ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XX - 400 - ದ್ರವೇಣ ಮಧುನಾ ವಾಪಿ ಗುಟಿಕಾಂ ಕಾರಯೇದ್ಭುಧಃ || ಸಿತಾ ಚತುರ್ಗುಣಾ ದೇಯಾ ವಟೀಷು ದ್ವಿಗುಣೋ ಗುಡಃ | ಚೂರ್ಣಾಚೂರ್ಣಸಮಃ ಕಾರ್ಯೋ ಗುಗ್ಗುಲುರ್ಮಧು ತತ್ಸಮಂ || ದ್ರವಂ ಚ ದ್ವಿಗುಣಂ ದೇಯಂ ಮೋದಕೇಷು ಭಿಷಕ್ಚರೈಃ | ಕರ್ಷಪ್ರಮಾಣಾ ತನ್ಮಾತ್ರಾ ಬಲಂ ದೃಪ್ಲಾ ಪ್ರಯುಜ್ಯತೇ || (ಶಾ. 72.) ವಟಕಕ್ಕೆ ಗುಟಿಕಾ, ವಟೀ, ಮೋದಕ, ವಟಿಕಾ, ಪಿಂಡೀ, ಗುಡ, ವರ್ತಿ, ಎಂತಲೂ ಹೆಸರುಗಳಿವೆ ಅದನ್ನು ತಯಾರಿಸುವ ಕ್ರಮ ಹಾಗಂದರೆ - ಬೆಲ್ಲವನ್ನು, ಸಕ್ಕರೆಯನ್ನು, ಅಧವಾ ಗುಗ್ಗುಲವನ್ನು ಅಗ್ನಿಯಿಂದ ಕರಗಿಸಿ ಲೇಹದಂತೆ ಮಾಡಿಕೊಂಡು ಅದಕ್ಕೆ ಚೂರ್ಣ ಕೂಡಿಸಿ ವಟಕ ಮಾಡುವದು. ಕೆಲವು ಸಂಗತಿಯಲ್ಲಿ ಉರಿಯನ್ನು ತಾಗಿಸದೆ ಗುಗ್ಗುಲ ಮತ್ತು ದ್ರವ ಕೂಡಿಸಿ ಅರೆದು, ಅಧವಾ ಜೇನಿನಿಂದ, ಬುದ್ದಿವಂತನು ಗುಳಿಗೆಯನ್ನು ಮಾಡತಕ್ಕದ್ದು. ಸಕ್ಕರೆ ಕೂಡಿಸುವದಾದರೆ ಚೂರ್ಣದ ನಾಲ್ಕು ಪಾಲಷ್ಟು, ಬೆಲ್ಲ ಕೂಡಿಸುವದಾದರೆ ಎರಡು ಪಾಲಷ್ಟು, ಗುಗ್ಗು ಲವನ್ನು ಅಧವಾ ಜೇನನ್ನು ಕೂಡಿಸುವದಾದರೆ ಚೂರ್ಣಕ್ಕೆ ಸರಿ ಪಾಲಷ್ಟು, ಸೇರಿಸಿ ವಟಕವನ್ನು ಮಾಡಬೇಕು. ವೈದ್ಯೋತ್ತಮರು ಮೋದಕಗಳನ್ನು ತಯಾರಿಸುವದಕ್ಕೆ ದ್ರವವನ್ನು ಚೂರ್ಣಕ್ಕೆ ಎರಡು ಪಾಲಷ್ಟು ಉಪಯೋಗಿಸಬೇಕು. ಈ ವಟಕಗಳು ಪ್ರಮಾಣ ದಲ್ಲಿ ಒಂದು ಕರ್ಷತೂಕದ ವರೆಗೆ ರೋಗಿಯ ಬಲ, ರೋಗದ ಬಲ, ಮತ್ತು ಕಾಲದ ಬಲ ನೋಡಿಕೊಂಡು ಕೊಡಲ್ಪಡುತ್ತವೆ. ಷರಾ ಗುಡಶಬ್ದವು ಲೇಹಕ್ಕೂ ಬರುತ್ತದೆ 35. ಕ್ರಾಧಾದೇರ್ಯತ್ಸುನಃ ಪಾಕಾದ್ರನುಂ ಸಾ ರಸಕ್ರಿಯಾ | ಸೋವಲೇಹಶ್ಚ ಲೇಹಶ್ಚ ತನ್ಮಾತ್ರಾ ಸ್ಯಾತ್ಸಲೋನ್ಮತಾ | ಸಿತಾ ಚತುರ್ಗುಣಾ ಕಾರ್ಯಾ ಚೂರ್ಣಾಚ್ಛ ದ್ವಿಗುಣೋ ಗುಡಃ | ಲೇಹದ ಕ್ರಮ ದ್ರವಂ ಚತುರ್ಗುಣಂ ದದ್ಯಾದಿತಿ ಸರ್ವತ್ರ ನಿಶ್ಚಯಃ || ಮತ್ತು ಪಾಕದ ಪರೀಕ್ಷೆ ಮುಂ ಸುಪಕ್ಷೇ ತಂತುಮಂ ಸ್ವಾದವಲೇಹೇಂಪ್ಪು ಮಜ್ಜನಂ | ತಾದದ್ದು ಸ್ಥಿರತ್ನಂ ಪೀಡಿತೇ ಮುದ್ರಾ ಗಂಧವರ್ಣರಸೋದ್ಭವಃ | ದುಗ್ಗ ಮಿಸ್ಸು ರಸಂ ಯೂಷಂ ಪಂಚಮೂಲಕಷಾಯಜಮ್ | ವಾಸಾಹ್ವಾಧಂ ಯಧಾಯೋಗ್ಯ ಮನುಪಾನಂ ಪ್ರಶಸ್ಯತೇ || (ಭಾ. ಪ್ರ. 196.) ಕಷಾಯಾದಿಗಳ ಪುನಃ ಪಾಕದಿಂದ ದಪ್ಪವಾದ ಮತ್ತು ರಸಯುಕ್ತವಾದ ಔಷಧಕ್ಕೆ ಅವಲೇಹ ಎಂತಲೂ, ಲೇಹವೆಂತಲೂ ಹೇಳುತ್ತಾರೆ. ಅದರ ಮಾತ್ರೆಯು ಒಂದು ಪಲತೂಕ. ಅದನ್ನು ತಯಾರಿಸುವದಕ್ಕೆ ಸಕ್ಕರೆಯನ್ನು ಚೂರ್ಣದ ನಾಲ್ಕು ಪಾಲಷ್ಟು, ಬೆಲ್ಲವಾದರೆ ಎರಡು ಪಾಲಷ್ಟು, ಮತ್ತು ದ್ರವ ನಾಲ್ಕು ಪಾಲಷ್ಟು, ಸೇರಿಸತಕ್ಕದ್ದು ಎಂಬದು ಎಲ್ಲಾ ಸಂಗತಿ ಗಳಲ್ಲಿಯೂ ನಿಶ್ಚಯ. ಸರಿಯಾಗಿ ಪಕ್ವವಾದಾಗ್ಗೆ (ಬೆರಳುಗಳಿಂದ ಮುಟ್ಟಿ ನೋಡಿದರೆ) ಲೇಹದಲ್ಲಿ ನೂಲು ಬರುವದು; ನೀರಲ್ಲಿ ಹಾಕಿದರೆ ಅದು ಮುಳುಗುವದು, ಮುದ್ದೆಗೆ ಬರು ವದು; ಬೆರಳುಗಳಿಂದ ಒತ್ತಿದರೆ ಬೆರಳುಗಳ ರೇಖೆಗಳು ಅದರಲ್ಲಿ ಕಾಣುವವ; ಮತ್ತು ಸರಿ