LII ಉಪೋದ್ಘಾತ 13. ಎಷ್ಟೋ ಸಹಸ್ರ ವರ್ಷಗಳ ಹಿಂದೆ, ಆ ಕಾಲದ ಅಪ್ರೌಢ ಅನುಭವದ ಮೇಲೆ ರಚಿತವಾದ ಈ ಪುರಾತನ ಗ್ರಂಥಗಳನ್ನು ಉದ್ಧರಿಸುವದಕ್ಕಿಂತ ಆಧುನಿಕವಾದ ಮತ್ತು ಸಾಮಾನ್ಯವಾಗಿ ಸಮಾನ ಪದವಿಯನ್ನು ಪಡೆದಿರುವ ಪಾಶ್ಚಾತ್ಯ ವೈದ್ಯವನ್ನೇ ಹೆಚ್ಚಿನ ಪ್ರಚಾರಕ್ಕೆ ತರುವದು ಒಳ್ಳೇದಲ್ಲವೋ ಎಂಬ ಜಿಜ್ಞಾಸವು ಸಹಜವಾಗಿ ಎಲ್ಲರಲ್ಲಿಯೂ ಹುಟ್ಟತಕ್ಕುದಾದ್ದು. ಅದನ್ನು ಸ್ವಲ್ಪ ಆಲೋಚಿಸುವ, ಹತ್ತು ವರ್ಷಗಳ ಹಿಂದೆ ಈ ಬ್ರಿಟಿಷ್ ಹಿಂದುಸ್ಥಾನದಲ್ಲಿ, ಚಿಕ್ಕವೂ ದೊಡ್ಡವೂ ಸೇರಿ, 2685 ಆಸ್ಪತ್ರೆಗಳು ಇದ್ದವು ಅಂತ ಕಾಣುತ್ತದೆ. ಈ ಭಾಗದ ಜನಸಂಖ್ಯೆಯು ಸುಮಾರು 244,000,000 ವಾದ್ದರಿಂದ, 90,875 ಜನರಿಗೆ ಒಂದರ ಪ್ರಕಾರ ಆಸ್ಪತ್ರೆಗಳು ಇದ್ದ ಹಾಗೆ ಆಯಿತು. ಆ ಆಸ್ಪತ್ರಿ ಸಂಖ್ಯೆಯಿಂದ 1901ನೇ ಇಸವಿಯ ಗ್ರಾಮಗಳ ಮತ್ತು ಪಟ್ಟಣಗಳ ಸಂಖ್ಯೆಯಾಗಿದ್ದ 730,634ನ್ನು ವಿಭಾಗಿಸಿದರೆ, 272 ಗ್ರಾಮಗಳಿಗೆ ಒಂದು ಆಸ್ಪತ್ರೆ ಇತ್ತು ಅಂತ ತಿಳಿಯುತ್ತದೆ ಎಲ್ಲಾ ಜನರು ತಮ್ಮ ಸಂಕಟಪರಿಹಾರಕ್ಕೆ ಆಸ್ಪತ್ರೆಗಳನ್ನೇ ಆಧರಿಸಬೇಕಾದರೆ, ಈಗಿನ ಆಸ್ಪತ್ರಿ ಸಂಖ್ಯೆಯನ್ನು ನೂರು ಪಾಲಷ್ಟಾದರೂ ಏರಿಸಬೇಕಾದೀತು. ಕಳೆದ ಹತ್ತು ವರ್ಷಗಳಲ್ಲಿ ಆಸ್ಪತ್ರೆಗಳ ಸಂಖ್ಯೆಯು ಸ್ವಲ್ಪ ಮಟ್ಟಿಗೆ ಏರಿರಬೇಕು. 1900ನೇ ಇಸವಿಯಲ್ಲಿ 2313 ಇದ್ದದ್ದು 1910ನೇ ಇಸವಿಯೊಳಗೆ 2685 ಕ್ಕೆ ಏರಿತ್ತೆಂದರೆ, ಸರಾಸರಿ ವರ್ಷಕ್ಕೆ 37ರಂತೆ ಇಡೀ ಭರತ ಖಂಡದ ಬ್ರಿಟಿಷ ರಾಜಧಾನಿಯಲ್ಲಿ ಏರಿದಂತಾಯಿತು. ಈ ಜಿಲ್ಲೆಯಲ್ಲಿ ಮೂರು ಮೈಲುಗಳ ದೂರಕ್ಕೆ ಒಂದರಂತೆ ಆಸ್ಪತ್ರೆಗಳನ್ನು ಸ್ಥಾಪಿಸುವದಾದರೂ, 260ರ ಮೇಲೆ ಆಸ್ಪತ್ರೆಗಳು ಬೇಕಾಗುವವು. ಆದ್ದರಿಂದ ಈಗ ಇರುವ ಸಂಖ್ಯೆಯ ನೂರು ಪಾಲಷ್ಟು ಹೆಚ್ಚು ಬೇಕಾಗುವದೆಂಬ ಅಂದಾಜು ಅತಿಶಯವಲ್ಲ. ಈಗ ಖರ್ಚಿನ ವಿಷಯ ಆಲೋಚಿಸಿದರೆ, 1911ನೇ ಇಸವಿಯಲ್ಲಿ ಸರಕಾರವು ವೈದ್ಯ ಸಹಾಯಕ್ಕಾಗಿ ಖರ್ಚು ಮಾಡಿದ್ದು 125 ಲಕ್ಷ ರೂಪಾಯಿಯಂತ ಕಾಣುತ್ತದೆ. ಅದರ ನೂರರಷ್ಟಂದರೆ 129 ಕೋಟಿ ರೂಪಾಯಿ ಆಗುತ್ತದೆ. ಸರಾಸರಿ ಮೇಲೆ ಒಂದು ಆಸ್ಪತ್ರೆಗೆ ವರ್ಷಕ್ಕೆ ಸುಮಾರು 5000 ರೂಪಾಯಿ ಖರ್ಚು ತಗಲುತ್ತದೆಂತ ಪರಿಗಣಿಸಬಹುದು. ಪಾಶ್ಚಾತ್ಯ ರೀತ್ಯಾ ಚಿಕಿತ್ಸಾ ವೃತ್ತಿ ನಡಿಸುವುದಕ್ಕೆ ಬೇಕಾದ ಅತ್ಯಂತ ಕೆಳಗಿನ ವಿದ್ಯಾಪೀಠವನ್ನೇರುವುದಕ್ಕೆ ಸಹ ಹಿಂದಿನ ಸಾಧಾರಣ ವಿದ್ಯಾಭ್ಯಾಸ ಕಾಲ ಸೇರಿ ಹದಿನೈದು ವರ್ಷಗಳ ಕಲಿಯುವಿಕೆ ಮತ್ತು ನಾಲ್ಕೈದು ಸಾವಿರ ರೂಪಾಯಿಯ ಖರ್ಚು ಬೇಕಾಗುವದೆಂದು, ಒಬ್ಬನು ರಾಜಸೇವಕನಾಗದೆ ಖಾಸಗಿಯಾಗಿ ವೈದ್ಯ ವೃತ್ತಿಯನ್ನು ನಡಿಸುವದಾದರೂ, ಅವನ ಪ್ರತಿಫಲವಾಗಿಯೂ ಔಷಧಗಳ ಖರ್ಚಾಗಿಯೂ, ಅಷ್ಟೇ ಅಂದರೆ 5000 ರೂಪಾಯಿಯಷ್ಟು ವರ್ಷಂಪ್ರತಿ ಸಿಕ್ಕಬೇಕಾದೀತು. ಈ ರೀತಿಯಾಗಿ ದ್ರವ್ಯವನ್ನು ವೈದ್ಯಕ್ಕೆ ವಿನಿಯೋಗಿಸುವದಕ್ಕೆ ನಮ್ಮ ಜನರಾಗಲಿ, ನಮ್ಮ ಸರಕಾರವಾಗಲಿ ಶಕ್ತರಾಗುವದು ಯಾವಾಗ? ಅದಲ್ಲದೆ, ಈಗಿನಕ್ಕಿಂತಲೂ ನೂರು ಪಾಲಷ್ಟು ಜನರು ಪಾಶ್ಚಾತ್ಯ ವೈದ್ಯ ವಿದ್ಯಾಸಂಪಾದನಕ್ಕೆ ಉಮೇದು ಪಡುವದಾದರೆ, ಅಷ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಕಷ್ಟು ಶಾಲೆಗಳು, ಅಧ್ಯಾಪಕರು ಮತ್ತು ಉಪಕರಣಗಳು ಎಲ್ಲಿ ಇವೆ. ಈ ಸಂದರ್ಭದಲ್ಲಿ ಇನ್ನೊಂದು ಸಂಗತಿ ವಿಚಾರ ಮಾಡತಕ್ಕದ್ದು ಉಂಟು. ಇತ್ತಲಾಗಿ ವಿಲಾಯತಿಯಲ್ಲಿ ನಡೆದ ಮಹಾಯುದ್ದ ಕಾಲದಲ್ಲಿ ಪಾಶ್ಚಾತ್ಯ ವೈದ್ಯರೀತ್ಯಾ ಅತ್ಯುಪಯುಕ್ತವಾದ ಔಷಧಾದಿಸಾಮಗ್ರಿಗಳು ಪರದೇಶಗಳಿಂದ ಬರುವದು ನಿಂತುಹೋಗಿ ಇಲ್ಲಿಯ ಡಾಕ್ಟರರ ಚಿಕಿತ್ಸಾ ಕ್ರಮಕ್ಕೆ ಉಂಟಾದ ಕಷ್ಟಗಳು ಬಹು ಮಂದಿಗಳಿಗೆ ಗೊತ್ತಾಗಿರ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು