- 457 - ಅ. XXIII ತಕ್ಕ ವಿಧಿಕಾಲ ದಾಟಿದ ಕೂಡಲೇ ವಸ್ತಿಯನ್ನು ತಲೆಯಿಂದ ತೆಗೆದುಬಿಟ್ಟು, ತಲೆಯನ್ನು ಸುತ್ತಲು ಹಿಡಿದು, ದೇಹ ನೆಟ್ಟಗೆ ಇರಿಸಿ, ಸುಖಕರವಾದ ಬಿಸಿನೀರಿನಿಂದ ಸ್ನಾನಮಾಡಿಸತಕ್ಕದ್ದು. ಮರಾ ಅನಂತರ ಷಷ್ಟಿ ಕಾದಿ ಅಕ್ಕಿಯ ಅನ್ನವನ್ನು ಚಾಂಗಲ-ಅನೂಪ ಮಾ೦ಸರಸಗಳೊಂದಿಗೆ ಮತ್ತು ದಾಳಿಂಬ ಮುಂತಾದ ಹುಳಿಯೊಂದಿಗೆ ಕೊಟ್ಟು ಲೆಕ್ಕದಲ್ಲಿ ಉಣ್ಣಿಸಬೇಕು ಚಿ ಸಾ ಸಂ (ಪು 765 ) 26. ಸ್ನೇದಯೇತ್ಕರ್ಣಮೂಲೇ ತು ಕಿಂಚಿನ್ನು ಪಾರ್ಶ್ವಶಾಯಿನಃ | ಮೂತೈಃ ಸ್ನೇಹೈ ರಸೈಃ ಕೋಘ್ನಸ್ತತಃ ಸ್ತೋತ್ರಂ ಪ್ರಪೂರಯೇತ್ || ಕರ್ಣಪೂರಣ ಕರ್ಣಂ ಚ ಪೂರಿತಂ ರಕ್ಷೇಚ್ಚತಂ ಪಂಚ ಶತಾನಿ ಚ | - ಸಹಸ್ರಂ ವಾಪಿ ಮಾತ್ರಾಣಾಂ ಪ್ರೋತ್ರ ಕಂರಶಿರೋಗದೇ || (ಶಾ. 176.) ಕಿವಿಯ ಬುಡವನ್ನು ಹೊರಗಿನಿಂದ ತಿಕ್ಕಿ ಬೆವರಿಸಿ, ರೋಗಿಯನ್ನು ಸ್ವಲ್ಪ ಪಾರ್ಶ್ವಕ್ಕೆ ಒರಗಿ ಮಲಗಿಸಿ, ಮೂತ್ರಗಳನ್ನೋ, ಸ್ನೇಹಗಳನ್ನೋ, ರಸಗಳನ್ನೋ, ಹಿತವಾದ ಬಿಸಿಯಾ ಗಿರುವಾಗಲೇ, ಕಿವಿಯೊಳಗೆ ತುಂಬಿಸುವದು. ಹಾಗೆ ತುಂಬಿಸಿದ ಔಷಧವನ್ನು ಕಿವಿ, ಕಂಠ, ಮತ್ತು ತಲೆರೋಗಗಳಲ್ಲಿ (ಯಧಾಕ್ರಮವಾಗಿ) ನೂರು, ಐನೂರು, ಮತ್ತು ಸಹಸ್ರ, ಮಾತ್ರಾಕಾಲದ ವರೆಗೆ ಕಾಪಾಡಬೇಕು. ಸರಾ ನೋವು ಕಡಿಮೆಯಾಗುವ ವರೆಗೆ, ನೋವಿಲ್ಲದ ಸಂಗತಿಯಲ್ಲಿ ಒಂದು ನೂರು ಮಾತ್ರಾಕಾಲ, ಇಟ್ಟು ಕೊಳ್ಳಬೇಕಾಗಿ ವಾ (ಪು 103 )
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.