ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಲ್ಕನೆಯ ಪರಿಚ್ಛೇದ ಲಕ್ಷಕ್ಕಿಂತಲೂ ಹೆಚ್ಚು ಆಸ್ತಿಗೆ ಉತ್ತರಾಧಿಕಾರಿಣಿಯಾದಳು, ಅದರಮೇಲೆ ಆಗವಳು ಹಳ್ಳಿಗಾಡಿನಲ್ಲಿ ಅತಿ ಹೀನಾವಸ್ಥೆಯಲ್ಲಿ ಬಹಳ ಭಯಂಕರವಾದ ಪೌಲಿಕತೆ ಮತ್ತು ಕುಸಂಸ್ಕಾರ ಮಧ್ಯದಲ್ಲಿ ಪ್ರತಿಪಲಿತಳಾಗಿರುತ್ತಿದ್ದಳು. ಈಗ ಅದಕ್ಕೆ ಪ್ರತಿಯಾಗಿ ಈ ಕಲಿಕತ್ತಾ ಪಟ್ಟಣದಲ್ಲಿ ನಮ್ಮ ಸಮಾಜದ ಶ್ರದ್ಧಾ ಸ್ಪದರಾದ ನವೀನಗೋಪಾಲ ಬಾಬುಯವರ ಮನೆಯಲ್ಲಿ ಈ ಹುಡುಗಿಯ ತಾಯಿ, ಉನ್ನ ಮನವುಳ್ಳ ಹೈಮವತಿ ಯಿಂದ ಅತ್ಯಂತ ಆದರದಿಂದ ಪ್ರತಿಪಾಲಿತಳಾಗುತ್ತಿದ್ದಳು. ವಿನೋದಿನಿಯ ಆನಂದಕ್ಕೆ ಇನ್ನೂ ಕಾರಣವುಂಟು, ಅವಳ ತಾಯಿತಂದೆಯವರು ಆಕೆಯೇ ಮೆಚ್ಚಿದ ವರನಿಗೆ ಕೊಟ್ಟು ಅವಳಿಗೆ ಮದುವೆ ಮಾಡಿರುವರು. ವಿವಾಹದ ದಿನ ವಿನೋದಿನಿಯು ನನ್ನ ಮೇಲೆ ಅವಳಿಗಿದ್ದ ಪ್ರೀತಿಯನ್ನು ಪ್ರಕಾಶಪಡಿಸಿದುದನ್ನು ನೋಡಿ, ನಮ್ಮ ಸಮಾಜದ ನಮ್ಮ ಸೋದರಿಯರೆಲ್ಲರೂ ಅತ್ಯಂತ ವಿಸ್ಮಿತರಾದರು, ಅದಕ್ಕೋಸ್ಕರ ಅವಳು ಹೆಚ್ಚು ಹಿಂಸೆಪಟ್ಟಳೆಂದೂ ಕೇಳಿದೆನು. ಆದುದರಿಂದ ಮರ್ಮಾಂತಿಕ ಮನೋಕಷ್ಟ ಅಥವಾ ಶೋಕಕ್ಕೆ ಪ್ರತಿಯಾಗಿ ಅತ್ಯಂತ ಆನಂದಕ್ಕೆ ಹೆಚ್ಚು ಕಾರಣಗಳಿದ್ದುವು. ಏತಕ್ಕೋಸ್ಕರ ಹೀಗಾಯಿತೋ, ಅದನ್ನು ಸ್ಥಿರಮಾಡುವುದು ಕಷ್ಟವಾಗಿದೆ.” ನಗೇಂದ್ರ (ಸ್ವಲ್ಪ ಹೊತ್ತು ಯೋಚಿಸಿ) :- ಅತ್ಯಂತ ಆನಂದವುಂಟಾದರೂ ಈ ರೋಗವು ಹುಟ್ಟುವುದು, ನಾನು ವಿಲಾಯತಿ ಲಾನ್‌ಸೆಟ್ * ಎಂಬ ಪತ್ರಿಕೆಯಲ್ಲಿ ಅಂತಹ ಘಟನೆಯೊಂದನ್ನು ಓದಿದ ಜ್ಞಾಪಕವಿರುವುದು.” ಜ್ಯೋತಿ:-14 ಅಣ್ಣಾ ! ನಿನ್ನ ಹೇಳಿಕೆಯಿಂದ ನನಗೆ ಇದ್ದ ಒಂದು ದುರ್ಭಾ ವನೆಯು ಹೋಯಿತು, ಈಗ ಹೆಚ್ಚು ಆನಂದದಿಂದಲೇ ವಿನೋದಿನಿಗೆ ಈ ಭಯಂಕರ ವಾದ ರೋಗವು ಹುಟ್ಟಿರಬೇಕು. ಈ ವಿಚಾರದಲ್ಲಿ ಇನ್ನು ಸಂದೇಹವಿಲ್ಲ. ಆದರೆ ಈಗಲೂ ನನ್ನ ಮನಸ್ಸಿನಲ್ಲಿ ಒಂದು ಸಂದೇಹವಳಿದುಕೊಂಡಿರುವುದು ಏನೆಂದರೆ, ಆ ಭೂತದ ಸಮಾಚಾರ ನನಗೆ ಇನ್ನೂ ಚೆನ್ನಾಗಿ ಗೊತ್ತಾಗಲಿಲ್ಲವಾಗಿದೆ.” ಡಾಕ್ಟರನು, ಅದೂ ಈ ರೋಗದ ಕಾರ್ಯವಾಗಿರುವುದು, ಈ ರೋಗ ಗ್ರಸ್ತರೋಗಿಯು ಇದಕ್ಕಿಂತಲೂ ಹೆಚ್ಚು ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡುವನು, ಮಂತ್ರವಾದಿಗಳು ಕೇವಲ ಕೌಶಲ್ಯದಿಂದ ತಮಗೆ ಇಷ್ಟ ಬಂದ ಮತ್ತು ಗಳನ್ನು ರೋಗಿಯ ಬಾಯಿಯಿಂದ ಹೇಳಿಸುವರು; ಮತ್ತು ತಮ್ಮ ಮನೋಗತವಾದ ಕಾರ್ಯವನ್ನೂ ರೋಗಿಯಿಂದ ಮಾಡಿಸುವರು. ಭೂತಪ್ರೇತವೆಲ್ಲಾ ಸುಳ್ಳು ” ಎಂದು ಹೇಳಿದರು, • Lancet,