ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರನೆಯ ಪರಿಚ್ಛೇದ ನವೀನಗೋಪಾಲ:- ತಾವು ಇಲ್ಲಿಗೆ ಬಂದ ಉದ್ದೇಶವೇನು ? ಕುಲಪುರೋ ಹಿತರೆಂದು ಹೇಳುವುದರಿಂದ ನಾನು ನಮ್ಮನ್ನು ಕುಲಪುರೋಹಿತರೆಂದೊಪ್ಪಿಕೊಳ್ಳಲು ಸಿದ್ಧನಾಗಿಲ್ಲ.” ತರ್ಕಾಲಂಕಾರ:- ತಮ್ಮ ಅಣ್ಣಂದಿರು ನನ್ನನ್ನು ಕುಲಪುರೋಹಿತರೆಂದು ಅಂಗೀಕರಿಸಿರುವರು. ಅದು ಸಲುವಾಗಿ ನಾನು ನಿಮ್ಮಲ್ಲಿ ಯಾವ ಭಿಕ್ಷೆಯನ್ನು ಬೇಡಲೂ ಬಂದವನಲ್ಲ. ಏಕೆಂದರೆ, ನಾನು ತಮ್ಮಲ್ಲಿ ಆ ಸನ್ಮಾನವನ್ನು ಹೊಂದಲು ರೆನೆಂದು ಬಲ್ಲೆನು. ನಾನು ತಮ್ಮ ಮಗಳ ಮದುವೆಯನ್ನು ಮಾಡಿಸಿದವನು. ಆ ಆಳ ಯನಿಗೂ ತಮಗೂ ಗುರುಶುಪರಿಚಯವಿಲ್ಲ ವಾಗಿ, ನಿಮಗೆ ಅವನ ಪರಿಚಯಮಾಡಿ ಕೊಡುವುದಕ್ಕೋಸ್ಕರ ಮಾತ್ರ ಬಂದಿರುವೆನು. ಈತನೇ ತಮ್ಮ ಅಳಿಯ; ದುರ್ಗವ ತಿಯ ಗಂಡ.” ಹೀಗೆಂದು ಹೇಳಿ, ತರ್ಕಾಲಂಕಾರ ಮಹಾಶಯನು ಖಗೇಂದ್ರನನ್ನು ತೋರಿಸಿ ದನು, ನವೀನಗೋಪಾಲನು ಅಚ್ಚರಿಪಟ್ಟು, ಒಂದು ತಡವೆ ಖಗೇಂದ್ರನ ಮುಖವನ್ನು ನೋಡಿ, ಅನಂತರ ತರ್ಕಾಲಂಕಾರನನ್ನು ಕುರಿತು, 11 ಮತ್ತು ನನಗೆ ಏನೇನೂ ಅರ್ಥ ವಾಗುವುದಿಲ್ಲ. ನನಗೆ ಹೇಗೆ ಅಳಿಯನಾಗಬೇಕು?” ಎಂದು ಕೇಳಿದನು. ಸರ್ಕಾಲಂಕಾರ;-- ತಮ್ಮ ಅಣ್ಣಂದಿರು ತಮ್ಮ ಮಗಳಾದ ದುರ್ಗಾವತಿಯನ್ನು ಈತನಿಗೆ ಕೊಟ್ಟು ಮದುವೆಮಾಡಿದರು. - ನವೀನಗೋಪಾಲನು ಪುನಃ ಹೆಚ್ಚು ಆಶ್ಚರ್ಯದಿಂದ, 4 ಅದು ಹೇಗೆ ? ಆ ಸಮಾಚಿರ ಸ್ವಲ್ಪವೂ ನನಗೆ ತಿಳಿಯಬರಲಿಲ್ಲ” ಎಂದನು. ತಕFಲಂಕಾರ:-14 ತಾವು ಮಗಳಿಗೆ ಅಲ್ಪ ವಯಸ್ಸಿನಲ್ಲಿ ಹಿಂದೂಮತಾನು ಸಾರವಾಗಿ ಮದುವೆ ಮಾಡಲು ಸಮ್ಮತಿಸಲಾರಿರೆಂದು ಈ ವಿವಾಹವು ಗೋಗ್ಯವಾಗಿ ನಡೆಯಿಸಿದುದೇಯಿತು. ನವೀನಗೋಪಾಲ:-t ಮಾರು ಈ ವಿವಾಹ ವಿಚಾರವನ್ನು ಬಲ್ಲವರು?” ತರ್ಕಾಲಂಕಾರ- ನಾನು ಬಲ್ಲೆನು ; ಮತ್ತೊಬ್ಬ ತಿಳಿದು ಇದ್ದವರು ಸ್ವರ್ಗಸ್ಥರಾಗಿ ಹೋದರು. ಈಗ ನನ್ನನ್ನು ಹೊರತು ಮತ್ತಾರೂ ಅರಿಯರು.” ನವೀನಗೋಪಾಲtt ತಮ್ಮ ಮಾತನ್ನು ನಾನು ಹೇಗೆ ನಂಬಲಿ ? ಈ ಹುಡು ಗಿಗೋಸ್ಕರ ನಮ್ಮ ಅಣ್ಣಂದಿರು ಸ್ವಲ್ಪ ಆಸ್ತಿಯನ್ನು ಬಿಟ್ಟು ಹೋಗಿರುವರು, ಆ ಆಫ್ರಿಗೋಸ್ಕರವೇ ಈತಂತ್ರವೇನಾದರೂ ನಡೆದಿದ್ದರೂ ನಡೆದಿರಬಹುದು.”