18
ದೂರ ತೆಗೆದುಕೊಂಡುಹೋಗಿ ಫಲವತ್ತಾದ ಭೂಮಿಯಲ್ಲಿ ಅದನ್ನು ಆಳವಾಗಿ ಹೂಳಿ , ಅದರಮೇಲೆ ಎತ್ತರವಾಗಿ ಮಣ್ಣು ಗುಡ್ಡೆ ಮಾಡಿ, ಆನೆಲದಲ್ಲೆಲ್ಲಾ ಗೋಧಿ, ಕಡಲೆ ಮುಂತಾದ ಧಾನ್ಯಗಳನ್ನು ಬಿತ್ತಿಸಿ, ಅದನ್ನು ಒಬ್ಬ ಬಡಬ್ರಾಹ್ಮಣನಿಗೆ ದಾನವಾಗಿ ಕೊಟ್ಟು ಬಿಟ್ಟರು.
**
ಕಾಲಚಕವು ಯಥಾಪ್ರಕಾರ ನಡೆಯಿತು. ವಿಕ್ರಮನ ರಾಜ್ಯವಾದ ಮಾಳವವು ಕ್ಷಿಣಿಸಲಾರಂಭಿಸಿತು. ಭೂದಾನವನ್ನು ಪಡೆದ ಆ ಬ್ರಾಹ್ಮಣನೂ ಕಾಲವಶನಾದನು. ಅವನ ಮಕ್ಕಳು ಮುಮ್ಮಕ್ಕಳು ಆ ಭೂಮಿಯನ್ನನು ಭವಿಸುತ್ತ ಬಂದರು. ಸಿಂಹಾಸನವಿದ್ದ ಎತ್ತರವಾದೆಡೆಯಲ್ಲಿ ಬಿದಿರ ಅಟ್ಟಣಿಗೆಯೊಂದು ಏರ್ಪಾಟಾಯಿತು. ಅದು ಉನ್ನತವಾಗಿದ್ದ ಕಾರಣ ಭೂಮಿಯ ಯಜಮಾನನು ಅದರ ಮೇಲೆ ಕುಳಿತು ಬೆಳೆಯನ್ನು ಕಾಯುತ್ತಿದ್ದನು.
ಅವನ ಭೂಮಿಯಲ್ಲಿ ಬೆಳೆಯು ಯಾವಾಗಲೂ ಹುಲುಸಾಗಿರುವುದು, ಅವನು ಮನೆಯಲ್ಲಿಯ, ಬೀದಿಯಲ್ಲಿಯೇ ಇದ್ದಾಗ ಇತರರಂತೆ ಕೋಪವುಳ್ಳವನಾಗಿರುವನು, ಪಕ್ಷಪಾತವುಳ್ಳವನಾಗಿರುವನು, ಲೋಭಿಯಾಗಿರುವನು; ಆದರೆ ತನ್ನ ಭೂಮಿಗೆ ಬಂದು ಅಟ್ಟಣೆಯನ್ನೇರಿದ ಕೂಡಲೆ ಅವನ ನಡತೆಯೆಲ್ಲವೂ ಮಾರ್ಪಡುವುದು, ಅವನ ಮನಸ್ಸು ಶಾಂತವಾಗುವುದು, ಅವನ ಮಾತುಗಳು ಮೃದುವಾಗುವುವು, ಅವನ ಎದೆಯು ದಯೆ