ಡಿ ಇಟ್ಟು, ಎರಡನೆ ಗಡಿಗೆಗೆ ಮಸಿಯನ್ನು ತುಂಬಿಸಿ, ಅದರಿಂದ ಬುಡದ ಗಡಿಗೆಗೆ ಅದೇ ರೀತಿ ಬೊಟ್ಟುಬೊಟ್ಟಾಗಿ ನೀರನ್ನು ಇಳಿಸಿ, ಹಾಗೆ ಬುಡದ ಗಡಿಗೆಯಲ್ಲಿ ಸಂಗ್ರಹವಾದ ನೀರು ಶುದ್ದ ವೆಂತ ನೆನಸಿ, ಅದನ್ನು ಪಾನಾದಿಗಳಿಗೆ ಉಪಯೋಗಿಸುವ ವಾಡಿಕೆ ಇತ್ತು ಈ ಕ್ರಮದಲ್ಲಿ ಮಳಲು, ಮಸಿ, ಗಡಿಗೆ ಮುಂತಾದವುಗಳನ್ನು ಶುದ್ಧವಾಗಿಡುವದು ಅವಶ್ಯಕ. ಇದು ಪ್ರಾಯಶಃ ಸಾಧ್ಯವಾಗುವದಿಲ್ಲವಾದ್ದರಿಂದ, ಅದನ್ನು ಬಿಟ್ಟು, ಈಗ ಬೇರೆಬೇರೆ ವಿಧದ ಜಲ ಶೋಧನಯಂತ್ರ (ಫಿಲ್ಟರ್) ಗಳನ್ನು ಉಪಯೋಗಿಸುತ್ತಿದ್ದಾರೆ. ಈ ಯಂತ್ರಗಳನ್ನು ಕೊಂಡು ಕೊಳ್ಳುವದು, ಕಾಪಾಡುವದು ಮತ್ತು ಅವುಗಳಿಂದ ಗೃಹಕೃತ್ಯಕ್ಕೆ ಸಾಕಷ್ಟು ಶುದ್ಧ ನೀರನ್ನು ಸಂಗ್ರಹಿಸುವದು ಈಗಿನ ಸ್ಥಿತಿಯಲ್ಲಿ ಸಾಮಾನ್ಯ ಜನರಿಗೆ ಅಸಾಧ್ಯ. ಈ ಸಂದರ್ಭದಲ್ಲಿ ಈ