ಅ, xxii. - 440 - ದೇಯಂ ಪ್ರಮಾಣಂ ಪರಮಮರ್ವಾಗ್ಯುದ್ಧಿವಿಕಲ್ಪಿತಂ || ಔರಭಃ ಶೌಕರೋ ವಾಪಿ ವಸ್ತಿರಾಜಶ್ಚ ಪೂಜಿತಃ || ತದಲಭೇ ಪ್ರಯುಂಜೀತ ಗಲಚರ್ಮ ತು ಪಕ್ಷಿಣಾಂ | ಅಸ್ಕಾಲಾಭೇ ದೃತೇಃ ಪಾದೋ ಮೃದುಚರ್ಮ ತತೋSಪಿ ವಾ || ಅಧಾತುರಮುಪಸ್ಸಿಗ್ಧಂ ಸುನ್ನಂ ಪ್ರಧಿತಾಶಯಂ ! ಯವಾಗೂಂ ಸಮೃತಕ್ಷೀರಾಂ ಪೀತವಂತಂ ಯಧಾಬಲಂ || ನಿಷಣ್ಣ ಮಾಜಾನುಸಮೇ ಪೀರೇ ಸ್ಥಾನಾಶ್ರಯೇ ಸಮೇ | ಸ್ವಚ್ಛವಸ್ತಿಮೂರ್ಧಾನಂ ತೈಲೇನೋಷ್ಟೇನ ಮಾನವಂ || ತತಃ ಸಮಂ ಸ್ಥಾಪಯಿತ್ವಾ ನಾಲಮಸ್ಯ ಪ್ರಹರ್ಷಿತಂ || ಪೂರ್ವಂ ಶಲಾಕಯಾನ್ನಿಷ್ಠ ತತೋ ನೇತ್ರಮನಂತರಂ || ಶನೈಃ ಶನೈರ್ಚ್ಛತಾಭ್ಯಕ್ತಂ ವಿದಧ್ಯಾದಂಗುಲಾನಿ ಷಟ್ | ತತೋವಪೀಡಯೇದ್ಯಂ ಶನೈರ್ನೇತ್ರಂ ಚ ನಿರ್ಹರೇತ್ || (ಸು. 575-76) ಷರಾ * 4 ಪ್ರಕುಂಚಂ ಚಾತ್ರಕೀರ್ತಿತಂ” ಎಂಬ ಪಾರವೇ ಸರಿಯಾಗಿರಬೇಕು ಕುಚ್ಚ ಎಂಬ ಶಬ್ದವು ಅನೇಕ ನಿಘಂಟುಗಳಲ್ಲಿ ಕಾಣುವದಿಲ್ಲ ಉತ್ತರವಸ್ತಿಯೆಂಬದರ ವಿಧಿಯು ಹ್ಯಾಗಂದರೆ -ಅದರ ನಳಿಗೆಯು ರೋಗಿಯ ಬೆರಳ ಲೆಕ್ಕದಲ್ಲಿ (ಗಂಡಸರಿಗೆ) ಹದಿನಾಲ್ಕು ಅಂಗುಲವಿರಬೇಕು. ನಳಿಗೆಯ ತುದಿಯು ಜಾಜಿ ಹೂವಿನ ತೊಟ್ಟಿನಷ್ಟು ತೋರ ಮತ್ತು ಅದರ ರಂಧವ್ರ ಸಾಸಿವೆಕಾಳು ಹೋಗುವಷ್ಟು ಇರ ಬೇಕು. ಕೆಲವರು ಬಲ್ಲವರು ಮೇಢದ ಉದ್ದಕ್ಕೆ ಸರಿ ಅದರ ಉದ್ದ ಇರಬೇಕನ್ನುತ್ತಾರೆ. ಇದಕ್ಕೆ ಸ್ನೇಹದ ಪರಮಾವಧಿ ಪ್ರಮಾಣ ಒಂದು ಪಂ. 25 ವರ್ಷಗಳಿಗಿಂತ ಕೆಳಗಿನವರಿಗೆ ಪ್ರಮಾಣವನ್ನು ಬುದ್ದಿಯಿಂದ ನಿಶ್ಚಯಿಸತಕ್ಕದ್ದು (ಕ್ರಮದಿಂದ ತಗ್ಗಿಸಬೇಕು. ಕಿವಿಯು ಗಂಡಸರಿಗಾದರೆ ಮಧ್ಯದಲ್ಲಿ, ಹೆಂಗಸರಿಗಾದರೆ ತುದಿಯಿಂದ ನಾಲ್ಕು ಅಂಗುಲದಲ್ಲಿ ಇರ ಬೇಕು; ಮತ್ತು ಅದು ಹೆಂಗಸರ ಮೂತ್ರಮಾರ್ಗದಷ್ಟು ತೋರ, ಹತ್ತು ಅಂಗುಲ ಉದ್ದ, ಮತ್ತು ಹೆಸರುಕಾಳು ಹೋಗುವಷ್ಟು ರಂಧ್ರವುಳ್ಳದ್ದಾಗಿರಬೇಕು. ಅವರ ಹೆರುವ ಮಾರ್ಗ ದಲ್ಲಿ ನಳಿಗೆಯನ್ನು ನಾಲ್ಕು ಅಂಗುಲ ಹೊಗಿಸಬೇಕು; ಮೂತ್ರಮಾರ್ಗದಲ್ಲಿಯಾದರೆ ಎರಡು ಅಂಗುಲ; ಕನೈಯರಾದರೆ ಮೂತ್ರ ಮಾರ್ಗದಲ್ಲಿ ಒಂದೇ ಅಂಗುಲ ಹೊಗಿಸಬೇಕು, ಅವ ರಿಗೆ ಅಂಗುಲದ ವಿಧಿ ಹ್ಯಾಗಂದರೆ ಇವರ ವಿಷಯದಲ್ಲಿ ಪ್ರಕೃತ ಎಂಬದು ಆಯಾ ಜನರ ಎರಡು ಬೆರಳುಗಳ ಬುಡದಷ್ಟು ಆಗಿರುತ್ತದೆ. ಸ್ನೇಹದ ಅಂಧಾ ಒಂದು ಪ್ರಸೃತ ಪರಮಾವಧಿ ಪ್ರಮಾಣವಾಗಿರುತ್ತದೆ. ಅದಕ್ಕೆ ಕಡಿಮೆಯಾಗಿ ಬುದ್ದಿಯಿಂದ ಪ್ರಮಾಣವನ್ನು ನಿಶ್ಚಯಿಸ ಬೇಕು. ಕುರಿಯ, ಕಾಡು ಹಂದಿಯ, ಅಧವಾ ಆಡಿನ, ಮೂತ್ರಕೋಶವು ಪ್ರಶಸ್ತ, ಅದು ಸಿಕ್ಕ ದಿದ್ದರೆ, ಪಕ್ಷಿಗಳ ಕುತ್ತಿಗೆಯ ಚರ್ಮವನ್ನು ಉಪಯೋಗಿಸಬೇಕು. ಅದೂ ಸಿಕ್ಕದಾಗ್ಗೆ, ತಿದಿಯ ಬುಡ, ಅದೂ ಇಲ್ಲದಾಗ ಮೃದು ಚರ್ಮ, ಆಗಬಹುದು. ಈಗ ರೋಗಿಯನ್ನು ಸ್ನೇಹ ಹಚ್ಚಿ ಬೆವರಿಸಿದ ಮೇಲೆ, ಮಲಮೂತ್ರಾದಿ ವಿಸರ್ಜನ ಮಾಡಿಸಿ, ತುಪ್ಪ ಹಾಲು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.