ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಐದನೆಯ ಪರಿಚ್ಛೇದ «« ಬರುವೆನೆಂದು ಹೇಳಿ ಹೋದವನು || «« ಬರಲಿಲ್ಲ-ಬರಲಿಲ್ಲ-ಬರಲಿಲ್ಲವೆ” || ಈ ಅಸಂಬದ್ಧವಾದ ಹಾಡು ಮುಗಿಯುತ್ತಲೇ, ಬೇರೆ ರಾಗವನ್ನೆತ್ತಿ ಮತ್ತೊಂದು ಅಸಂಬದ್ಧವಾದ ಹಾಡನ್ನು ಹಾಡಲಾರಂಭಿಸಿದಳು : ಈ ಮರೆತೆನೆಂದು ಮಾಡಿದ್ದೇನೆ” | ಮರೆಯಲಿಲ್ಲವೆ ಹೋಗು ಸಖಿ” ಹೀಗೆ ಮನಸ್ಸಿಗೆ ಬಂದ ರಾಗದಿಂದ ಹಾರಿ ಪೂರೈಸಿದೊಡನೆ ವಿನೋದಿನಿಯು ಅಳುವುದಕ್ಕೆ ತೊಡಗಿದಳು. ಆ ಅಳುವಿನಲ್ಲಿಯೂ, ನೈರಾಶ್ಯದಿಂದ ತನ್ನ ಪ್ರಾಣವು ದಗ್ಗವಾಗುತ್ತಲಿರುವುದೆಂಬ ಮರ್ಮಾಂತಿಕವಾದ ಮಾತುಗಳನ್ನು ಹೇಳುವಳು, ಈ ಸಮಯದಲ್ಲಿ ಪರಿಚಾರಿಕೆಯೊಬ್ಬಳು ಬಂದು ಏನೋದಿನಿಯನ್ನು ಕುರಿತು, # ಒಂದು ತಡವೆ ಇತ್ತ ಕಡೆ ನೋಡು ! ನಿಮ್ಮ ತಾಯಿ ಬಂದಿರುವಳು ” ಎಂದು ಹೇಳಿದಳು.

  • ತಾಯಿ ಬಂದಿರುವಳು ' ಎಂಬ ಮಾತು ಕಿವಿಗೆ ಬೀಳುತ್ತಲೇ, ಎಲ್ಲಿ ನಮ್ಮಮ್ಮ ? ಎಲ್ಲೇ ನಮ್ಮಮ್ಮ ?' ಎಂದು ಕೂಗುತ್ತ, ಉನ್ಮಭಾವದಿಂದ ವಿಸ್ಪಾರಿತ ನಯನೆಯಾಗಿ ನಾಲ್ಕು ದಿಕ್ಕುಗಳೂ ತಿರುಗಿತಿರುಗಿ ನೋಡಿದಳು.

ಪರಿಚಾರಿಕೆ:- ನಿಮ್ಮಮ್ಮನು ನಿನ್ನ ಇದಿರಿಗೆ ನಿಂತಿರುವಳಲ್ಲವೆ ?" ವಿನೋದಿನಿಯು ವಿಸ್ಟಾರಿತಲೋಚನಗಳುಳ್ಳವಳಾಗಿ, ಹೈಮವತಿಯನ್ನು ಸ್ವಲ್ಪ ಹೊತ್ತು ದೃಷ್ಟಿಸಿ ನೋಡಿದಳು. ಅನಂತರ ಭೀತಿವ್ಯಂಜಕ ಸ್ವರದಿಂದ, ಇಲ್ಲ ! ಇಲ್ಲ !! ಇಲ್ಲ !!! ಇವಳು ನಮ್ಮಮ್ಮನಲ್ಲ ! ನಮ್ಮಮ್ಮನು ಸ್ವರ್ಗಕ್ಕೆ ಹೋದಳು ! ಇವಳು ರಾಕ್ಷಸಿ ನನ್ನನ್ನು ತಿನ್ನುವುದಕ್ಕೆ ಬಂದಿರುವಳು !!! ನೀನು ನನ್ನನ್ನು ರಕ್ಷಿಸು ನನ್ನನ್ನುಳಿಸು !!! ಎಂದು ಕೂಗಿದಳು. ಮಗಳ ಇಂತಹ ಶೋಚನೀಯವಾದ ಅವಸ್ಥೆಯನ್ನು ನೋಡಿ, ಹೈಮವತಿಯು ಇನ್ನು ತಾಳಲಾರದೆ ಹೋದಳು. ಅವಳ ಉಚ್ಚ ಶಿಕ್ಷೆ, ಸಭ್ಯತೆ, ಮುಂತಾದುವುಗಳ ಅಭಿಮಾನವು ದೂರವಾಗಿ ಹೋಗಿ ಅವಳೂ ಅಶಿಕ್ಷಿತೆಯರಾದ ಹಿಂದೂ ಹೆಂಗಸರ ಹಾಗೆ ಗಟ್ಟಿಯಾಗಿ ಅಳುವುದಕ್ಕೆ ತೊಡಗಿದಳು. ಆ ಭಯಂಕರವಾದ ದೃಶ್ಯವನ್ನು ನೋಡಿ, ನವೀನಗೋಪಾಲನ ಕಣ್ಣುಗಳಿಂದ ನೀರು ಹರಿದು, ವಕ್ಷಸ್ಥಳವು ತೊಯಿದು ಹೋಯಿತು. ತಾಯಿತಂದೆಗಳಿಬ್ಬರೂ ಹೀಗೆ ಅಳುವುದನ್ನು ನೋಡಿ, ವಿನೋದಿನಿಗೆ ಹಣಕ್ಕಾಗಿ ಜ್ಞಾನೋದಯವಾದ ಹmಗಿ, ಸ್ವಲ್ಪ ಅಪ್ರಸ್ತುತಳಾಗಿ, ಕಾಯಿಯನ್ನು