ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ನಯ ಕಟ್ಟಡ ನಗೇಂದ್ರನಾಥ:-lk ಬಾಗಿಲನ್ನು ತೆಗೆದು ಬಿಡಿ, ಇಂತಹ ಮನೆಯಲ್ಲಿ ಅಕ್ಕ ಬೈನಿಂದ ಇರುವುದು ಸರಿಯಲ್ಲ. ಅವಳು ಸ್ವಲ್ಪ ಸ್ವತಂತ್ರವಾಗಿದ್ದರೆ ಒಳ್ಳೆಯದು. ಹೊರಗೆ ಹೋಗದ ಹಾಗೆ ನೋಡಿಕೊಂಡರೆ ಸಾಕು, ಹೀಗಿರುವುದು ಪ್ರಾಣಕ್ಕೆ ಅಪಾಯ !! ಈ ಸಮಯದಲ್ಲಿ ಉನ್ಮಾದಿನಿಯು ಪುನಃ ಕಾಗವನ್ನೆತ್ತಿದಳು; ದೇಶೀ ರಾಗ-ರೂಪಕ ಕಾಳ ಬಾಧಕಿಂ ವಿಧೇಹಿ ಮಲಯಾನಿಲ ಸಂಚಬಾಣ | ಪ್ರಾಣಾ೯ ಗ್ರಹಣ ನ ಗೃಹಂ ಪುನರಾಶ್ರಯಿಷ್ಯ || ಕಿಂ ತೇ ಕೃತಾಂತಭಗಿನಿ ಕ್ಷಮಯಾ ತರಂಗೊ | ರಂಗಾನಿ ಸಿಂಚ ಮಮ ಶಾಮ್ಯತು ದೇಹದಾಹಃ || ೪ ಈ ಸೊದೆಯನ್ನು ಕರೆವ ಮನೋಹರಿಯಾದ ಮಧುರ ಸಂಗೀತವನ್ನು ಕೇಳಿ ಎಲ್ಲರೂ ದುಃಖಿತರಾದರು. ಡಾಕ್ಟರ ಬಾಬುವು ಬಿಸುಸುಯ್ದು, It ಆಹಾ! ಕಂಡ ಸ್ವರವು ಅತಿ ಮಧುರವಾದುದು. ಹೀಗೆ ರೋಗಗ್ರಸ್ತವಾಗದಿದ್ದರೆ, ಈಕೆಯು ನಮ್ಮ ಸಮಾಜಕ್ಕೆ ಉಜ್ವಲವಾದ ಶಿರೋಮಣಿಯಾಗಿರುವಳು ” ಎಂದು ಹೇಳಿದನು. ಕೊಟ್ಟಷಿಯ ಬಾಗಿಲನ್ನು ತೆರೆಯಿಸಿ ಬಿಟ್ಟು, ಡಾಕ್ಟರ ಬಾಬುವು ಔಷಧವನ್ನು ಕದಿರುವುದಕ್ಕೆ ಏರ್ಪಾಟುಮಾಡಿ ಹೊರಟು ಹೋದನು. ಆರನೆಯ ಪರಿಚ್ಛೇದ. ಇಾಲಾಗಿ ತರ್ಕಾಲಂಕಾರ ಮಹಾಶಯನು ಗ್ರಾಮಕ್ಕೆ ಹಿಂದಿರುಗಿ ಬಂದು, ರಾಮ ಗೋಪಾಲನು ಕಾಲವಾದ 'ಸಮಾಚಾರವನ್ನು ಕೇಳಿದನು; ಮತ್ತು ದುರ್ಗಾನ ತಿಯ ತಂದೆಯು ಬಂದು, ದುರ್ಗಾವತಿಯನ್ನು ಕಲಿಕತ್ತೆಗೆ ಕರೆದುಕೊಂಡು ಹೋದ ನಂದೂ ತಿಳಿದುಬಂತು.

  • ಹೇ ಮಲಯವಾಯವೇ ! ಹೇ ಮನ್ಮಥನೇ ! ನನಗೆ ಬಾಧೆಯನ್ನು ಕೊಡು ! ನನ್ನ ಪ್ರೀಗ ಳನ್ನು ತಗೆದುಕ! ನಾನು ಮನೆಯನ್ನು ಪುನಃ ಆಶ್ರಯಿಸುವುದಿಲ್ಲ. ಹೇ ಯಮನ ಸಹೋದರಿಯ ನನ್ನ ಮೇಲೆ ಕ್ಷಮೆಮಾಡುವುದರಿಂದ ನಿನಗೇನು ಪ್ರಯೋಜನ ? ನಿನ್ನ ಕೃಪಾತರಂಗಗಳಿಂದ ನನ್ನ ಅಂಗ ಗಳನ್ನು ಸಾಯಿಸು, ನನ್ನ ದೇಹಕ್ಕಾಲೆಯು ನಿಂತವಾಗಲಿ |

mouTHIN