LXXX ಉಪೋದ್ಘಾತ ಪಾರ, ಚಿಕಿತ್ಸಾ ಕ್ರಮ, ಪಧ್ಯವಿಚಾರ ಮುಂತಾದ ಎಲ್ಲಾ ಅಂಗಗಳು ತ್ರಿದೋಷನ್ಯಾಯವನ್ನು ಆಧರಿಸಿ ನಿಂತವೆ ಎಂತ ಬರೆದಿದ್ದಾರೆ. ಆಯುರ್ವೇದಗ್ರಂಥಗಳಲ್ಲಿ ಉಕ್ತವಾದ ರೋಗಗಳ ಹೆಸರುಗಳಿಗೂ ಪಾಶ್ಚಾತ್ಯ ವೈದ್ಯಾನುಸಾರವಾದ ರೋಗಗಳ ಹೆಸರುಗಳಿಗೂ ಲೇಶಮಾತ್ರ ಹೋಲುವಿಕೆಯೂ ಇಲ್ಲ ಎಂತಲೂ ಅವರೇ ಹೇಳಿದ್ದಾರೆ. ಹಾಗಂದ ಮೇಲೆ ಆಯುರ್ವೇ ದೀಯ ಗ್ರಂಥಗಳ ಆಧಾರದ ಮೇಲೆ ಆಸ್ಪತ್ರೆಗಳಲ್ಲಿಯ ರೋಗಿಗಳಿಗೆ ದೇಶೀಯ ಔಷಧಗಳನ್ನು, ತ್ರಿದೋಷನ್ಯಾಯವನ್ನು ಬಿಟ್ಟು, ಉಪಯೋಗಿಸಿ ಪರೀಕ್ಷಿಸಿದ್ದೆಂಬದು ಸರಿಯಾದ್ದೋ? ಇಂಧಾ ಅಸಂಬದ್ದ ಪ್ರಯತ್ನಾವಸರದಲ್ಲಿ ಎಷ್ಟು ರೋಗಿಗಳಿಗೆ ಎಷ್ಟು ಸಂಕಷ್ಟ ಉಂಟಾಗಿರಬಹುದು? ಯಾವದಾದರೊಂದು ರೋಗಕ್ಕೆ ಉದಾಹೃತವಾದ ಔಷಧವು ಇಂಧಾ ಲಕ್ಷಣಗಳು ಕಂಡಾಗ್ಗೆ, ಇಂಧಾ ಕಾಲದಲ್ಲಿ, ಇಂಧಾ ಪ್ರದೇಶದಲ್ಲಿ, ಇಂಧಾ ಪ್ರಕೃತಿಯವನಿಗೆ, ಇಂಧಾ ಸಾತ್ಮ್ಯದವನಿಗೆ, ಇಂಧಾ ಸ್ಥಿತಿಯವನಿಗೆ, ಇಂಧಾ ಬಲದವನಿಗೆ, ಇಂಧಾ ಶರೀರದವನಿಗೆ, ಇಂಧಾ ಪ್ರಮಾಣದಲ್ಲಿ, ಇಂಧಾ ಪಧ್ಯಾದಿ ವಿಚಾರದಲ್ಲಿ , ಗುಣಕರವೆಂತಲ್ಲದೆ, ಸಾಮಾನ್ಯ ವಾಗಿ ಒಂದು ರೋಗಕ್ಕೆ ಒಂದು ಔಷಧ ಎಂಬ ನ್ಯಾಯ ಆಯುರ್ವೇದದಲ್ಲಿ ಇಲ್ಲ. ಆದ ರಿಂದ, ಈ ಭೇದಗಳನ್ನು ತಿಳಿಯದವರು ಆಯುರ್ವೇದೀಯ ಯೋಗಗಳ ಸ್ಪರ್ಶನ ಮಾಡ ಬರುವದೇ ಎಹಿತವಾದ್ದು ಡಾಕ್ಟರ್ ಕೋಮನ್‌ನವರು ಮಾಡಿದ ಹಾಗಿನ ಪರೀಕ್ಷಾ ಪ್ರಯತ್ನ ಗಳಿಂದ ಅನೇಕ ರೋಗಿಗಳಿಗೆ ಕೆಡಕು ಉಂಟಾಗುವದರಲ್ಲಿ ಸಂದೇಹವಿಲ್ಲ. ಉದಾಹರಣಾರ್ಧ ವಾಗಿ ಅವರು ಹಸಿಶುಂಠಿಯ ಉಪಯೋಗದ ಕುರಿತು ಬರೆದಿರುವ ಅಭಿಪ್ರಾಯವನ್ನು ನೋಡ ಬಹುದು. ಕೆಲವು ಉದರವ್ಯಾಧಿಗಳಲ್ಲಿ ಇವರು ಹಸಿಶುಂಠಿಯ ರಸವನ್ನು ಉಪಯೋಗಿಸಿ ದ್ದಲ್ಲಿ ಮೂತ್ರವು ಧಾರಾಳವಾಗಿ ಹೋಗಿ, ಉದರದ ಬಾಕು ವಾಸಿಯಾದ್ದರಿಂದ, ಹಸೀ ಶುಂಠಿಯ ರಸಕ್ಕೆ ಮೂತ್ರಕಾರಿ (dunetic ) ಗುಣವಿದೆ ಎಂತ ಅಭಿಪ್ರಾಯಪಟ್ಟ ಹಾಗೆ ಬರೆ ದಿದ್ದಾರೆ. ಮೂತ್ರಕೃಚ್ಛ್ರವ್ಯಾಧಿಯಲ್ಲಿ ಶುಂಠಿಯನ್ನು ಉಪಯೋಗಿಸಬಾರದೆಂತ ಆಯು ರ್ವೇದೀಯ ವಿಶೇಷವಿಧಿ ಇರುತ್ತದೆ. ಶುಂಠಿಯಲ್ಲಿ ಕಟ್ಟನ್ನು ಅಧವಾ ಹಿಡಿತವನ್ನು ಬಿಡಿ ಸುವ ಗುಣವಿರುತ್ತದೆ. ಒಣಶುಂಠಿಯಲ್ಲಿ ಮಲವನ್ನು ಒಣಗಿಸುವ ಗುಣವಿದ್ದರೂ, ಹಸಿ ಶುಂಠಿಯು ಮಲಮೂತ್ರಗಳೆರಡನ್ನೂ ಸಡಿಲಿಸುತ್ತದೆ. ಸಾಧಾರಣವಾಗಿ ಮಲ ಸಡಿಲಾದರೆ, ಮೂತ್ರ ಕಡಿಮೆ ಮತ್ತು ಮೂತ್ರ ಹೆಚ್ಚಾದರೆ ಮಲ ಕಡಿಮೆ. ರೋಗಿಗಳನ್ನು ಹಾಲು ಮತ್ತು ಗಂಜಿಯ ಪಧ್ಯದಲ್ಲಿಟ್ಟಿದ್ದರೆಂತ ಕಾಣುತ್ತದೆ. ಹಾಗೆ ರೋಗಿಯು ದ್ರವಪದಾರ್ಧ ಗಳನ್ನೇ ಅಧಿಕವಾಗಿ ಸೇವಿಸಿದರಿಂದಲೂ, ಮೂತ್ರವು ಕಟ್ಟಿಕೊಳ್ಳುವ ದೋಷ ಶುಂಠಿರಸದಿಂದ ಪರಿಹಾರವಾದ್ದರಿಂದಲೂ, ಕೆಲವು ಸಂಗತಿಗಳಲ್ಲಿ ಮೂತ್ರವೇ ಅಧಿಕವಾಗಿ ಹೋಗಿರಬಹುದು. ಆದರೆ, ಉಷ್ಣಾಧಿಕ್ಯವಿದ್ದಲ್ಲಿ, ಅಧವಾ ರೋಗಿಯು ಉಷ್ಣ ವಾದ ಪಧ್ಯದಲ್ಲಿದ್ದರೆ, ಅಥವಾ ಒಳಗೆ ಎಲ್ಲಿಯಾದರೂ ವ್ರಣಾದಿಗಳು ಇದ್ದರೆ, ಶುಂಠಿರಸದ ಉಪಯೋಗದಿಂದ ರೋಗಿಗೆ ವಿಷಮವಾದೀತೆಂಒದರಲ್ಲಿ ಸಂದೇಹವಿಲ್ಲ. ಪುನಃ ದಶಮೂಲಗಳನ್ನು ಜ್ವರಹರವರ್ಗದ ಔಷಧಗಳೊಳಗೊಂದಾಗಿ ಕಾಣಿಸಿದ್ದಾರೆ. ದಶಮೂಲಗಳು ತ್ರಿದೋಷಹರವಾದ್ದರಿಂದ ಸನ್ನಿ ಪಾತಜ್ವರದಲ್ಲಿ ವಿಶೇಷವಾಗಿ ಉಪಯೋಗಿಸಲ್ಪಡುತ್ತವಾದರೂ, ಇತರ ಜ್ವರಗಳಲ್ಲಿ ಮತ್ತು ತರುಣಜ್ವರದಲ್ಲಿ ಅವುಗಳ ಕಷಾಯವನ್ನು ಉಪಯೋಗಿಸಿದರೆ, ವಿಷಮವಾಗಿ ಜ್ವರವು ಸನ್ನಿ ಪಾತಕ್ಕೆ ಬೀಳಲಿಕ್ಕೆ ಸಾಕು. ಅದಲ್ಲದೆ, ಉಷ್ಣ-ಶೀತ ಭೇದದ ಮೇಲೆ ಒಂದೆರಡು ಬೇರೆ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.