ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ

ನಾನು ಸಬ್ ರಿಜಿಸ್ತ್ರಾರನಾಗಿ ಮುಲ್ಕಿಯಲ್ಲಿದ್ದ ಕಾಲದ ಮಧ್ಯ ೧೮೮೮ನೇ ಇಸವಿ ಅಗೋಸ್ತ ತಾರೀಕು ೧ನೇ ದಿನ ಎಂದಿನಂತೆ ಶಾಲೆಗೆ ಹೋಗಿ ಒಂದ ನನ್ನ ಅತಿಪ್ರೇಮದ ಸಹೋದರ, ವಿಶೇಷ ಬುದ್ದಿಯುಳ್ಳವನಾಗಿದ್ದ, ಹತ್ತು ವರ್ಷ ಪ್ರಾಯದ ರಾಘವೇಂದ್ರನೆಂಬ ಬಾಲಕನಿಗೆ ಆಮಶಂಕೆ ಆರಂಭವಾಗಿ, ಅಲ್ಲಿಯ ಹೊಸ್ಪಿಟಲ್ ಅಸಿಸ್ಟಾಂಟರು ಚಿಕಿತ್ಸೆ ನಡಿಸುತ್ತಿರುವಾಗ್ಗೆ, ೩ನೇ ತಾರೀಕಿನ ರಾತ್ರಿ ೪ ಘಂಟೆ ಸಮಯಕ್ಕೆ ಬಾಲಕನು ದೇವರಾಧೀನನಾದನು.ಆ ಮೂರನೇ ತಾರೀಕಿನ ಸಂಜೆಯ ವರೆಗೆ ನನಗಾಗಲೀ ಚಿಕಿತ್ಸಕರಿಗಾಗಲೀ ಬಅಲಕನ ರೋಗವು ಅಪಾಯಕರವಾಗಿದ್ದ ಸಂಗತಿ ಗೊತ್ತಾಗದರಿಂದ, ಅವನಿಗೆ ಅಸೌಖ್ಯವುಂಟಾದ ವರ್ತಮಾನವನ್ನು 16ಮೈಲು ದೂರದಲ್ಲಿದ್ದ ತಂದೆತಾಯಿಗಳಿಗೆ ತಿಳಿಸುವದರೊಳಗೇನೇ ಅವನು ಶರೀರತ್ಯಾಗ ಮಾಡುವದಾಯಿತು ದುಃಖದ ಮುಳ್ಳು ನನ್ನ ಹೃದಯದೊಳಗೆ ನೆಟ್ಟುಕೊಂಡು ಈಗಲೂ ಆಗಾಗ್ಗೆ ವೇದವನ್ನುಂಟುಮಾಡುತ್ತಿದೆ ಅದೇ ಶೋಕದಲ್ಲಿರುವಾಗ ನನಗೂ ಅದೇ ರೋಗವು ಪ್ರಾಪ್ತವಾಯಿತು. ನ್ನ ಚಿಕಿತ್ಸೆಗೆ ಆ ಊರಲ್ಲಿ ಪ್ರಸಿದ್ಧರಾಗಿದ್ದ ಆಯುರ್ವೇದೀಯ ಪಂಡಿತ ರೊಬ್ಬರನ್ನು ನನ್ನ ಸ್ನೇಹಿತರು ಕರತಂದರು ಅವರ ಚಿಕಿತ್ಸೆಯಲ್ಲಿ ನಾನು ಅಧಿಒಕವಾಗಿ ಕಷ್ಟಪಡುವವನಾದೆ . ಆದರೆ ಅವರ ಚಿಕಿತ್ಸೆ 2-3 ದಿನ ನಡೆಯುವಷ್ಟರಲ್ಲಿ ನನಗೆ ರಜಾಹುಕುಮು ಸಿಕ್ಕಲಾಗಿ, ನಾನು ಮಂಚಲನ್ನು ಹತ್ತಿ ನನ್ನ ಊರಮನೆಗೆ ಹೋದೆ ಅಂದೇ ಮಂಗಳೂರಿನಲ್ಲಿ ಜನೋಪಕಾರಾರ್ಧವಾಗಿ ಆಯುರ್ವೇದೀಯ ವೈದ್ಯವನ್ನು ಕಲಿತು ,ಬಹುಶ್ರಮದಿಂದ ರೋಗಿಗಳ ಚಿಕಿತ್ಸೆ ನಡಿಸಿ, ಮಹದ್ಯಶೋಲಾಭವನ್ನು ಪಡೆದಿದ್ದ ಶ್ರೀಮಂತ ಸಾವಕಾರ ನೆಲ್ಲಿಕಾಯಿ ಗುಂಡುರಾಯರ ಮಾತ್ರೆಗಳನ್ನು ನನ್ನ ತೀರ್ಧರೂಪರು ತಂದು ಅವರ ಅನುಜ್ಞೆ ಪ್ರಕಾರ ನನಗೆ ಕೊಡಲಾರಂಭಿಸಿದರಿಂದ ಆತ್ಯಾಶ್ಚರ್ಯಕರವಾಗಿ ನನಗೆ ಕ್ಷೇಮವಾಯಿತು. ಈ ಎರಡು ಸಂಗತಿಗಳು ಸರಕಾರ ಕೆಲಸದ ಮೇಲೆ ಊರಿಂದ ಊರಿಗೆ ಹೋಗಬೇಕಾದ ನನ್ನ ಅವಸ್ಥೆಯಲ್ಲಿ ವೈದ್ಯದ ಪರಿಚಯವಿಲ್ಲದರಿಂದ ನನಗುಂಟಾಗಬಹುದಾದ ಸಂಕಷ್ಟಗಳ ಕುರಿತು