ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LX1 ಉಪೋದ್ಘಾತ ವೈದ್ಯನ ಕರ್ತವ್ಯವಲ್ಲದೆ ಬೇರೆ ಇಲ್ಲ. ಆದ್ದರಿಂದ ವಾತ-ಪಿತ್ತ-ಕಫಗಳು ಒಂದೊಂದಾಗಿ ದೋಷಕರವಾಗುವದರಿಂದ ಮೂರು, ಎರಡೆರಡಾಗಿ ದೋಷಕರವಾಗುವದರಿಂದ ಮೂರು, ಮೂರೂ ಒಟ್ಟಾಗಿ ದೋಷಮಾಡುವದರಿಂದ ಒಂದು, ಹೀಗೆ ಏಳೇ ರೋಗಗಳ ಪ್ರಧಾನ ವರ್ಗಗಳು ಜಗತ್ತಿನಲ್ಲಿ ಕಾಣುವ ಸರ್ವರೋಗಗಳ ಸರ್ವಲಕ್ಷಣಗಳೂ ಆ ಏಳು ಪ್ರಧಾನ ರೋಗಗಳ ಲಕ್ಷಣಗಳೇ. ಆ ಲಕ್ಷಣಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳ ಸಮುದಾಯಗಳನ್ನು ಲೋಕವ್ಯವಹಾರಾರ್ಥವಾಗಿ ಬೇರೆ ಬೇರೆ ಆಗಿ ವಿಂಗಡಿಸಿ, ಆಯಾ ಸಮುದಾಯದಲ್ಲಿ ಪ್ರಧಾನವಾದ ಲಕ್ಷಣದ ಮೇಲೆ ಆ ಸಮುದಾಯಕ್ಕೆ ಹೆಸರಿಡುವದು ಸಂಪ್ರದಾಯವಾಗಿ ಬಂದದೆ ಅಂಧಾ ಹೆಸರು ಮುಖ್ಯವಾದ್ದಲ್ಲ ಮತ್ತು ಅಂಧಾ ಹೆಸರನ್ನು ಆಧರಿಸಿಯೇ ಚಿಕಿತ್ಸೆ ಮಾಡಬಾರದೆಂತ ವಿಶೇಷವಾಗಿ ಆಯುರ್ವೇದ ಪ್ರತಿಪಾದಕರಾದ ಋಷಿಗಳು ಎಚ್ಚರಿಸಿರುತ್ತಾರೆ ಪಾಶ್ಚಾತ್ಯ ವೈದ್ಯರು ರೋಗದ ನಾಮಕರಣದ ವಿಷಯದಲ್ಲಿ ಒಹು ಶ್ರಮಪಟ್ಟು, ಅನಂತರ ಆ ನಾಮವನ್ನೇ ಆಧರಿಸಿ ಚಿಕಿತ್ಸೆ ಮಾಡುತ್ತಿರುವ ಅವರ ಆಚರಣವೇ ಅಶಾಸ್ತ್ರೀಯ ಮತ್ತು ಅನರ್ಧಕರ ಎಂಬದು ನಮ್ಮ ಮತವಾಗಿರುತ್ತದೆ. ಈಗ, ಹಿಂದೆ ಪ್ರಸ್ತಾಪಿಸಿದ ಲಕ್ಷಣಸಮೂದಾಯಗಳಲ್ಲಿ ಜ್ವರವೇ ಪ್ರಧಾನ ಲಕ್ಷಣವಾಗಿ ಕಾಣುವ ಒಂದು ಸಮುದಾಯವಿರುವದರಿಂದ ಅದಕ್ಕೆ ಜ್ವರರೋಗ ಎಂಬ ಹೆಸರು ಬಂದದೆ ಈ ಜ್ವರದಲ್ಲಿ ಪಾಶ್ಚಾತ್ಯರು 'ಮಲೇರಿಯಲ್' ಎಂಬ ಜಾತಿ ಭೇದವನ್ನು ಆಯುರ್ವೇದದಲ್ಲಿ ವಿಷಮ' ಎಂತ ವಿಂಗಡಿಸಿ, ಅದರಲ್ಲಿ (ಸಂತತ) ಬಿಡದೇ ನಿತ್ಯ ಬರುವಂಧಾದ್ದು ಒಂದು, (ಸತತ) ದಿನದಲ್ಲಿ ಎರಡು ಸರ್ತಿ ಬಂದುಬಿಡುವಂಥಾದ್ದು ಒಂದು, (ಅನೇದ್ದು) ಅಹೋರಾತ್ರಿಗಳೊಳಗ, ಅಂದರೆ 24 ತಾಸುಗಳೊಳಗೆ, ಒಮ್ಮೆ ಬಂದು ಬಿಡುವಂಧಾದ್ದು ಒಂದು, (ತ್ರ್ಯಹಿಕ) ದಿನ ಬಿಟ್ಟು ದಿನ ಬಂದುಬಿಡುವಂಥಾದ್ದು ಒಂದು, (ಚಾತರ್ಧಿಕ) ಎರಡು ದಿನ ಬಿಟ್ಟು ಒಂದುಬಿಡುವಂಧಾದ್ದು ಒಂದು, ಹೀಗೆ ಐದು ವಿಭಾಗಗಳನ್ನು ಮಾಡಿದ್ದಾರೆ ಇದೇ ಎಭಾಗ ಗಳು ಪಾಶ್ಚಾತ್ಯರ ವೈದ್ಯದಲ್ಲಿಯೂ ಕಾಣುತ್ತವೆ. ಅವರು ಸಂತತಕ್ಕ ರಮಿಟ್ಟೆಂಟ್ (rmittent) ಅಧವಾ ರೆಮಿಟ್ಟೆಂಟ್ ಮಲೇರಿಯಲ್ (termittent 11:ula tal) ಎಂತಲೂ, ಸತತಕ್ಕೂ, ಅನೇದ್ಯುತ ಎಂಬದಕ್ಕೂ ಕೊಟಿಯನ್ (Quotidia11) ಎಂತಲೂ, ತ್ರ್ಯಾಹಿಕಕ್ಕೆ ಟಿರ್ಸಿಯನ (12ztun) ಎಂತಲೂ, ಚಾತುರ್ಥಿಗೆ ಕ್ವಾರ್ಟನ (Q11೩1 tuti) ಎಂತಲೂ ಹೆಸರಿಟ್ಟಿದ್ದಾರ ಅವರ ಈ ವ್ಯವಸ್ಥೆ ವಿಷಯವನ್ನು ಮುಂದೆ ಪ್ರತ್ಯೇಕವಾಗಿ ಆಲೋಚಿಸೋಣಗಾಗುವದು ಆಯುರ್ವೇದ ಪ್ರಕಾರ ವಿಷಮಜ್ವರಗಳು ಮೇಲೆ ಹೇಳಿದಂತೆ 5, ಕ್ರಮವಾದ ವಾತಾದಿ ದೋಷಗಳಿಂದುಂಟಾಗುವ ಜ್ವರಗಳು 7, ಭಯಶೋಕಾದಿ ಕಾರಣಗಳಿಂದ ಹುಟ್ಟುವ ಆಗಂತು ಜ್ವರಗಳು 13, ಸೇರಿ 25 ಅಲ್ಲದೆ ತ್ರಿದೋಷ ಅಧವಾ ಸನ್ನಿಪಾತ ಜ್ವರದಲ್ಲಿ ವಾತಾದಿಗಳ ಪ್ರವೃದ್ದ -ಮಧ್ಯ- ಹೀನಸ್ಥಿತಿಗಳ ಮೇಲೆ ಭೇದಗಳು 13 ಇರುವದರಿಂದ, ಒಟ್ಟು ಒರಛೇದ ಗಳು 37 ಆಗುತ್ತವೆಇವುಗಳ ವಿನಾ ಪ್ರಧಾನರೋಗಕ್ಕೆ ಉಪದ್ರವವಾಗಿ ಒಂದ ಜ್ವರ ಮತ್ತು ಮುಂದೆ ಬರತಕ್ಕ ರೋಗದ ಹೇತುವಾಗಿ ತೊಡಗಿದ ಜ್ವರ ಎಂಬ ಭೇದ ಬೇರೆ ಇರುತ್ತದೆ ಪುನಃ ಜ್ವರಾತಿಸಾರ ಎಂಬ ಬೇರೆ ರೋಗದೆ ತ್ರಿದೋಷಗಳನ್ನು ರೋಗಗಳ ಹೇತು ಗಳಾಗಿ ಒಪ್ಪತಕ್ಕವರು ಈ ಜ್ವರವಿಭಾಗಕ್ಕೆ ಆಕ್ಷೇಪವನ್ನು ಹೇಳ ಕಾರಣ ಎಲ್ಲ. ತ್ರಿದೋಷ ನ್ಯಾಯವನ್ನು ಕೆಳಗೆ ಪ್ರತ್ಯೇಕವಾಗಿ ವಿಮರ್ಶಿಸುವೆವು. ದಿ GY