ಈ ಪುಟವನ್ನು ಪರಿಶೀಲಿಸಲಾಗಿದೆ



                    ಉಪೋದ್ಘಾತ                                  LXXXV
 ಯಾಗಿರುವದಿಲ್ಲ ಎಂಬದು ಪಾಶ್ಚಾತ್ಯವಿದ್ವಾಂಸರ ಶೋಧನದಿಂದಲೇ ನಿಶ್ಚಿತವಾಗಿದೆ. ಹ್ಯಾಗಂದರೆ ಕೈನಾಡಿಯಲ್ಲಿ ಪೆಟ್ಟಿನ ಲೋಪ ಕಂಡರೆ, ಹೃದಯದ ಕೆಲಸದಲ್ಲಿ ದೋಷ ಉಂಟೆಂತ ಎಣಿಸಬಾರದಾಗಿಯೂ, ಆ ಲೋಪವು ಧಮನಿಯ ಆವರಣದ ಅಧವಾ ಹೊದಿ 
̽ ilinical Manual by ಕೆಯ ದುರ್ಬಲತೆಯಿಂದುಂಟಾಗಬಹುದೆಂತ ಅವರ ಒಂದು ಪುಸ್ತ 
James Finlay son,    ಕವು* ಹೇಳುತ್ತದೆ. ಆವರಣದ ದುರ್ಬಲತೆಯಿಂದ ಲೋಪ
  M D , 1886         ಉಂಟಾಗುವದಾದರೆ, ಆ ಬಲಹೀನವಾದ ಸ್ಥಾನ ದಾಟಿದ ಮೇಲೆ ನಾಡಿಯು ನಿಜಸ್ಥಿತಿಗೆ ಬರುವದು ಮತ್ತು ನಾಡಿಯು  ಉಬ್ಬದೆ ಉಂಟಾದ ತಡೆಯಿಂದ ಹಿಂದೆ ಭೇದವ್ರಂಟಾಗದಿರುವದು ಹ್ಯಾಗೆ ಎಂಬದನ್ನು ಗ್ರಹಿಸುವದು ಕಷ್ಟ ಆ ಕಾರಣದಿಂದ ಮೂರು ಬೆರಳುಗಳನ್ನಿಟ್ಟಲ್ಲಿ ಒಂದು ಬೆರಳಿನ ಅಡಿಯಲ್ಲಿ ಮಾತ್ರ ಲೋಪಗಳು ಕಂಡು, ಮಿಕ್ಕ ಎರಡು ಬೆರಳುಗಳ ಅಡಿಯ ನಾಡೀ ಬಡಿತಗಳು ಸರಿಯಾಗಿರಬಹುದೋ? ಪುನಃ ಕೈನಾಡಿಯ ಪೆಟ್ಟುಗಳು ಹೃದಯದ ಪಟ್ಟುಗಳಿಗನುಸರಿಸಿ ಇರುವದಿಲ್ಲವೆಂತಲೂ, ಹೃದಯದಲ್ಲಿ 7೦ ರಿಂದ 80 ರ ವರೆಗೆ ಪೆಟ್ಟುಗಳು ಕಾಣುತ್ತಿರುವಾಗ್ಗೆ, ಕೈನಾಡಿಯಲ್ಲ ನಾಲ್ವತ್ತೇ ಪೆಟ್ಟುಗಳು ಕಂಡದ್ದುಂ ಟಂತಲೂ, ಅದೇ ಪುಸ್ತಕದಲ್ಲಿ ಹೇಳಲ್ಪಟ್ಟಿದೆ. ಹಾಗಾದ ಮೇಲೆ ಕೈನಾಡಿಯು ಹೃದಯದ ಕೆಲಸವನ್ನೇ ಸೂಚಿಸುತ್ತದೆಂತಲೂ, ಹೃದಯದಿಂದ ಉಂಟಾದ ನಾಡಿಯ ಗತಿಯು ಮಾರ್ಗ ತ್ವೇನ ಭೇದವಾಗಲಾರದೆಂತಲೂ ಹೇಳುವ ಆಕ್ಷೇಪಣವ್ರ ನಿಷ್ಟ್ರ ಯೋಜನವಾಯಿತು ತರ್ಜ ನೀ ಬೆರಳ ಅಡಿಯ ನಾಡಿಯು ವಾತ, ಮಧ್ಯಮಯ ಅಡಿಯದು ಸಿತ್ತ ಮತ್ತು ಅನಾಮಿಕೆಯ ಅಡಿಯದು ಕಫ ಎಂಬ ವಿಭಾಗ ಮಾತ್ರ ಪ್ರತಿಪಾದನಕ್ಕೆ ಉಳಿದಂತಾಯಿತು ಇದರ ಪ್ರತಿ ಪಾದನವನ್ನು ತ್ರಿದೋಷಾನ್ಯಾಯವನ್ನೇ ನಿರಾಕರಿಸುವವರಿಗೆ ಸಮಾಧಾನಕರವಾಗಿ ಮಾಡು ವದಕ್ಕೆ ಪ್ರತ್ಯಕ್ಷಶೋಧನವಲ್ಲದೆ ಬೇರೆ ಉಪಾಯವಿಲ್ಲ. ಗಂಡಸರ ನಾಡೀಪರೀಕ್ಷೆಯನ್ನು ಒಲದ ಕೈ ಹಿಡಿದು, ಹೆಂಗಸರ ನಾಡೀಪರೀಕ್ಷೆಯನ್ನು ಅವರ ಎಡದ ಕೈ ಹಿಡಿದು, ಮಾಡ ಬೇಕೆಂತ ಆಯುರ್ವೇದೀಯ ಪಂಡಿತರು ಹೇಳುತ್ತಾರೆ ಎರಡು ಕೈಗಳ ನಾಡಿಗಳು ಒಂದೇ ರೀತಿಯಾಗಿರುವದಿಲ್ಲವೆಂತಲೂ, ಒಬ್ಬ ರೋಗಿಯನ್ನು ಪರೀಕ್ಷಿಸುವ ಡಾಕ್ಟರನು ಒಂದು ದಿನ ಎಡದ ಕೈಯ ನಾಡಿಯನ್ನೂ, ಮತ್ತೊಂದು ದಿನ ಬಲದ ಕೈಯ ನಾಡಿಯನ್ನೂ, ಪರೀಕ್ಷಿಸಿದರೆ ತಪ್ಪಿಬಿದ್ದಾನು ಎಂತಲೂ, ಮೇಲೆ ನಿರ್ದಿಷ್ಟವಾದ ಪಾಶ್ಚಾತ್ಯವಿದ್ವಾಂಸರ ಪುಸ್ತಕದಲ್ಲಿ ಎಚ್ಚರ ಸಲಾಗಿದೆ 1886ನೇ ಇಸವಿಯನಂತರ ಆ ಭಾಗದವರಲ್ಲಿ ಎಷ್ಟೆಲ್ಲ ಮತಭೇದ-ಸಂಸ್ಕಾರಗಳು ಆಗಿಯವೋ ತಿಳಿಯದು, ಆದರೆ, ಹಾಗೆ ಉಂಟಾಗಿರಬಹುದಾದ ಪರಿಷ್ಕಾರಫಲಗಳೆಲ್ಲ ಆಯು ರ್ವೇದೀಯ ಪಕ್ಷಕ್ಕೆ ಸಾಧಕವಾಗಿಯೇ ಇರಬಹುದೆಂತ ನಂಬಿದ್ದೇವೆ. ನಾಡಿಯ ಗತಿಯು ಮಂದವಾಗುವದು ಮತ್ತು ಪುಷ್ಟಿಯಾಗುವದು ಕಫದಿಂದ ಮತ್ತು ಕ್ಷೀಣವಾಗಿ ವೇಗವುಳ್ಳ ದ್ದಾಗುವದು ಪಿತ್ತದಿಂದ ಎಂಬ ಆಯುರ್ವೇದಿಯ ತತ್ವವು ಗಿಡಗಳ ಮೇಲೆ ಸರ್‌ ಬೋಸ ರವರು ಮಾಡಿದ ಹಿಂದೆ ಪ್ರಸ್ತಾಪಿಸಲ್ಪಟ್ಟ ಅನುಸಂಧಾನಗಳಿಂದ ಸ್ಥಾಪಿತವಾಗಿದೆ
 33 ಯಾವ ಕ್ರಮವನ್ನಾದರೂ ಅಭಿವೃದ್ಧಿಗೆ ತರುವ ಉದ್ಯಮದಲ್ಲಿ ಅದರ ಆ ಧುನಿಕ ದೋಷಗಳನ್ನು ಪರಿಹರಿಸಿಕೊಳ್ಳುವದು ಪ್ರಥಮ ಕರ್ತವ್ಯ ಎಂಬದರಿಂದ ಮಾತ್ರ ವರ್ತಮಾನ ಆಯರ್ವೇದೀಯ ಚಿಕಿತ್ಸಾಕ್ರಮದಲ್ಲಿಯೂ, ಪಾಶ್ಚಾತ್ಯ ಚಿಕಿತ್ಸಾಕ್ರಮದಲ್ಲಿಯೂ ಕಾಣುವ ಕೆಲವು ದೋಷಗಳನ್ನು ನಿರೂಪಿಸಬೇಕಾಯಿತು. ಪ್ರತಿ ರೋಗಿಯ ಸಂಗತಿಯಲ್ಲಿ