ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LXVIII ಉಪೋದ್ಘಾತ ರೋಗಿಗೆ ಒಂದೆರಡು ಚಮಚೆ ಲಿಂಬೇರಸದಲ್ಲಿ ಒಂದು ಚಿಮಿಟಿ ಸಕ್ಕರೆ ಕೂಡಿಸಿ ಕೊಟ್ಟರೆ, ಅದೇ ದಿನದ ಚಳಿ ಬಾರದೆ ನಿಲ್ಲುತ್ತದೆ. ಹಾಗೆ ನಿಂತರೆ, 2ನೇ, 3ನೆ ಸರ್ತಿಯ ದಿನಗಳಲ್ಲಿ ಬೆಳಿಗ್ಗೆ ಒಮ್ಮೆ ಮಾತ್ರ ಅದೇ ರೀತಿ ಕ್ವಿನೀನನ್ನು ಸೇವಿಸಿ ಪಧ್ಯದಲ್ಲಿದ್ದರೆ, ಜ್ವರದ ತಾತ್ಕಾಲಿಕ ಪರಿ ಹಾರವಾಗುತ್ತದೆ ರೋಗದ ಮೂಲ ಹೋಯಿತೆಂತ ಧೈರ್ಯ ಪಡಬೇಕಾದರೆ, ದೋಷಕ್ಕೆ ತಕ್ಕವಾಗಿ ಆಯುರ್ವೇದರೀತ್ಯಾ ಔಷಧವನ್ನು ಮಾಡಿ, ದೋಷಗಳನ್ನು ಸ್ವಸ್ಥ ಸ್ಥಿತಿಗೆ ತರ ಬೇಕು ಪ್ರಧಮ ದಿನದಲ್ಲಿಯೇ ಜ್ವರ ನಿಲ್ಲದಿದ್ದರೆ ಕ್ವಿನೀನು ಆ ರೋಗಿಗೆ ನಿಷ್ಟ್ರಯೋಜನ ಎಂತ ನಿಶ್ಚಯಿಸಿ, ಬೇರೆ ಚಿಕಿತ್ಸೆಯನ್ನು ಮಾಡುವದೆ ಪ್ರಶಸ್ತ್ರ ಹಾಗೆ ಮಾಡದೆ, ದಿನಕ್ಕೆ 30-60 ಗ್ರೈನ ಪ್ರಕಾರ ಕ್ವಿನೀನನ್ನು ಸೇವಿಸುತ್ತಾ ಬಂದರೆ, ಒಳಗಿನ ಜ್ವರಕಾರಣವಾದ ಕ್ರಿಮಿ ಗಳಿಗೆ ಅದರಿಂದ ಎಷ್ಟು ಸಂಕಟವುಂಟಾಗುತ್ತದೊ, ಅದಕ್ಕಿಂತ ಹೆಚ್ಚಲ್ಲದಿದ್ದರೆ ಅಷ್ಟೇಯಾದರೂ ರೋಗಿಗೂ ಸಂಕಷ್ಟ ಉಂಟಾಗುತ್ತದೆಂಬದರಲ್ಲಿ ಸಂಶಯವಿಲ್ಲ ಜ್ವರದ ಶಾಂತತೆಗೋಸ್ಕರ ತಣ್ಣೀರ ಸ್ನಾನ ಮಾಡಿಸುವದು, ಅಶಕ್ತಿಗ ಬ್ರಾಂಡಿ ಕೊಡುತ್ತಾ ಬರುವದು, ಅನಿದ್ರೆಗೆ ಅಫೀಮು ಕೊಡುವದು ಇತ್ಯಾದಿ ಯೋಗಗಳು ಬುಡದಲ್ಲಿ ಪಸೆಯಿಲ್ಲದರಿಂದ ಒಣಗುತ್ತಾ ಬರುವ ಮರದ ಎಲೆಗಳಿಗೂ ಕೊಂಬೆಗಳಿಗೂ ನೀರನ್ನು ಸುರಿದರೆ ಎಷ್ಟೋ ಅಷ್ಟೇ ಪ್ರಯೋ ಜನವುಳ್ಳವು. ಎಲೆಗಳು ತತ್ಕಾಲ ಸ್ವಲ್ಪ ಸಜೀವವಾಗಿ ಕಂಡರೂ ಮರ ಸಾಯುವದು ನಿಶ್ಚಯ ಮಾತ್ರವಲ್ಲದೆ, ಅದು ಬೇಗನೇ ಕುಂಬಾಗಿ ಕೊಳೆಯ ಲಿಕ್ಕಾರಂಭಿಸುವದು ಈ ವಿಷಯದಲ್ಲಿ ಒಬ್ಬರು ಪಾಶ್ಚಾತ್ಯ ಡಾಕ್ಟರರೇ* ಹೇಳುವದೇನೆಂದರೆ - * ಈ ವಿಷಗಳು ದೇಹದೊಳಗೆ ಆಕಾರ ಹೊಂದಲಿಕ್ಕೆ ಆರಂಭವಾದ ಕೂಡಲೇ, ಬಿಸಿಯು ಏರಲಿಕ್ಕಾರಂಭಿಸುತ್ತದೆ, ಯಾಕೆಂದರೆ ಯಕೃತ್ತಿನಲ್ಲಿಯೂ, (lymyphatic glands) ಮೇದೊಪಿಂಡಗಳಲ್ಲಯೂ, ರಕ್ತದಲ್ಲಿಯೂ ಮತ್ತು ಬೇರೆ (tissues) ಕಲೆಗಳಲ್ಲಿಯೂ ಸುಡತ (ಪಚನಕ್ರಮ)ವು ಅಧಿಕವಾಗಿ ನಡೆಯುತ್ತದೆ ಜ್ವರವು ಅಧಿಕ ಪಚನದ (oxidation) ಲಕ್ಷಣವಾಗಿರುತ್ತದೆ. ಈ ಬಿಸಿಯ ಏರಿಕೆಯನ್ನು ತಡದರೆ, ವಿಷಗಳು ಆಕಾರ ಹೊಂದು ವಂಧಾದ್ದು ಮುಂದರಿಸಿ ಮರಣವು ಸಹಜವಾಗಿ ಸಂಭವಿಸುವದಾಗುತ್ತದೆ ವಸ್ತುತಃ ಈ ಅಭಿ ಪ್ರಾಯವನ್ನು ಸ್ಥಾಪಿಸುವ ಪರೀಕ್ಷೆಗಳು ಮಾಡಲ್ಪಟ್ಟಿವೆ. ಕೆಲವು ಕೋಳಿಮರಿಗಳಿಗೂ 'ಗಿನಿ' ಜಾತಿ ಹಂದಿಗಳಿಗೂ ವಿಷಜ್ವರದ ಕ್ರಿಮಿಗಳ ಡಾಕನ್ನು ಹಾಕಿ ಬಿಸಿಯು ಏರದಂತೆ ಅವು ಗಳನ್ನು ತಣ್ಣೀರಿನಲ್ಲಿ ಇರಿಸಲಾಯಿತು. ಅವು ಬೇಗನೇ ಸತ್ತವು, ಬೇರೆ ಕೆಲವಕ್ಕೆ ಬಿಸಿಯು ಅನೇಕ ಡಿಗ್ರಿ ವರಗೆ ಏರುವ ಹಾಗೆ ಬಿಡಲಾಗಿ, ಅವುಗಳಲ್ಲ ಬದುಕಿದವು ದೇಹವು ಸ್ವಾಭಾವಿಕವಾಗಿಯೇ ತನ್ನಲ್ಲಿ ಸೇರಿದ ಎಲ್ಲಾ ವಿಷಗಳ ಧ್ವಂಸನಕ್ಕೋಸ್ಕರ, ಅಧಿಕವಾಗಿ ಬಿಸಿಯನ್ನುಂಟುಮಾಡಿ, ಪ್ರಯತ್ನಿಸುತ್ತದೆ (ದೇಹದೊಳಗಿನ) ಉಷ್ಣೋತ್ಪಾದನಾಧಿಕ್ಯದ ಲಕ್ಷಣವಾದ ಎಲ್ಲ ಜ್ವರಗಳಲ್ಲಿ ವಿಷದ ಫಲವನ್ನು ಪ್ರತಿರೋಧಿಸತಕ್ಕಂಧ ಏಂಟಿಟೋಕ್ಸಿನ (antitovin) ಎಂಬ ವಸ್ತುವನ್ನು ರಕ್ತವು ಶ್ರಮಪಟ್ಟು ಉಂಟುಮಾಡುತ್ತದೆ ಆದ್ದರಿಂದ ಜ್ವರವು ವಿಷದ ಅಂಟುವಿಕೆಗೆ ಒಂದು ರಕ್ಷೆ ಎಂಬದು ಸ್ಪಷ್ಟ

    'ಜ್ವರವನ್ನು ಈ ಲಕ್ಷ್ಯದಿಂದ  ನೋಡಿದ್ದಲ್ಲಿ, ಕ್ವಿನೀನು, ಎಂಟಿಪ್ಯಾರಿನ್, ಫೆನಸೆಟಿನ್ ಮತ್ತು ಬೇರೆ ಇದ್ದಲಿನಿಂದಾಗುವ ತಾರಿನ ಯೋಗಗಳು, ಮುಂತಾದ ಔಷಧಗಳಿಂದ ಜ್ವರ