ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXI - 412 -

ಅದಕ್ಕೆ ಹಾಲು ಕೊಟ್ಟರೂ ವಿರೇಚನವಾಗುತ್ತದೆ. ಬಹು ವಾತಕಫಗಳುಳ್ಳದ್ದು ಕ್ರೂರ; ಅದು ವಿರೇಚನಕ್ಕೆ ಕಷ್ಟವಾದದ್ದು. ದೋಷಗಳು ಸಮವಾಗಿದ್ದದ್ದು ಮಧ್ಯಮ; ಅದಕ್ಕೆ ಸಾಧಾರಣವಾದ ವಿರೇಚನ ಸಾಕಾಗುತ್ತದೆ.ಮೃದುಕೋಷ್ಠಕ್ಕೆ ಮೃದುವಾದ ಮಾತ್ರೆ, ಕ್ರೂರಕೋಷ್ಠಕ್ಕೆ ತೀಕ್ಷ್ಣವಾದ ಮಾತ್ರೆ, ಮತ್ತು ಮಧ್ಯಸ್ಥಿತಿಯ ಕೋಷ್ಠಕ್ಕೆ ಸಾಧಾರಣವಾದ ಮಾತ್ರ ಉಪಯೋಗಿಸಬೇಕು. 14. ಯಧಾ ಚ ವಮನೇ ಪ್ರಸೇಕೌಷಧಕಫಪಿತ್ತಾನಿಲಾಃ ಕ್ರಮೇಣ ಗ ಕ್ರಮವಾದ ವಮನ ಚ್ಪಂತಿ | ಏವಂ ವಿರೇಚನೇ ಮೂತ್ರಪುರೀಷಪಿತ್ತೌಷಧಕಫಾ ಇತಿ | ವಿರೇಚನಗಳ ಲಕ್ಷಣಗಳು

(ಸು. 549.) ವಾಂತಿಗೆ ಔಷಧ ಕೊಟ್ಟಾಗ್ಗೆ ಪ್ರಧಮತಃ ಎಂಜಲ ನೀರು, ಅನಂತರ ಔಷಧ, ಅನಂತರ ಕಫ, ಅನಂತರ ಪಿತ್ತ, ಕಡೆಗೆ ವಾಯು ಹ್ಯಾಗೆ ಕ್ರಮವಾಗಿ ಹೋಗುತ್ತವೋ, ಹಾಗೆಯೇ ವಿರೇಚನಕ್ಕೆ ತೆಗೆದುಕೊಂಡಾಗ ಪ್ರಧಮತಃ ಮೂತ್ರ, ಅನಂತರ ಮಲ, ಅನಂತರ ಪಿತ್ತ, ಅನಂತರ ಔಷಧ, ಕಡೆಗೆ ಕಫ (ಸಿಂಬಳ) ಹೊರಗೆ ಹೋಗುವವು.

15. ಗತೇಷು ದೋಷೇಷು ಕಫಾನ್ವಿತೇಷು ನಾಭ್ಯಾ ಲಘುತ್ವೇ ಮನಸಶ್ಚ ತುಷ್ಟೌ | ಚೆನ್ನಾಗಿ ವಿರೇ ಗತೇನಿಲೇ ಚಾಪ್ಯನುಲೋಮಭಾವಂ ಸಮ್ಯಗ್ವಿರಿಕ್ತಂ ಮನುಜಂ ವ್ಯವಸ್ಯೇತ್ || ಚನವಾದದ್ದರ ಲಕ್ಷಣಗಳು

(ಸು. 550 ) ದೋಷಗಳು ಕಫ ಕೂಡಿಕೊಂಡು ಹೊರಗೆ ಹೋಗಿ, ನಾಭಿಯು ಲಘುವಾಗಿ, ಮನ ಸ್ಸಿಗೆ ಸಂತೋಷ ಉಂಟಾಗಿ, ವಾಯುವು ಸ್ವಭಾವಸ್ಥಿತಿಗೆ ಬಂದಲ್ಲಿ, ಆ ಮನುಷ್ಯನಿಗೆ ಸರಿಯಾಗಿ ವಿರೇಚನವಾಯಿತೆಂತ ನಿಶ್ಚಯಿಸಬೇಕು.

16. ಮಂದಾಗ್ನಿಮಕ್ಷೀಣಮಸದ್ವಿರಿಕ್ತಂ ನ ಪಾಯಯೇತಾಹನಿ ತತ್ರ ಪೇಯಾಂ| ಎರಿಕ್ತನಿಗೆ ಆ ಕ್ಷೀಣಂ ತೃಡಾತ೯ಂ ಸುವಿರೇಚಿತಂ ಚ ತನ್ವೀಮಶೀತಾಂ ಲಘು ಪಾಯಯೇತ || ಹಾರನಿಯಮ

(ಸು. 550.) ವಿರೇಚನವು ಸರಿಯಾಗದೆ, ಕ್ಷೀಣತೆಯುಂಟಾಗದೆ, ಅಗ್ನಿಯು ಮಂದವಾಗಿಯೇ ಇರುವ ದಾದರೆ, ಆ ದಿನ ಅವನಿಗೆ ಗಂಜಿಯನ್ನು ಕುಡಿಯ ಕೊಡಬಾರದು. ವಿರೇಚನವು ಸರಿಯಾಗಿ ಆಗಿ, ಬಾಯಾರಿಕೆಯುಂಟಾಗಿ, ಕ್ಷೀಣನಾದರೆ, ಅವನಿಗೆ ತೆಳ್ಳಗಾಗಿಯೂ ತಣ್ಣಗಲ್ಲದೆಯೂ ಇರುವ ಗಂಜಿಯನ್ನು ಲಘುವಾಗಿ ಕುಡಿಸಬೇಕು.

17. ಯಧೌದಕಾನಾಮುದಕೇಪನೀತೇ ಚರಸ್ಥಿರಾಣಾಂ ಭವತಿ ಪ್ರಣಾಶಃ | ವಿರೇಚನದ ಪಿತ್ತೇ ಹೃತೇ ತ್ವೇವಮುಪದ್ರವಾಣಾಂ ಪಿತ್ತಾತ್ಮಕಾನಾಂ

ಭವತಿ ಪ್ರಣಾಶಃ ||

ಗುಣ

(ಸು. 550.) ನೀರಾಶಯದಲ್ಲಿರುವ ಚರಸ್ಥಿರ ಸಜೀವಮೂರ್ತಿಗಳು ನೀರನ್ನು ತೆಗೆದುಬಿಟ್ಟರೆ ಹ್ಯಾಗೆ ನಾಶವನ್ನು ಹೊಂದುತ್ತವೋ, ಹಾಗೆ ಪಿತ್ತವನ್ನು (ವಿರೇಚನದ್ವಾರಾ) ತೆಗೆದುಬಿಟ್ಟರೆ, ಪಿತ್ತ ಸಂಬಂಧವಾದ ಉಪದ್ರವಗಳು ನಾಶವಾಗುತ್ತವೆ.