ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e XXVII - 488 - 14. ನ ಕುರ್ವೀತ ಶಿರಾಮೋಕ್ಷಂ ಕೃಶಸ್ಯಾತಿವ್ಯವಾಯಿನಃ | ಕೀಬಸ್ಯ ಭೀರೋಗFರ್ಭಿಣ್ಯಾಃ ಸೂತಾಯಾಃ ಪಾಂಡುರೋಗಿಣಃ | ಪಂಚಕರ್ಮವಿಶುದ್ಧಸ್ಯ ಪೀತಸ್ನೇಹಸ್ಯ ಚಾರ್ಶಸಾಮ್ | ಸರ್ವಾಂಗಶೋಧಯುಕ್ತಾನಾಮುದರಿಶ್ವಾಸಕಾಸಿನಾಮ್ || ಛರ್ದತೀಸಾರಕುಷ್ಠಾನಾಮತಿಸ್ತಿನ್ನತನೋರಪಿ | ರಕ್ತಸ್ರಾವಣಕ್ಕೆ ಊನಷೋಡಶವರ್ಷಸ್ಯ ಗತಸಪ್ತತಿಕಸ್ಯ ಚ || ಅಯೋಗ್ಯರು ಆಘಾತಾತ್ಸ್ತುತರಕ್ತಸ್ಯ ಶಿರಾಮೋ ನ ಶಸ್ಯತೇ | ಏಷಾಂ ಚಾತ್ಯಯಿಕೇ ರೋಗೇ ಜಲೌಕಾಭಿರ್ವಿನಿರ್ಹರೇತ್ || ತಥಾ ಚ ವಿಷಜುವಾನಾಂ ಶಿರಾಮೋ ನ ಶಸ್ಯತೇ | ಗೋಶೃಂಗೇಣ ಜಲೌಕಾಭಿರಲಾಭಿರಪಿ ತ್ರಿಧಾ || ವಾತಪಿತ್ತ ಕ್ಥಿರ್ದುಷ್ಟಂ ಶೋಣಿತಂ ಸ್ರಾವಯೇದ್ ಬುಧಃ | (ಭಾ. ಪ್ರ. 232.) ಕೃಶನಾದವ, ಅತಿಯಾಗಿ ಮೈದುನ ಮಾಡಿದವ, ಷಂಡ, ಹೇಡಿ, ಗರ್ಭಿಣಿ, ಬಾಣಂತಿ, ಪಾಂಡುರೋಗಿ, ಪಂಚಕರ್ಮಗಳಿಂದ ಶೋಧನಮಾಡಿಸಿಕೊಂಡವ, ಸ್ನೇಹಪಾನ ಮಾಡಿದವ, ಮೂಲವ್ಯಾಧಿಯವರು, ಸರ್ವಾಂಗಶೋಭೆಯುಳ್ಳವರು, ಉದರವ್ಯಾಧಿಯವರು, ಉಬ್ಬಸ ಮತ್ತು ಕೆಮ್ಮು ಉಳ್ಳವರು, ವಾಂತಿಯುಳ್ಳವರು, ಅತಿಸಾರದವ, ಕುಷ್ಠ ರೋಗದವ, ಅತಿಯಾಗಿ ಸ್ನೇದಮಾಡಿಸಿಕೊಂಡ ಶರೀರದವ, ಹದಿನಾರು ವರ್ಷಕ್ಕೆ ಕಡಿಮೆ ಪ್ರಾಯದವ, ಎಪ್ಪತ್ತು ವರ್ಷ ಪ್ರಾಯ ಮಿಕ್ಕಿದವ, ಗಾಯಪಟ್ಟು ರಕ್ತ ಸುರಿದವ, ಇವರಿಗೆಲ್ಲಾ ಶಿರಾನಾಳವನ್ನು ಚುಚ್ಚಿ ರಕ್ತವನ್ನು ತೆಗೆದುಬಿಡುವದು ಪ್ರಶಸ್ತವಲ್ಲ ಇವರ ರೋಗವು ಅತಿಯಾಗಿ ಬೆಳೆದಿರು ವಲ್ಲಿ ಜಿಗಳೆಗಳನ್ನು ಕಚ್ಚಿಸಿ ರಕ್ತವನ್ನು ತೆಗೆದುಬಿಡಬೇಕು. ಹಾಗೆಯೇ ವಿಷಪೀಡೆಯವರಿಗೂ ಶಿರಾಮೋಕ್ಷಣವು ಪ್ರಶಸ್ತವಲ್ಲ. (ಶಿರಾಮೋಕ್ಷಣ ನಿಷಿದ್ಧವಾದವರಿಗೆ ರಕ್ತ ತೆಗೆಯುವದು ಅವಶ್ಯಕವಾದಾಗ್ಗೆ ಮುಂತಾದ ಸಂದರ್ಭಗಳಲ್ಲಿ) ವಾತದೋಷದವರಿಗೆ ಗೋವಿನ ಕೋಡಿ ನಿಂದ, ಪಿತ್ತದೋಷದವರಿಗೆ ಜಿಗಳೆಗಳಿಂದ ಮತ್ತು ಕಫದೋಷದವರಿಗೆ ಸೋರೆಕಾಯಿಯ ಬುರುಡೆಯಿಂದ, ಈ ಪ್ರಕಾರ ಮೂರು ವಿಧವಾಗಿ ಬುದ್ದಿವಂತನು ರಕ್ತವನ್ನು ತೆಗೆದುಬಿಡ ಬೇಕು.