ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 481 481 -

  • XXVI

ನಸ್ಯ, ಶಿರೋವಿರೇಕ, ಎಂಬ ಎರಡು ವಿಧವಾದ ನಸ್ಯದಲ್ಲಿಯೂ (ಹೀನಾತಿಮಾತ್ರ, ನಸ್ಯದ್ರವ್ಯವು ಅತಿ ಶೀತವಾಗಿರುವದು, ಅಥವಾ ಅತಿ ಉಷ್ಣವಾಗಿರುವದು, ಒಂದೇ ಸರ್ತಿ ಹಾಕುವದು, ತಲೆಯನ್ನು ಅತಿಯಾಗಿ ಬೊಗ್ಗಿ ಸುವದು, ಒಳಗೆ ಎಳಕೊಳ್ಳುವದು, ಅಲ್ಲಾಡಿಸು ವದು, ನುಂಗುವದು, ಪ್ರತಿಷೇಧಿಸಿರುವಲ್ಲಿ ಉಪಯೋಗಿಸುವದು, ಇವುಗಳಿಂದ ಉಂಟಾಗುವ ವ್ಯಾಧಿಗಳು ಎರಡು ವಿಧ: ಕೆಲವು ದೋಷದ ಕೆದರುವಿಕೆಯಿಂದ, ಕೆಲವು ಕ್ಷಯದಿಂದ ಎಂತ ತಿಳಿಯಬೇಕು. ದೋಷದ ಕೆದರುವಿಕೆಯ ನಿಮಿತ್ತವಾಗಿ ಉಂಟಾದವುಗಳನ್ನು ಶಮನ-ಶೋಧನ ಗಳಿಂದ ಜಯಿಸಬೇಕು, ಆದರೆ ಕ್ಷಯನಿಮಿತ್ತವಾದವುಗಳಲ್ಲಿ ತಕ್ಕವಾದ ಬೃಂಹಣವು ಹಿತ ವಾಗುತ್ತದೆ. 20. ಧ್ಯಾನಂ ವಿರೇಚನಕ್ರೂರ್ಣೋ ಯುಂಜ್ಞಾ,ಂ ಮುಖವಾಯುನಾ || ಪ್ರಧಮನಕ್ಕೆ ನಳಿಗೆ ಷಡಂಗುಲದ್ವಿಮುಖಯಾ ನಾಡ್ಯಾ ಭೇಷಜಗರ್ಭಯಾ || (ವಾ. 95.) ಪ್ರಧಮನ ನಸ್ಯದಲ್ಲಿ ವಿರೇಚನಕರವಾದ ಔಷಧದ ಚೂರ್ಣವನ್ನು ಆರಂಗುಲ ಉದ್ದ ವಾದ ಮತ್ತು ಎರಡು ಬಾಯಿಗಳುಳ್ಳ ನಳಿಗೆಯಲ್ಲಿ ತುಂಬಿಸಿ ಬಾಯಿಯ ಗಾಳಿಯಿಂದ ಊದಿ ಉಪಯೋಗಿಸತಕ್ಕದ್ದು. 61