ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 ಅ XX                                  - 398-

ಷರಾ ಶಾ ನ ಪಾರಪ್ರಕಾರ ವಾತದಲ್ಲಿ ಮೂರು ಪಾಲು, ಪಿತ್ತದಲ್ಲಿ ಎರಡು ಪಾಲು, ಅನುಪಾನಯುಕ್ತವೆಂತ ಅರ್ಥವಾಗುತ್ತದೆ

ಚೂರ್ಣದ ಭಾವನೆಯ ಕ್ರಮ 27. ದ್ರವೇಣ ಯಾವತಾ ಸಮ್ಯಕ್ ಚೂರ್ಣಂ ಸರ್ವಂ ಪ್ಲು ತಂ ಭವೇತ್ |

      ಭಾವನಾಯಾಃ ಪ್ರಮಾಣಂ ತು ಚೂರ್ಣೇ  ಪ್ರೋಕ್ತಂ ಭಿಷಗ್ವರೈಃ ||
                                                                            (ಶಾ. 60.) 

ಚೂರ್ಣವನ್ನು ರಸಗಳಲ್ಲಿ ಭಾವನೆ ಮಾಡುವ ಸಂಗತಿಯಲ್ಲಿ, ಪೂರಾ ಚೂರ್ಣವು ಚೆನ್ನಾಗಿ ಒದ್ದೆಯಾಗಿ ಮುಳುಗುವಷ್ಟು ರಸವನ್ನು ಕೂಡಿಸತಕ್ಕದ್ದು. ಹೀಗೆ ಭಾವನೆಯ ಪ್ರಮಾಣವನ್ನು ವೃದ್ಯೋತ್ತಮರು ಹೇಳಿರುತ್ತಾರೆ

ಷರಾ ಚೂರ್ಣವನ್ನು ಹಾಗೆ ರಾತ್ರಿ ಇಡೀ ಮುಳುಗಿಸಿಟ್ಟು ಹಗಲು ಬಿಸಿಲಲ್ಲಿ ಒಣಗಿಸಬೇಕು ಮಾತ್ರೆ ಮಾಡುವಲ್ಲಿ ಭಾವನೆಯಂದರೆ, ಇದೇ ಪ್ರಮಾಣ ಪ್ರಕಾರ ದ್ರವವನ್ನು ಕೂಡಿಸಿ, ಅದು ಆರುವ ವರೆಗೆ ಕಲ್ಲ ಮೇಲೆ ಅರೆಯುವದು.

ಪುಟಪಾಕದ ಕ್ರಮ 28. ಪುಟಪಾಕಸ್ಯ ಮಾತ್ರೇಯಂ ಲೇಪಸ್ಯಾಂಗಾರವರ್ಣತಾ |

     ಲೇಪಂ ಚ ದ್ವ್ಯಂಗುಲಂ ಸ್ಥೂಲಂ ಕುರ್ಯಾದ್ದ್ವ್ಯಂಗುಷ್ಠಂ ಮಾತ್ರಕಂ ||  
      ಕಾಶ್ಮರೀವಟಜಂಬ್ವಾದಿಪತ್ರೈವೇಷ್ಟನಮುತ್ತಮಂ ||
      ಪಲಮಾತ್ರರಸೋ ಗ್ರಾಹ್ಯಃ ಕರ್ಷಮಾತ್ರಂ ಮಧು ಕ್ಷಿಪೇತ್ ||
      ಕಲ್ಕಚೂರ್ಣದ್ರವಾದ್ಯಾಸ್ತು ದೇಯಾಃ ಸ್ವರಸವದ್ಬು ಧೈಃ |    (ಶಾ. 39.) 


               (ಪುಟಪಾಕಮಾಡಿದ ಕಲ್ಕದ ರಸ ಉಪಯೋಗಿಸಬೇಕಾದಲ್ಲಿ, ದ್ರವ್ಯ ಅಧವಾ ಕಲ್ಕವನ್ನು ಎಲೆಗಳಿಂದ ಮುಚ್ಚಿ, ಸೂತ್ರದಿಂದ ಕಟ್ಟಿ ಸುತ್ತು ಹಸಿ ಮಣ್ಣನ್ನು ಮೆತ್ತಿ, ಮೇಲಿಗೆ ಒಣಗಿದ ಪುಡಿ ಮಣ್ಣನ್ನು ಚಲ್ಲಿ, ಬೆಂಕಿಯಲ್ಲಿ ಹಾಕಿ, ಬೇಯಿಸಿ, ಅನಂತರ ಒಡೆದು ಬೆಂದ ಔಷಧದ ರಸ ತೆಗೆದು ಉಪಯೋಗಿಸಬೇಕಾದದ್ದು ) ಲೇಪವು ಎರಡು ಅಂಗುಷ್ಠಗಳ ಅಂಗುಲ ದಲ್ಲಿ ಎರಡು ಅಂಗುಲ ದಪ್ಪವಿರಬೇಕು. ಆ ಲೇಪವು ಸುಟ್ಟು ಕಪ್ಪಾದ ಕೂಡಲೇ ಬೆಂಕಿ ಯಿಂದ ತೆಗೆಯಬೇಕು. ಸುತ್ತುವದಕ್ಕೆ ಕಾಶ್ಮರೀ, ಆಲ, ನೇರಳೆ, ಮೊದಲಾದ ಮರಗಳ ಎಲೆಗಳು ಪ್ರಶಸ್ತ ರಸದ ಮಾತ್ರೆಯು ಒಂದು ಪಲ ಅದಕ್ಕ ಜೇನು ಕೂಡಿಸುವದಾದರೆ, ಜೇನು ಕಾಲು ಪಲ.     ಕಲ್ಕ, ಚೂರ್ಣ, ದ್ರವಾದಿಗಳನ್ನು ಸ್ವರಸಕ್ಕೆ ಹೇಳಿದ ಕ್ರಮದಲ್ಲಿ ಕೂಡಿಸತಕ್ಕದ್ದು.

ಅಕ್ಕಚ್ಚನ್ನು ತಯಾರಿಸುವ ಕ್ರಮ 29. ಕಂಡಿತಂ ತಂಡುಲಪಲಂ ಜಲೇsಷ್ಟಗುಣಿತೇ ಕ್ಷಿಪೇತ್ |

         ಭಾವಯಿತ್ವಾ ಜಲಂ ಗ್ರಾಹ್ಯಂ ದೇಯಂ ಸರ್ವತ್ರ ಕರ್ಮಸು ||
                                                                                   (ಶಾ. 39.) 

ಕುಟ್ಟಿ ನಿರ್ಮಲಗೊಳಿಸಿದ ಅಕ್ಕಿ ಪಲ ಒಂದಕ್ಕೆ ಎಂಟು ಪಾಲಷ್ಟು ನೀರು ಹಾಕಿ, ಅಕ್ಕಿ ನೆನೆದ ಮೇಲೆ ಶೋಧಿಸಿದ್ದಲ್ಲಿ, ಸಿಕ್ಕುವ ನೀರು ಎಲ್ಲಾ ಕೆಲಸಗಳಲ್ಲಿಯೂ ಉಪಯೋಗಿಸಲಿಕ್ಕೆ ಯೋಗ್ಯವಾಗಿರುತ್ತದೆ.