L ಉಪೋದ್ಘಾತ.
ಗಲಿ, ಸ್ನೇಹ (ತುಪ್ಪ ಮುಂತಾದ) ವನ್ನಾಗಲಿ ಕೂಡಿಸಿ ಕುಡಿಸಬೇಕು; ಅನಂತರ ದೇಹದ ಬಲವನ್ನೂ ಅಗ್ನಿಯ ಬಲವನ್ನೂ ನೋಡಿಕೊಂಡು, ಯವೆ-ಕೋಲ-ಹುರುಳಿ ಸೇರಿಸಿ ಮಾಡಿದ ಜಾಂಗಲಮಾಂಸದ ರಸದಿಂದ ಅನ್ನವನ್ನು ಉಣ್ಣಿಸುವದು,ಮತ್ತು ಈ ರೀತಿ ಒಂದೂವರೆ ತಿಂಗಳವರೆಗೆ ಅವಳನ್ನು ಮಧ್ಯದಲ್ಲಿರಿಸಬೇಕು. ಚರಕನ ಮತ ಪ್ರಕಾರ, ಬಾಣಂತಿಗೆ ಹಸಿವು ಉಂಟಾದ್ದನ್ನು ನೋಡಿ, ತುಪ್ಪ, ತೈಲ, ವಸೆ, ಮಜ್ಜೆ, ಇವುಗಳೊಳಗೆ ಅವಳಿಗೆ ಹಿತವಾದ ಯಾವದಾದರೊಂದನ್ನು ಹಿಪ್ಪಲಿ, ಹಿಪ್ಪಲೀಮೂಲ, ಕಾಡುಮೆಣಸಿನ ಬೇರು, ಚಿತ್ರ ಮೂಲ, ಒಣಶುಂಠಿ, ಇವುಗಳ ಚೂರ್ಣದೊಂದಿಗೆ ಕುಡಿಯಕೊಟ್ಟು, ಅವಳ ಕಿಬ್ಬೊಟ್ಟೆಗೆ ತುಪ್ಪವನ್ನೂ ಎಣ್ಣೆಯನ್ನೂ ಸವರಿ ದೊಡ್ಡ ವಸ್ತ್ರವನ್ನು ಸುತ್ತಬೇಕು; ಆ ಸ್ನೇಹವು ಜೀರ್ಣವಾದನಂತರ ಅದೇ ಹಿಪ್ಪಲಿ ಮುಂತಾದವುಗಳನ್ನು ಕೂಡಿಸಿ ಮಾಡಿದ ಯವಾಗೂ ಎಂಬ ಗಂಜಿಯನ್ನು ಸ್ನೇಹದೊಂದಿಗೆ ಪ್ರತಿದಿನ ಎರಡು ಹೊತ್ತು ಉಣ್ಣಲಿಕ್ಕೆ ಕೊಡಬೇಕು; ಊಟಕ್ಕೆ ಮೊದಲೇ ಎರಡು ಹೊತ್ತು ಬಿಸಿನೀರಿನಿಂದ ಸ್ನಾನ ಮಾಡಿಸಬೇಕು, ಈ ಪ್ರಕಾರ 5 ದಿನ ಅಧವಾ 7 ದಿನ ಅವಳನ್ನು ಕಾಪಾಡಿ, ಅನಂತರ ಕ್ರಮದಿಂದ ಅವಳಿಗೆ (ತೃಪ್ತಿಕರವಾದ ಆಹಾರ ಕೊಟ್ಟು) ಆಪ್ಯಾಯನ ಮಾಡಬೇಕು ಒಟ್ಟಾರೆ, ಸುಖವಾಗಿ ಹೆರುವದಕ್ಕೂ ಬಾಣಂತಿತನವು ನಿರ್ಭಯವಾಗಿ ಗತಿಸುವದಕ್ಕೂ, ಶಿಶುವಿನ ಸರಿಯಾದ ಬಳಿಕೆಗೂ, ಹೆಂಗಸು ಬಸುರಿಯಾಗಿರುವಾಗ್ಗೆ ತೆಗೆದುಕೊಳ್ಳಬೇಕಾದ ಜಾಗ್ರತೆಯೇ ಮುಖ್ಯವಾದದ್ದೆಂಭುದನ್ನು ಜನರು ವಸ್ತುತಃ ತಿಳಿಯದರಿಂದ ಬಹಳ ಕಷ್ಟಗಳು ಸಂಭವಿಸುತ್ತಿವೆ. ಔಷಧಗಳ ಪ್ರಮಾಣದ ವಿಚಾರದಲ್ಲಿ ಪಂಡಿತರೆನ್ನಿಸಿಕೊಳ್ಳುವವರೊಳಗೆ ಅನೇಕರಿಗೆ ಸಹ ಸಾಕಷ್ಟು ತಿಳಿವು ಇದ್ದ ಹಾಗೆ ಕಾಣುವುದಿಲ್ಲ. ಪ್ರಾಯಶ್ಚರಿಗೆ ಕೊಡುವುದಕ್ಕೆ ತಯಾರಿಸಿದ ಗೋರೋಜನಾದಿ ಮಾತ್ರೆಯನ್ನು ಒಂದು ವರ್ಷ ಪ್ರಾಯದ ಮಗುವಿಗೆ ಕೊಡುತ್ತಿದ್ದೇನೆ ಎಂದು ಹೇಳಿದ ಒಬ್ಬ ವೈದ್ಯನ ಹತ್ರ ಯಾವ ರಸದಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಆ ಮಾತ್ರೆಯನ್ನು ಕೊಡುತ್ತಿದ್ದಿ? ಎಂತ ಕೇಳಿದ್ದಕ್ಕೆ ಶುಂಠಿರಸದಲ್ಲಿ ಅರ್ಧ ಮಾತ್ರೆ ಕೊಟ್ಟಿದ್ದೇನೆ ಎಂತ ಉತ್ತರ ಸಿಕ್ಕಿತು ಇಂಥವರೆಲ್ಲ ಆಯುರ್ವೇದ ಚಿಕಿತ್ಸೆಯನ್ನು ನಡಿಸಿ ಹೆಸರು ಪಡದಿರುವಾಗ್ಗೆ, ಆಯುರ್ವೇದದ ಗೌರವ ಉಳೆಯುವದು ಹ್ಯಾಗೆ? ಮತ್ತು ಬಾಲ್ಯಮರಣ ಕಡಿಮೆಯಾಗುವುದು ಹ್ಯಾಗೆ? ಮಕ್ಕಳಿಗೆ ಪಿತ್ತಕೋಶದ ಶೂಫ ಉಂಟಾಗಿದೆ ಎಂತ ಕಂಡರೆ, ಅವುಗಳಿಗೆ ಜೇಪಾಳದ ಬೀಜ ಇತ್ಯಾದಿ ತೀಕ್ಷವಾದ ವಿರೇಚನವನ್ನು ನಿರರ್ಥಕವಾಗಿ ಬಹುಕಾಲ ದಿನ ಬಿಡದೆ ಕೊಟ್ಟು, ಉಂತ್ರ ಮಾಡುವ ಪೀಡೆಯು ಬಹು ದುಃಖಕರ. ಮಕ್ಕಳೊಳಗೆ ಬಾಲಗ್ರಹ ಎಂಬ ರೋಗವು ದಿನೇ ದಿನೇ ಹೆಚ್ಚಾಗುತ್ತಾ ಬರುತ್ತದೆ. ಇದಕ್ಕೆ ಹೇತು ಪ್ರಾಯಶಃ ತಾಯಿಯ ಮತ್ತು ಧಾತ್ರಿಯ ಅಪಚಾರಗಳು. ಆಯುರ್ವೇದದಲ್ಲಿ ಬಾಲಗ್ರಹಕ್ಕೆ ಬಲಿಗಳು ಹೇಳಲ್ಪಟ್ಟಿವೆಯಲ್ಲದೆ ಪ್ರತ್ಯೇಕವಾದ ಔಷಧ ಕಾಣುವದಿಲ್ಲ. ಬಾಲಗ್ರಹಚಿಹ್ನಗಳು ಕಂಡ ಮಗುವಿನಲ್ಲಿ ಕಾಣುವ ಅಜೀರ್ಣ ಮಲಬದ್ಧತೆ, ಕೆಮ್ಮು, ನೆಗಡಿ, ಮೈಕಾವು ಮುಂತಾದ ಉಪದ್ರವಗಳಿಗೆ ಪ್ರತ್ಯೇಕವಾಗಿ ಚಿಕಿತಗಳು ಉಕ್ತವಾಗಿದೆ. ಈ ಚಿಕಿತ್ಸೆಗಳನ್ನು ಸರಿಯಾಗಿ ನಡಿಸಿದ್ದಲ್ಲಿ, ದೋಷಗಳು ಸರಿಯಾಗಿ ಮಗುವಿಗೆ ಸೌಖ್ಯವಾಗದಿದ್ದರೆ, ಉಕ್ತವಾದ ಬಲಿಗಳನ್ನು ಮಾಡಿಸುವದಲ್ಲದೆ ಬೇರೆ ಕರ್ತವ್ಯ ವಿಲ್ಲ ಎಂಬ ತಾತ್ಪರ್ಯ, ಆ ಬಲಿಗಳು ಸಾರ್ಧಕವೂ, ಅಲ್ಲವೊ, ಎಂಬದನ್ನು ಅನುಭವದಿಂದ ನಿಶ್ಚಯಿಸುವದಕ್ಕೆ, ಅಂಥಾ ಬಲಿಗಳನ್ನು ಉಕ್ತವಾದ ಕ್ರಮದಲ್ಲಿ ನಡಿಸಲಿಕ್ಕೆ ಕಲಿತ ವೈದ್ಯರ