ಅ XXII - 438 - 33. ಅನೇನ ವಿಧಿನಾ ವಸ್ತಿಂ ದದ್ಯಾದ್ಯವಿಶಾರದಃ || ದ್ವಿತೀಯಂ ವಾ ತೃತೀಯಂ ವಾ ಚತುರ್ಧಂ ವಾ ಯಥಾರ್ಧತಃ || ನಿರೂಹಗಳ ಸಮ್ಯಗ್ನಿರೂಢಲಿಂಗೇ ತು ಪ್ರಾಪ್ತ ವಸ್ತಿ ನಿವಾರಯೇತ್ | ಸಂಖ್ಯಾ ನಿಯಮ ಅಪಿ ಹೀನಕ್ರಮಂ ಕುರ್ಯಾನ್ನ ತು ಕುರ್ಯಾದತಿಕ್ರಮಂ || ವಿಶೇಷಾತ್ಸುಕುಮಾರಾಣಾಂ ಹೀನ ಏವ ಕ್ರಮೋ ಹಿತಃ | (ಸು. 579.) ವಸ್ತಿ ಕ್ರಮದಲ್ಲಿ ಕುಶಲನಾದಂಥವನು ನಿರೂಹವಸ್ತಿಯನ್ನು ಇದೇ ವಿಧದಿಂದ ಎರಡನೇ, ಮೂರನೇ, ಅಥವಾ ನಾಲ್ಕನೇ, ಸರ್ತಿ ಬೇಕಾದ ಹಾಗೆ ಕೊಡಬಹುದು. ನಿರೂಹವು ಸರಿ ಯಾಗಿ ಆದ ಲಕ್ಷಣ ಕಂಡ ಮೇಲೆ, ನಿರೂಹವಸ್ತಿಯನ್ನು ನಿವಾರಿಸಬೇಕು. ನಿರೂಹವನ್ನು ಕ್ರಮಕ್ಕೆ ಕಡಿಮೆಯಾಗಿಯಾದರೂ ಮಾಡಬಹುದು. ಆದರೆ ಕ್ರಮಕ್ಕೆ ಅತಿಯಾಗಿ ಮಾಡ ಕೂಡದು. ಮುಖ್ಯವಾಗಿ ಎಳೇ ಶರೀರದವರಿಗೆ ಹೀನವಾದ ಕ್ರಮವೇ ಹಿತವಾದದ್ದು. ಷರಾ ಪ್ರಥಮತಃ ಕೊಟ್ಟ ನಿರೂಹವು ತಾನಾಗಿ ಪ್ರಯತ್ನ ವಿಲ್ಲದೆ ಹಿಂದಕ್ಕೆ ಬಂದಾಗ್ಗೆ ಮಾತ್ರ ಪುನಃ ಕೊಡಬೇ ಕಾದದ್ದು (ವಾ 91) ಕಾಲ-ಯೋಗ. ಗಳೆಂಬವ್ರ 34. ಸಮ್ಯಕ್ ನಿರೂಢಲಿಂಗಂ ತು ನಾಸಂಭಾವ್ಯ ನಿರ್ವಯೇತ್ || ಪ್ರಾಕ್ ಸ್ನೇಹ ಏಕಃ ಪಂಚಾನೇ ದ್ವಾದಶಾಸ್ಥಾಪನಾನಿ ಚ || ವಸ್ತಿಯ ಕರ್ಮ- ಸಾನ್ನಾಸನಾನಿ ಕರ್ಮೈವಂ ವಸ್ತಯಂಶದೀರಿತಾಃ || ಕಾಲಃ ಪಂಚದಶೈಕೋsತ್ರ ಪ್ರಾಕ್ ಸ್ನೇಹಾನೇ ತ್ರಯಸ್ತ್ರಧಾ | * ಷಟ' ಪಂಚ ವಸ್ತ್ರಸ್ತರಿತಾಃ ಯೋಗೋSಷ್ ವಸ್ತ ಯೋcತ್ರ ತು || ತ್ರಯೋ ನಿರೂಹಾಃ ಸ್ನೇಹಾಶ್ಚ ಸ್ನೇಹಾವಾದ್ಯನಯೋರುಭೌ | (ವಾ 92-3.) ನಿರೂಹವು ಸರಿಯಾಗಿ ಸಫಲವಾದ ಲಕ್ಷಣವನ್ನು ಕಾಣದೆ ಅದನ್ನು ನಿಲ್ಲಿಸಬಾರದು. ಆರಂಭದಲ್ಲಿ ಒಂದು ಸ್ನೇಹವಸ್ತಿ, ಅಂತ್ಯದಲ್ಲಿ ಐದು ಸ್ನೇಹವಸ್ತಿಗಳು, ಮಧ್ಯದಲ್ಲಿ ಹನ್ನೆರಡು ಅನುವಾಸನಗಳೊಂದಿಗೆ ಹನ್ನೆರಡು ನಿರೂಹವಸ್ತಿಗಳು, ಹೀಗೆ ಕೊಡಲ್ಪಟ್ಟ ಮೂವತ್ತು ವಸ್ತಿ ಗಳಿಗೆ ಕರ್ಮ ಎನ್ನುತ್ತಾರೆ. ಆರಂಭದಲ್ಲಿ ಒಂದು ಸ್ನೇಹ, ಅಂತ್ಯದಲ್ಲಿ ಮೂರು ಸ್ನೇಹಗಳು, ಮಧ್ಯದಲ್ಲಿ ಒಂದು ಸ್ನೇಹದನಂತರ ಒಂದು ನಿರೂಹದಂತೆ ಕೊಡಲ್ಪಟ್ಟ ಆರು ಸ್ನೇಹಗಳು ಮತ್ತು ಐದು ನಿರೂಹಗಳು, ಹೀಗೆ ಉಪಯೋಗಿಸಿದ ಹದಿನೈದು ವಸ್ತಿಗಳಿಗೆ ಕಾಲ ಎನ್ನು ತ್ತಾರೆ. ಆರಂಭದಲ್ಲಿ ಒಂದು ಸ್ನೇಹ, ಮಧ್ಯದಲ್ಲಿ ಮೂರು ನಿರೂಹಗಳು ಮತ್ತು ಮೂರು ಸ್ನೇಹಗಳು ಒಂದರ ನಂತರ ಒಂದರಂತೆ, ಅಂತ್ಯದಲ್ಲಿ ಒಂದು ಸ್ನೇಹ, ಹೀಗೆ ಕೊಡಲ್ಪಟ್ಟ ಎಂಟು ವಸ್ತಿಗಳಿಗೆ ಯೋಗವೆನ್ನುತ್ತಾರೆ. 35. ಯಸ್ಯ ಕ್ರಮೇಣ ಗಚ್ಛಂತಿ ವಿಟ್ ಪಿತ್ತ ಕಫವಾಯವಃ | ಸಿಹ ಸರಿಯಾ ಲಾಘವಂ ಚೋಪಜಾಯೇತ ಸುನಿರೂಢಂ ತಮಾದಿಶೇತ್ || ದ್ದರ ಲಕ್ಷಣ (ಸು. 579.) ಯಾವನಿಗೆ ನಿರೂಹವಸ್ತಿಯನ್ನು ಉಪಯೋಗಿಸಿಕೊಂಡದ್ದರಿಂದ, ಮಲ, ಪಿತ್ತ, ಕಫ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.