ಈ ಪುಟವನ್ನು ಪ್ರಕಟಿಸಲಾಗಿದೆ

44

ಇಪ್ಪತ್ತು ಮೂರನೆಯ ಮೆಟ್ಟಿಲಿನ ಮೂರ್ತಿಯು ಹೀಗೆಂದಿತು:-

"ಎಲೈರಾಜನೆ, ಒಂದಾನೊಂದು ರಾತ್ರಿ ವಿಕ್ರಮ ಭೂಪಾಲನು ತಾನು ಎಮ್ಮೆಯನ್ನೇರಿ ದಕ್ಷಿಣದಿಕ್ಕಿಗೆ ಪ್ರಯಾಣಮಾಡಿದಂತೆ ಕನಸಕಂಡನು. ಮಾರಣೆಯ ದಿನ ಆಸಂಗತಿಯನ್ನು ಶಾಸ್ತ್ರಜ್ಞರಿಗೆ ತಿಳಿಸಲು, ಅವರು ಆ ಸ್ವಪ್ನವು ಅನಿಷ್ಟ ಸೂಚಕವೆಂದೂ, ಆ ಅ ನಿಷ್ಟವು ಪರಿಹಾರವಾಗುವುದಕ್ಕಾಗಿ ರಾಜನು ತನ್ನ ರಾಜ್ಯದಲ್ಲಿನ ಕುರುಡ, ಕುಂಟ, ಮೂಗ, ಆನಾಥರಿಗೂ, ಬ್ರಾಹ್ಮಣರಿಗೂ ಅನ್ನದಾನ ವಸ್ತ್ರದಾನಗಳನ್ನು ಮಾಡಬೇಕೆಂದೂ ಹೇಳಿದರು. ವಿಕ್ರಮನು ಅವರ ವಚನವನ್ನು ಶಿರಸಾವಹಿಸಿ, ತನ್ನ ಭಂಡಾರದ ಬಾಗಿಲುಗಳನ್ನು ಮೂರುದಿನಗಳು ತೆರೆದಿಟ್ಟು, ಬೇಕಾದವರು ಬೇಕಾದಷ್ಟು ಹಣವನ್ನು ತೆಗೆದುಕೊಂಡು ಹೋಗುವಂತೆ ಆಜ್ಞಾಪಿಸಿದನು. ಈ ಔದಾರ್ಯದಿಂದ ಜನರೆಲ್ಲರೂ ಆಶ್ಚರ್ಯಪಟ್ಟರಲ್ಲದೆ, ಅನ್ನ ವಸ್ತ್ರಧನಗಳನ್ನು ಮನದಣಿಯಪಡೆದು ಸುಖಿಸಿದರು. ಈ ಧಾರಾಳಬುದ್ಧಿಯು ತಮಗೂ ಉಂಟೋ?”

ಭೋಜನು ಏನುತಾನೆ ಹೇಳಿಯಾನು?

***

ಇಪ್ಪತ್ತನಾಲ್ಕನೆಯ ಪಾಂಚಾಲಿಕೆಯು ಹೇಳಿದಕಥೆ:-

"ವಿಕ್ರಮನರಾಜ್ಯದಲ್ಲಿ ಪುರಂದರಪುರಿಯೆಂಬ ಪಟ್ಟಣ. ಅದರಲ್ಲಿ ಒಬ್ಬ ಧನಿಕ. ಆತನು ಸಾಯುವಾಗ ತನ್ನ ನಾಲ್ವರು ಮಕ್ಕಳನ್ನು ಕರೆದು, “ಎಲೈ, ನನ್ನ ಆಸ್ತಿಯಲ್ಲಿ ನಿನ್ನ ನಿನ್ನ ಭಾಗಗಳನ್ನು ನಾನು ಮಲಗಿರುವ ಮಂಚದ ಕಾಲುಗಳ ಕೆಳಗೆ ಇಟ್ಟಿರುವೆನು. ಅದನ್ನು ಪಡೆದು ಸುಖವಾಗಿ ಬಾಳಿರಿ" ಎಂದು ಹೇಳಿ ಪ್ರಾಣಬಿಟ್ಟನು. ಕೆಲವು ಕಾಲದ ಮೇಲೆ ಮಕ್ಕಳು ತಮ್ಮ ತಂದೆಯ ಆಸ್ತಿಯನ್ನು ಹಂಚಿಕೊಳ್ಳಲು ನಿಶ್ಚಯಿಸಿ, ಆತನು ಹೇಳಿದ್ದಂತೆ