ಈ ಪುಟವನ್ನು ಪ್ರಕಟಿಸಲಾಗಿದೆ

14

ಆತನು ಮಹಾಧೀರನು ಮತ್ತು ದೇಶಾಭಿಮಾನಿ. ತನ್ನ ರಾಜ್ಯಕ್ಕೆ ಆಗಾಗ ಬಂದು ಹಾವಳಿ ಮಾಡುತ್ತಿದ್ದ ಶಕರೆಂಬ ಜನರನ್ನು ಆತನು ಸೋಲಿಸಿ, ದೂರ ಓಡಿಸಿದನು, ಆದ ಕಾರಣ ಆತನಿಗೆ "ಶಕಾರಿ " ಯೆಂದು ಹೆಸರಾಯಿತು. ಈ ಸಂದರ್ಭದಲ್ಲಿಯೇ ಆತನು ತನ್ನ ಶಕೆಯನ್ನು ವಿಸುವನೆಂದು ಕೆಲವರ ನಂಬಿಕೆ, ಇಂತಸ ಶೂರನಾದ ಮಹಾರಾಜನ ಕೈ ಕೆಳಗೆ ಅನೇಕ ಸಾಮಂತರಾದರು ಇದ್ದಿರಲೇ ಬೇಕು, ಬಹುಶಃ ಈತನು ಆಗಿನ ಹಿಂದೂ ರಾಜರಿಗೆಲ್ಲಾ ಮುಖಂಡನಾಗಿದ್ದನೆಂದು ಧಾರಾಳವಗಿ ಹೇಳಬಹುದು.

ವಿಕ್ರಮಾರ್ಕನು ವಿದ್ಯಾಭಿಮಾನಿ. ಆತನ ಅಣ್ಣ ಭರ್ತೃಹರಿಯೇ ದೊಡ್ಡ ವೈಯಾಕರಣಿ ಮತ್ತು ಕವಿಯಾಗಿದ್ದನಷ್ಟೆ ವಿಕ್ರಮನ ಆಸ್ಥಾನದಲ್ಲಿ ಅನೇಕ ಮಂದಿ ಶಾಸ್ತ್ರಜ್ಞರೂ ಕವಿಗಳೂ ಇದ್ದರು. ಅವರಲ್ಲಿ ಪ್ರಸಿದ್ದರಾರೆಂದರೆ.

ಧನ್ವಂತರಿ ಕ್ಷವಣಕುಮರಸಿಂಹ ಶಂಕು ।
ವೇತಾಳಭಟ್ಟ ಘಟಕರ್ಪರ ಕಾಳಿದಾಸ:॥
ಖ್ಯಾತೋ ವರಾಹಮಿಹಿರೋ ನೃವತೀಸ್ಸಭಾಯಂ ।
ರತ್ನಾನಿ ವೈ ವರರುಚಿ ರ್ನವ ವಿಕ್ರಮಸ್ಯ ॥

ಧನ್ವಂತರಿ, ಕ್ಷಪನಕ ಅಮರಸಿಂಹ, ಶಂಕು, ವೇತಾಳ ಭಟ್ಟ, ಘಟಕರ್ಸರ, ಕಾಳಿದಾಸ, ವರಾಹ ಮಿಹಿರ, ವರರುಚಿ-ಈನವರತ್ನಗಳು ವಿಕ್ರಮರಾಜನ ಸಭೆಯಲ್ಲಿ ಮಬ್ಬವಾಗಿ ಶೋಭಿಸುತ್ತಿದ್ದವು.