- 450 - Xxxನೇ ಅಧ್ಯಾಯ. ಗಂಡೂಷ-ಕವಲ-ಪ್ರತಿನಾರಣ-ಲೇವ-ಮೂರ್ಧತೈಲ-ಕರ್ಣಪೂರಣ ವಿಧಿಗಳು. 1. ಚತುರ್ವಿಧಃ ಸ್ಯಾದ್ದಂಡೂಷ ಸೈಹಿಕಃ ಶಮನಸ್ರಧಾ | ಕವಲಗಂಡೂಷ ಶೋಧನೋ ರೋಪಣಶೈವ ಕವಲಶ್ಚಾಪಿ ತದ್ವಿಧಃ | (ಶಾ. 163.) ಗಳ ವಿಧಗಳು ಗಂಡೂಷವೂ, ಕವಲವೂ, ನಾಲ್ಕು ವಿಧ ಸೈಹಿಕ, ಶಮನ, ಶೋಧನ, ಮತ್ತು ರೋಹಣ. 2. ಸುಖಂ ಸಂಚಾರ್ಯತೇ ಯಾ ತು ಮಾತ್ರಾ ಸಾ ಕವಲೇ ಸ್ಮೃತಾ | ಕವಲಕ್ಕೂ ಗಂ ಅಸಂಚಾರ್ಯಾ ತು ಯಾ ಮಾತ್ರಾ ಗಂಡೂಷಃ ಸ ಪ್ರಕೀರ್ತಿತಃ | ದೂಷಕ್ಕೂ ಭೇದ (ಸು. 599.) - ಬಾಯಿಯೊಳಗೆ ಸಂಚರಿಸದ ಹಾಗೆ ತುಂಬಿಸುವ ಪ್ರಮಾಣವು ಗಂಡೂಷ ಎಂತ ಪ್ರಸಿದ್ದವಾ ಗಿದೆ. ಕವಲದಲ್ಲಿ ಪ್ರಮಾಣವು ಬಾಯಿಯೊಳಗೆ ಸುಖವಾಗಿ ಸಂಚರಿಸುವ ಹಾಗಿನದಾಗಿರುತ್ತದೆ. ಬೇರೆಬೇರೆ 3. ಗೋಘ್ನ ಸ್ನೇಹಿ ವಾತೇ ಸ್ವಾದುಶೀತೈಃ ಪ್ರಸಾದನಃ | - ಬೇರೆಬೇರೆ ಪಿತ್ತ ಕಟ್ಟ ಲವಣೆ ರೂಷ್ಟೆ ಶೋಧನಃ ಕಣೇ || ಗಂಡೂಷಾದಿಗಳ ಕಷಾಯತಿಕ್ತಮಧುರೈ ಕಟೂಸ್ಥೆ ರೋಪ ವ್ರಣೇ | ಉಪಯಿಗೆ ಚತುರ್ವಿಧಸ್ಯ ಚೈವಾಸ್ಯ ವಿಶೇಷೋಯಂ ಪ್ರಕೀರ್ತಿತಃ || (ಸು. 599 ) ೩ಗ್ಗ ಮತ್ತು ಉಷ್ಣ ದ್ರವ್ಯಗಳಿಂದ ತಯಾರಿಸಲ್ಪಡುವ ಕವಲ ಅಧವಾ ಗಂಡೂಷ ಸ್ನೇಹಿಕ, ಅದನ್ನು ವಾತದಲ್ಲಿ ಉಪಯೋಗಿಸತಕ್ಕದ್ದು. ಸೀ ಮತ್ತು ಶೀತದ್ರವ್ಯಗಳಿಂದ ತಯಾರಿಸ ಲ್ಪಟ್ಟಿದ್ದು ಶಮನ, ಅದು ಎತ್ತದಲ್ಲಿ ಉಪಯುಕ್ತ. ಖಾರವಾದ, ಹುಳಿಯಾದ, ಉಪ್ಪಾದ, ರೂಕ್ಷವಾದ ಮತ್ತು ಬಿಸಿಯಾದ ದ್ರವ್ಯಗಳಿಂದ ಮಾಡಿದ್ದು ಶೋಧನ; ಅದು ಕಫದಲ್ಲಿ ಉಪ ಯೋಗಿಸತಕ್ಕಂಧಾದ್ದು. ಚೊಗರು, ಕಹಿ, ಸೀ, ಕಟು ಮತ್ತು ಉಷ್ಣವಾದ ದ್ರವ್ಯಗಳಿಂದ ಮಾಡಲ್ಪಟ್ಟಿದ್ದು ರೋಪಣ, ಅದು ವ್ರಣದಲ್ಲಿ ಪ್ರಯೋಜನವುಳ್ಳದ್ದು. ಹೀಗೆ ನಾಲ್ಕು ವಿಧ ವಾದ ಕವಲಗಂಡೂಷಗಳ ಭೇದಗಳು ಹೇಳಲ್ಪಟ್ಟಿವೆ. 4. ದದ್ಯಾದ ವೇಷು ಸಂಪೂರ್ಣ೦ ಗಂಡೂಷ ಕೋಲಮಾತ್ರಕಂ | ದ್ರವ್ಯ ಪ್ರಮಾಣ ಕರ್ಷಪ್ರಮಾಣಃ ಕಲ್ಮಶ್ಚ ಕವಲೇ ದೀಯತೇ ಬುಧೈತ || (ಶಾ, 163.) ಗಂಡೂಷದಲ್ಲಿ ದ್ರವಪದಾರ್ಥಗಳೊಂದಿಗೆ ಅರ್ಧ ಕರ್ಷಪ್ರಮಾಣ ಚೂರ್ಣವನ್ನು ಕೂಡಿಸಬೇಕು; ಮತ್ತು ಕವಲದಲ್ಲಿ ಕಲ್ಕವನ್ನು ಬುದ್ದಿವಂತರು ಒಂದು ಕರ್ಷಪ್ರಮಾಣ ಉಪ ಯೋಗಿಸುತ್ತಾರೆ.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.