7
***
ಆದಿನ ಬೆಳಗಿನ ಝಾವದಲ್ಲಿ ಆವೂರಿನ ಪುರೋಹಿ ತನು ಒಂದು ಕನಸ ಕಂಡನು, ಅದರಲ್ಲಿ ಮಹಾತೋ ಜೋವತಿಯಾದ ಹೆಂಗಸೊಬ್ಬಳು ಕಾಣಿಸಿ. ಪೃಥ್ವಿಪಾಲನ ಪೂರ್ವಕಥೆಯನ್ನು ತಿಳಿಸಿ, ಹೀಗೆ ಹೇಳಿದಳು: "ನಾನು ಸಕಲ ಜೀವಗಳನ್ನೂ ಸಾಕಿ ಸಲಹುವ ಅನ್ನ ಪೂರ್ಣೆ, ಬಡಹುಡುಗನಾದ ಪೃಥ್ವಿಪಾಲನ ಕಷ್ಟವನ್ನು ಹೋಗಲಾಡಿಸುದಕ್ಕಾಗಿ ನಾನು ಪಕ್ಕದಲ್ಲಿರುವ ಅಡವಿಗೆ ಬಂದ ಅವನಿಗೆ ಉಪಚರಿಸಿದೆನು, ಆಗ ಇಂದ್ರನು ನನಗೆ ಕಾಣಿಕೆಯಾಗಿ ಕೊಟ್ಟಿದ್ದ ವಜ್ರದ ಸರವನ್ನು ಕೊರಳಿನಲ್ಲಿ ಹಾಕಿಕೊಂಡಿದ್ದೆನು. ಅದರ ಪದಕವು ಪೃಥ್ವಿಪಾಲನ ಕೈಗೆ ಸಿಕ್ಕಲು ಅದನ್ನವನು ಬಲುವಾಗಿ ಬಯಸಿದನು, ನಾನು ಅದನ್ನವನಿಗೆ ಕೊಟ್ಟು ಬಿಟ್ಟೆನು, ಆದರೆ ತಾನು ನನಗೆ ಕೊಟ್ಟ ಆಭರಣವನ್ನು ನಾನು ಮನುಷ್ಯ ಮಾತ್ರನಿಗೆ ಕೊಟ್ಟೆನೆಂದು ಇಂದ್ರನು ಕೋಪಗೊಂಡು, ಸಿಡಿಲಿನಿಂದ ಪೃಥ್ವಿಪಾಲನನ್ನೂ ಆ ಆಭರಣವನ್ನೂ ಭೂಮಿಯೊಳಕ್ಕೆ ತಳ್ಳಿಸಿರುವನು ಆ ಬಾಲಕನಿಗೆ ನಾನು ಸದ್ಗತಿಕೆಡುವೆನು. ಅವನ ಮೇಲೆ ಸಿಡಿಲು ಬಡಿದ ಸ್ಥಳದಲ್ಲಿ ನೀವು ನನ್ನ ಮೂರ್ತಿಯನ್ನು ಪ್ರತಿಷ್ಠೆ ಮಾಡಿ 'ಪೂಜಿಸಿರಿ. ನಾನು ಅಲ್ಲಿ ನಂದಾದೇವಿಯೆಂಬ ಹೆಸರಿನಿಂದ ಪ್ರಸಿದ್ದಳಾಗಿ ಆ ನಿರಪರಾಧಿ ಪೃಥ್ವಿಪಾಲನಂತೆ ಕಷ್ಟ ಪಡುವವರ ಅಭೀಷ್ಠಗಳನ್ನು ನೆರವೇರಿಸಿ ಕೊಡುವೆನು."