- 405 - ಆ XX. ತುಪ್ಪ, ತೈಲ ಗುಡಾದಿಗಳನ್ನು ಒಂದೇ ದಿವಸದಲ್ಲಿ ಪಾಕಮಾಡಿ ಸಿದ್ದ ಪಡಿಸಬಾರದು. ಇವುಗಳನ್ನು ಕೆಲವು ದಿವಸ ಒಲೆಯ ಮೇಲೆಯೇ ಇರಿಸಿ, ಸಾವಕಾಶದಿಂದ ಪಾಕಮಾಡಿದರೆ, ಹೆಚ್ಚಾಗಿ ಅವುಗಳಲ್ಲಿ ಗುಣಸಂಗ್ರಹವಾಗುವದು. (6) ಕ್ಷೀರೇ ದ್ವಿರಾತ್ರಂ ಸ್ವರಸೇ ರಾತ್ರಂ ಸ್ನೇಹೇ ಕಷಾಯೇಷು ಚ ಪಂಚರಾತ್ರಂ | (ವೈ ಸಾ. ಸು. 123.) ಸ್ನೇಹವನ್ನು ಕ್ಷೀರದಲ್ಲಿ ಪಾಕಮಾಡುವದಾದರೆ ಎರಡು ದಿನ, ಸ್ವರಸದಲ್ಲಿ ಯಾದರೆ ಮೂರು ದಿನ, ಮತ್ತು ಕಷಾಯಗಳಲ್ಲಿ ಯಾದರೆ ಐದು ದಿನ ಒಲೆಯ ಮೇಲೆ ಇರಿಸಿ, ಪಾಕ ಮಾಡತಕ್ಕದ್ದು. ಇನ್ನೊಂದು ಆಧಾರ ಪ್ರಕಾರ – (6) ಕ್ಯಾಧೇ ರಸೇ ಮಸ್ತುನಿ ದದ್ದಿ ತಕ್ಕೇ ಧಾನ್ಯಾಮ್ಲ ಮೂತ್ರಾದಿಷು ಚ ತ್ರಿರಾತ್ರಂ || (ವೈ. ಸಾ. ಸಂ. 123.) ಸ್ನೇಹವನ್ನು ಕಷಾಯದಲ್ಲಿ, ಸ್ವರಸದಲ್ಲಿ, ಮೊಸರುನೀರಿನಲ್ಲಿ, ಮೊಸರಿನಲ್ಲಿ, ಮಜ್ಜಿಗೆ ಯಲ್ಲಿ, ಧಾನ್ಯಾಮ ದಲ್ಲಿ, ಮತ್ತು ಮೂತ್ರಾದಿಗಳಲ್ಲಿ ಕಾಯಿಸುವಾಗಲೂ ಮೂರು ರಾತ್ರಿ ಪಾಕವಾಗಬೇಕು. 47 (4) ಮಾಸದ್ವಯಾಧಾ ಚೂರ್ಣಂ ಹೀನರ್ಯತ್ರ ಮಾತ್ರ ಯಾತ್ | ಚೂರ್ಣಾದಿಗಳ ಹೀನಂ ಗುಟಿಕಾಲೇಹ್ ಅಫತೇ ವರಾತ್ಪರಂ || ವೀರ್ಯವತ್ಯಾಲ ಹೀನಾಃ ಸುರ್ಕೃತತೈಲಾದ್ಯಾಕ್ಚತುರ್ಮಾಸಾಧಿಕಾತ್ರಧಾ || (ಶಾ. 5) ಎರಡು ತಿಂಗಳನಂತರ ಚೂರ್ಣದಲ್ಲಿ ವೀರ್ಯ ಕಡಿಮೆಯಾಗುತ್ತದೆ, ಗುಳಿಗೆ ಮತ್ತು ಲೇಹ ಒಂದು ವರ್ಷದನಂತರ ಹೀನಗುಣವುಳ್ಳದ್ದಾಗುತ್ತವೆ ಮತ್ತು ತುಪ್ಪತೈಲಗಳು ನಾಲ್ಕು ತಿಂಗಳ ಮೇಲೆ ಗುಣಹೀನವಾಗುತ್ತವೆ. - ಷರಾ ನಾಲ್ಕು ತಿಂಗಳು ಎಂಬದು ಒಂದು ವರ್ಷದ ಮೇಲೆ ನಾಲ್ಕು ತಿಂಗಳು ಎಂತ ವ್ಯಾಖ್ಯಾನ ಬರೆದು ಅದಕ್ಕೆ ಬಲವಾಗಿ ಮುಂದಿನ ಶ್ಲೋಕವು (6) ಭಾ ಪ್ರ ದಲ್ಲಿ ಎತ್ತಿ ಬರೆಯಲ್ಪಟ್ಟದ ಈ ಊರಿನ ಹವೆಯ ಸ್ಥಿತಿಯಿಂದ ತೈಲಾದಿ ಗಳನ್ನು ಬಾಯಲ್ಲಿ ಹಾಕಿಟ್ಟು, ಸರಿಯಾಗಿ ಬಾಯಿ ಕಟ್ಟಿ ಇಟ್ಟರೆ, ಅವು ಒಂದು ವರ್ಷದ ಮೇಲೆ ವರೆಗೂ ಒಳ್ಳೆ ಸ್ಥಿತಿಯಲ್ಲಿ ಇರುತ್ತವೆ ಆದರೆ ಈಗಿನ ವಾಡಿಕೆಯಂತೆ ಬಾಟ್ಲಿಯಲ್ಲಿ ಹಾಕಿಡುವದಾದರೆ, ನಾಲ್ಕು ತಿಂಗಳ ಅವಧಿಯೇ ಸರಿ ಕಾಣುತ್ತದೆ (6) ಮೃತಮಬ್ದಾತ್ಪರಂ ಪಕ್ಕಾ ಹೀನವೀರ್ಯತ್ವಮಾಪ್ನುಯಾತ್ | ತೈಲಂ ಪಕ್ವ ಮಪಕ್ವಂ ಚ ಚಿರಸ್ಥಾಯಿ ಗುಣಾಧಿಕಂ || (ಭಾ. ಪ್ರ. 212.) ಕಾಯಿಸಿದ ತುಪ್ಪವು ಒಂದು ವರ್ಷದ ನಂತರ ಹೀನವೀರ್ಯದ್ದಾಗುತ್ತದೆ. ತೈಲವು ಕಾಯಿಸಿದ್ದಾಗಲಿ, ಹಸಿಯಾಗಲಿ, ಹೆಚ್ಚು ಕಾಲ ಇಟ್ಟರೆ ಅಧಿಕ ಗುಣವುಳ್ಳದ್ದಾಗುತ್ತದೆ. ಷರಾ ಈ ಆಧಾರಕ್ಕೆ ತೈಲದ ಮಟ್ಟಿಗೆ ಈ ಕೆಳಗಿನ ವಚನವು (c) ಸಹ ವಿರೋಧ (c) ಪಕ್ವತೈಲಾದ್ಭವೇದೀರ್ಯಂ ಹೀನಮಬ್ಲಾರ್ಧತಃ ಪರಂ | ಮೃತಾಚ್ಚಾ ಬಾತ್ಪರಂ ಪಂ ಗುಡಾದೇಷ್ಟ್ಯಬ್ದತಃ ಪರಂ || (ಚಿ. ಸಾ. ಸಂ. 70)
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.