ಈ ಪುಟವನ್ನು ಪರಿಶೀಲಿಸಲಾಗಿದೆ

ಆ XXI - 422 - ಭವತಿ | ತತ್ರ ಪಿಚಾ್ಛವಸಿ್ತಯಷಿ್ಟಮಧುಕಕೃಷ್ಣಾತಿಲಕ್ಕಮಧುಘ್ತೃತ ಯುಕ್ತಃ | ಶೀತಾಂಬುಪರಿಷಿಕ್ತಂ ಚೈನಂ ಪಯಸಾ ಭುಕ್ತವಂತಂ ಘೃತ ಮಂಡೇನ ಯಷ್ಮೀಮಧುಕಸಿದ್ದೇನ ತೈಲೇನ ವಾನುವಾಸಯೇತ್ | (ಸು. 556-57.) ಕೃಶನಾದವನು, ಅತಿಮ್ಮದು ಕೋಷ್ಠದವನು, ಮಂದಾಗ್ನಿಯವನು, ಅಧವಾ ರೂಕ್ಷ ನಾದವನು, ಅತಿರೂಕ್ಷವಾದ, ಅತಿತೀಕ್ಪ್ಲವಾದ, ಅತ್ಯುಷ್ಣವಾದ ಅಧವಾ ಅತಿ ಉತ್ಪಾದ ಔಷಧವನ್ನು ಕುಡಿದ್ದಲ್ಲಿ, ಅದು ಪಿತ್ತವಾಯುಗಳ ದೋಷವನ್ನುಂಟುಮಾಡಿ, ಪರಿಕರ್ತಿಕೆ ಯನ್ನು ತರುತ್ತದೆ. ಅದರಿಂದ ಆಸನ, ನಾಭಿ, ಮೇಢ್ರ, ವಸ್ತಿಯ ತಲೆ, ಈ ಸ್ಥಾನಗಳಲ್ಲಿ ಸುತ್ತು ಕತ್ತರಿಸಿದ ಹಾಗಿನ ನೋವು, ವಾಯು ಕೂಡಿಕೊಳ್ಳುವದು, ವಾಯುವಿನ ತಡೆ, ಮತ್ತು ಅನ್ನದಲ್ಲಿ ಅರುಚಿ, ಈ ಲಕ್ಷಣಗಳು ಉಂಟಾಗುತ್ತವೆ. ಅದಕ್ಕೆ ಚೇ್ಯಷ್ಠಮಧು, ಕರೀ ಎಳ್ಳಿನ ಕಲ್ಕ, ಚೇನು ಮತ್ತು ತುಪ್ಪಗಳಿಂದ ಕೂಡಿದ ಗಂಜಿನೀರಿನ ವಸ್ತಿಯನ್ನು ಕೊಡುವದು, ಅಧವಾ ಅವನನ್ನು ತಣ್ಣೀರಿನಿಂದ ಸ್ನಾನಮಾಡಿಸಿ, ಹಾಲಿನಿಂದ ಉಣ್ಣಿಸಿ, ತುಪ್ಪ, ಗಂಜಿನೀರು, ಮತ್ತು ಜೇಷ್ಠ ಮಧು, ಇವುಗಳಿಂದ ತಯಾರಿಸಲ್ಪಟ್ಟ ತೈಲದಿಂದ ಅನುವಾಸನ ಮಾಡಬೇಕು. 43. ಯಸ್ತರ್ಧ್ವಮಧೋ ವಾ ಭೇಷಜವೇಗಂ ಪ್ರವೃತ್ತಮಜ್ಞತಾ್ವದಿ್ವನಿಹಂತಿ ತಸ್ಕೋಪಸರಣಂ ಹೃದಿ ಕುರ್ವಂತಿ ದೋಷಾಃ | ತತ್ರ ಪ್ರಧಾನಮರ್ಮ ಸಂತಾಪಾದ್ವೇದನಾಭಿರತ್ಯಧಂ ಪೀಡ್ಯಮಾನೋ ದಂತಾನ್ ಕಿಟಕಿಟಾ ಯತೇ ಉದ್ಗ ತಾಕ್ಫೋ ಜಿಹ್ವಾಂ ಖಾದತಿ ಪ್ರತಾಮ್ಯತ್ಯಚೇತಾಶ್ಚ ಭವತಿ | ತಂ ಪರಿವರ್ಜಯಂತಿ ಮೂರ್ಖಾಃ | ತಮಭ್ಯಜ್ಯ ಧಾನ್ಯಸ್ವದೇನ ಸ್ವದ ಯೇದ್ಯಷಿ್ಟಮಧುಕಸಿಧೀನ ಚ| ಶಿರೋ ವಿರೇಚನಂ ಚಾಸ್ಕೃ ತೀಕ್ಷ್ಲಂ ವಿದಧ್ಯಾತ್ | ತತೋ ಯಪ್ಪಿ ಮಧುಕಮಿ ಶ್ರೇಣ ತಂಡುಲಾಂಬುನಾ ಛರ್ದಯೇದ್ಯಧಾದೋಷೋಚ್ಛಾಯಣ ಚೈನಂ ವಸ್ತಿಭಿರುಪಾಚರೇತ್ | (ಸು 557.) . ಯಾವನು ಮೇಲಕ್ಕಾಗಲಿ ಕೆಳಕ್ಕಾಗಲಿ ಹೊರಟಂಧಾ ಔಷಧದ ವೇಗವನ್ನು ಹೆಡು್ಡತನ ದಿಂದ ತಡೆದು ನಿಲ್ಲಿಸುತ್ತಾನೋ, ಅವನ ವಾತಾದಿ ದೋಷಗಳು ಹೃದಯದಲ್ಲಿ ಹೋಗಿ ಕೂಡು ತ್ತವೆ. ಆಗ್ಗೆ, ಪ್ರಧಾನ ಮರ್ಮವಾದ ಹೃದಯದಲ್ಲಿ ಉಂಟಾಗುವ ಸಂತಾಪದ ದೆಸೆಯಿಂದ ಅತ್ಯಂತವಾದ ವೇದನೆಗಳಿಂದ ಪೀಡಿತನಾಗಿ, ಹಲ್ಲುಗಳನ್ನು ಕಿಟಕಿಟ ಕಡದು, ಕಣ್ಣುಗಳನ್ನು ಮೇಲಕ್ಕೆ ಮಾಡಿ, ನಾಲಿಗೆಯನ್ನು ಕಚ್ಚುತ್ತಾ, ಬಹಳ ಸಂಕಟಪಡುತ್ತಾ, ಪ್ರಜ್ಞೆಯಿಲ್ಲದೆ ಇರು ತ್ತಾನೆ. ಅಂಧವನನ್ನು ಮೂರ್ಖರು ಚಿಕಿತ್ಸೆ ಮಾಡದೆ ಬಿಟ್ಟುಬಿಡುತ್ತಾರೆ. ಅವನಿಗೆ ಸ್ನೇಹ ಹಚ್ಚಿ, ಧಾನ್ಯದದಿಂದ ಬೆವರಿಸಿ, ಜೈಷ್ಠ ಮಧುವಿನಿಂದ ತಯಾರಿಸಿದ ತೈಲದಿಂದ ಅನು ವಾಸನವನ್ನು ಮಾಡಬೇಕು, ಮತ್ತು ಅವನಿಗೆ ತೀಕ್ಲ್ಪವಾಗಿ ಶಿರೋವಿರೇಚನ ಮಾಡಿಸ ತಕ್ಕದ್ದು. ಆ ಮೇಲೆ ಜೇ್ಯಷ್ಠ ಮಧುವಿನ ಚೂರ್ಣವನ್ನು ಮಿಶ್ರಮಾಡಿ, ಅಕ್ಕಿ ತೊಳೆದ ನೀರನ್ನು ಅವನಿಗೆ ಕೊಟ್ಟು ವಾಂತಿ ಮಾಡಿಸಬೇಕು; ಮತ್ತು ಹೆಚ್ಚಾದ ದೋಷವನ್ನು ನೋಡಿಕೊಂಡು ಅದಕ್ಕೆ ತಕ್ಕವಾದ ವಸಿ್ತಗಳಿಂದ ಉಪಚರಿಸತಕ್ಕದ್ದು. ಧನದಲ್ಲಿ