453 - ಆ XXIII ತ್ರಿವಿಧವಾದ ಬಹುಬಹುರವಿಶೋಪೀ ಚ | ಮಧ್ಯಮೋತ್ರಾಲೇಪಃ | ತತ್ರ ಲೇಪದ ಉಪ ಯೋಗ ರಕ್ತಪಿತ್ತಪ್ರಸಾದಕೃದಾಲೇಪಃ | ಪ್ರದೇಹೋ ವಾತಶ್ಲೇಷ್ಮ ಪ್ರಶಮನಃ ಸಂಧಾನಃ ಶೋಧನೋ ರೋಪಣ ಶೋಷವೇದನಾಪಹತ್ವ ತಸ್ಕೋಪ ಯೋಗಃ ಕ್ಷತಾಕ್ಷತೇಷು | (ಸು. 69 ) ಲೇಪದಲ್ಲಿ ಪ್ರಲೇಪ, ಪ್ರದೇಹ, ಆಲೇಪ, ಎಂತ ಮೂರು ವಿಧಗಳಿವೆ. ಅವುಗಳ ಭೇದ ವೇನೆಂದರೆ ಪ್ರಲೇಪವು ಶೀತ ಮತ್ತು ತೆಳ್ಳಗೆ, ಅದರಲ್ಲಿ ಒಣಗಿಸು ( ಆರಿಸುವಂಥಾದ್ದು ಮತ್ತು ಒಣಗಿಸುವ ಗುಣವಿಲ್ಲದಿರುವಂಥಾದ್ದು ಸಹ ಉಂಟು. ಪ್ರದೇಹವು ಉಷ್ಣ (ವಾತಕಫಕ್ಕೆ), ಅಧವಾ (ಪಿತ್ತರಕ್ತಕ್ಕ) ಶೀತವಿರಬಹುದು; ಅದು ಗಟ್ಟಿ, ಬಹಳ ದಪ್ಪವಲ್ಲದ್ದು ಮತ್ತು ಒಣ ಗಿಸುವ ಸ್ವಭಾವವಿಲ್ಲದ್ದು, ಮಧ್ಯಮ ತರದ್ದು ಆಲೇಪ. ಅವುಗಳೊಳಗೆ ಆಲೇಪದಿಂದ ರಕ್ತ ಪಿತ್ತಗಳು ಶಮನವಾಗುತ್ತವೆ. ಪ್ರದೇಹದಲ್ಲಿ ವಾತಶೇಷಗಳ ಶಮನ, ಕೂಡಿಸುವದು, ಶೋಧಿಸುವದು, ಬೆಳಿಸುವದು, ಮತ್ತು ಬಾಕನ್ನೂ ನೋವನ್ನೂ ಪರಿಹರಿಸುವದು, ಈ ಗುಣ ಗಳಿವೆ. ಆಲೇಪವು ಹುಣ್ಣಿದ್ದಲ್ಲಿಯೂ, ಹುಣ್ಣಿಲ್ಲದ ಬರೇ ಶೋಫೆಯಲ್ಲಿಯೂ, ಉಪಯೋಗ ವುಳ್ಳದ್ದಾಗಿರುತ್ತದೆ. ಷರಾ ಹಚ್ಚುವ ಗಂಧದಷ್ಟು ದಪ್ಪವಾದದ್ದು ಪ್ರಲೇಪ (ಅಬಹು' ಎಂಬಲ್ಲಿ ಬಹು' ಎಂತ ಪಾರಾ೦ತರ ಕಾಣುತ್ತದೆ ಆಗ್ಗೆ ಪ್ರದೇಹವು ದಪ್ಪವಾದದ್ದು ಎಂತ ಅರ್ಥವಾಗುತ್ತದೆ ಹಾಗೂ ಅದು ಆಲೇಪಪ್ರಲೇಪಗಳಿಗಿಂತ ದಪ್ಪ 1J _15. ಯಸ್ತು ಕೃತೇಪಯುಜ್ಯತೇ ಸ ಭೂಯಃ ಕಲ್ಪ ಇತಿ ಸಂಚ್ಚಾಂ ಲಭತೇ ಕಲ್ಕಲೇಪದ ನಿರುದ್ದಾಲೇಜನಸಂಜ್ಞಸೇನಾಸ್ತಾವಸನ್ನಿರೋಧೋ ಮೃದುತಾ ಪೂತಿ ಗುಣ ಮಾಂಸಾಪಕರ್ಷಣಮಂತರ್ನಿದೋ್ರಷತಾ ಪ್ರಣಶುದ್ದಿಶ ಭವತಿ | (ಸು. 69.) ಹುಣ್ಣುಗಳಲ್ಲಿ ಉಪಯೋಗಿಸಲ್ಪಡುವ ಲೇಪವು ಕಲ್ಕ ಎಂತ ಕರೆಯಲ್ಪಡುತ್ತದೆ. ಅದಕ್ಕೆ ಆಲೇಪ ಎನ್ನುವದಿಲ್ಲ. ಅದರಿಂದ (ರಕ್ತಾದಿಗಳ) ಸ್ರಾವದ ತಡೆ, ಮೃದುತ್ವ, ಕೊಳೆತ ಮಾಂಸ ವನ್ನು ಹೊರಗೆ ಹಾಕುವದು, ಒಳಗಿನ ದೋಷ (ಕೀವು ಪರಿಹಾರ ಮಾಡುವದು ಮತ್ತು ವ್ರಣದ ಶುದ್ದಿ ಉಂಟಾಗುತ್ತವ. 16. ಅವಿದಶ್ಲೇಷು ಶೋನೇಷು ಹಿತಮಾಲೇಪನಂ ಭವೇತ್ | ಶಮನಕರವಾದ ಲೇಪ ಯಧಾಪ್ತಂ ದೋಷಶಮನಂ ದಾಹಕಂಡೂರುಜಾಪಹಂ || (ಸು. 69.) ಪಕ್ವವಾಗದ ಶೋಭೆಗಳಲ್ಲಿ ಆಯಾ ದೋಷವನ್ನು ಶಮನ ಮಾಡಿ, (ಪಿತ್ತದ) ಉರಿ, (ಕಫದ) ತುರಿ ಮತ್ತು (ವಾತದ ನೋವನ್ನು ಪರಿಹರಿಸತಕ್ಕ ಆಲೇಪವು ಹಿತವಾಗುತ್ತದೆ. 17. ಮರ್ಮದೇಶೇಷು ಯೇ ರೋಗಾ ಗುಹ್ಪಿ ತಧಾ ನೃಣಾಂ | ಮರ್ಮಸ್ಥಳಗಳಿಗೆ ಸಂಶೋಧನಾಯ ತೇಷಾಂ ಹಿ ಕುರ್ಯಾಾಲೇಪನಂ ಭಿಷಕ್ 1) (ಸು. 69.) ಆಲ್ಪವೇ ಹಿತ ಮರ್ಮಸ್ಥಳಗಳಲ್ಲಿಯೂ, ಗುಹ್ಯಸ್ಥಾನಗಳಲ್ಲಿಯೂ ಜನರಿಗೆ ಉಂಟಾಗುವ ರೋಗಗಳ ಶೋಧನಕ್ಕೆ ಸಹ ವೈದ್ಯನು ಆಲೇಪನವನ್ನೇ ಮಾಡಬೇಕು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.