ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

40 ಉನ್ಮಾದಿನೀ | wwwvvwvw ನಾನು ಕಣ್ಣಾರೆ ವಿನೋದಿನಿಯ ಕಷ್ಟ ಯಾತನೆಗಳನ್ನೆಲ್ಲಾ ನೋಡಿದ ದಿನ ಮೊದ ಲ್ಗೊಂಡು ಹಾಸಿಗೆಯನ್ನು ಬಿಟ್ಟು ಎದ್ದಿಲ್ಲ. ನೀವು ಹೇಳಿರೆ ? ನನಗೆ ಕಷ್ಟವಿಲ್ಲವೆ ? ಹಗಲು ರಾತ್ರಿ ನೋಡಿದವರು ನೀವು ಹೇಳಿರೆ ? ನಾನು ಸುಟದಲ್ಲಿರುವೆ ನೆ, ದುಃಖದಲ್ಲಿ ರುವೆನೊ ನಿಜವನ್ನು ಹೇಳಿಲ” ಎಂದು ಅವಳಿಸಿದಳು. ಹೀಗೆಂದು ಹೇಳಿ ತನ್ನ ಮಾತನ್ನು ಸ್ಥಾಪಿಸುವ ಭಾರವನ್ನು ಇದಿರಿಗೆ ನಿಂತಿದ್ದ ಗೆಳತಿಯಮೇಲೂ ಸೇವಕಿಯರಮೇಲಣ ಹಕಿಬಿಟ್ಟು, ಹೈಮವತಿಯು ಉಡುಪಿನ ಜೇಬಿನಲ್ಲಿ ಮಡಿಸಿಟ್ಟಿದ್ದ ಪಟ್ಟು ಕೈವವನ್ನು ತೆಗೆದು, ಅದರ ಒಂದೆರಡು ಮಡನ್ನು ಗಳನ್ನು ಮಾತ್ರ ಬಿಚ್ಚಿ, ಅದರಿಂದ ಕಣ್ಣುಗಳನ್ನು ಮರೆಮಾಡಿ ಮುಚ್ಚಿ ಕೊಂಡು, ನೂತನ ಸಭ್ಯಾಚಾರಪದ್ದತಿಗನುಸಾರವಾಗಿ ಅಳುತ್ತ ಕುಳಿತಳು. ಹೈಮವತಿಯ ಅಳು ವನ್ನು ಕಂಡು, ನವೀನಗೋಪಾಲನಿಗೆ ತಲೆ ತಿರುಗಿದ , ಅವರು ಗಾಬರಿಪಟ್ಟು? «« ನೀನು ಮೊದಲು ವಿವಾಹವಾದುದನ್ನು ನೋಡಿದವಳಲ್ಲ. ನಿನಗೆ ಹೇಗೆ ಗೊತ್ತು ? ಮತ್ತೇನುತಾನೇ ಮಾಡಬಲ್ಲವಳಾಗಿದ್ದೆ ? ಹುಡುಗಿಯು ಎಲ್ಲಾ ಸಮಾಚಾರವನ್ನು ಹೊರಪಡಿಸಿ ಹೇಳಬೇಕಾಗಿತ್ತು. ಆ ಮಾತು, ಹೋಗಲಿ ! ಬಿಡು ! ಈಗ ಹುಡುಗಿಯ ಮೊದಲಿನ ಗಂಡನು ಬಂದಿರುವನು, ಇತ್ತಲಾಗಿ ಈ ಅವಸ್ಥೆ. ಹುಡುಗಿಯ ಅವಸ್ಥೆ ನೋಡಿದರೆ ಅದು ಹಾಗೆ. ....... - ಈಗ ಮಾಡುವುದೇನು ? ” ಎಂದನು. ಹೈಮವತಿಯು ಆಗಲೂ ಅಭಿಮಾನಭರಿತಳಾಗಿ, 11 ಅದನ್ನು ನಾನು ಹೇಗೆ ಹೇಳಲಿ ? ನನಗೇನು ಗೊತ್ತು ? ” ಎಂದಳು. ನವೀನಗೊಪಾಲನು ಆಶ್ಚರ್ಯಪಟ್ಟು, : ನೀನೇ ಎಲ್ಲವನ್ನು ತಿಳಿದವಳು. ನಿನ್ನ ಮಾತಿಲ್ಲದೆ ನಾನು ಯಾವ ಕೆಲಸವನ್ನು ಮಾಡಿರುವೆನು ? ” ಎಂದನು. ಪತಿಯ ಇ೦ತಹ ಮಾತುಗಳನ್ನು ಕೇಳಿದ ಪತ್ನಿ ಯ ದುರಭಿಮಾನವು ಮತ್ತಷ್ಟು ಹೊತ್ತು ತಾನೇ ಉಳಿದಿರುವುದು ? ಹೈಮವತಿಯು ಆಗ ಕಣ್ಣಿಗೆ ಮರೆಮಾಡಿಕೊಂ ಇದ್ದ ಕೈವಸ್ತ್ರವನ್ನು ತೆಗೆದು, ಪುನಃ ಮೊದಲಿನ ಹಾಗೆ ವಡುಪುಮಾಡಿ, ಅದನ್ನು ಇದ್ದೆಡೆಯಲ್ಲಿಟ್ಟು ಕೊಂಡು, ಗೆಳತಿಯನ್ನೂ ಪರಿಚಾರಿಕೆಯನ್ನೂ ಹೊರಗೆ ಹೋಗುವ ಹಾಗೆ ಅಪ್ಪಣೆ ಮಾಡಿ, ಅನುಚ್ಚಸ್ವರದಿಂದ ಮೆಲ್ಲ ಮೆಲ್ಲಗೆ ಗಂಡನನ್ನು ಕುರಿತು, 14 ನಮ್ಮ ವಿನೋದಿನಿಯು ಮೊದಲಿನ ಹಾಗೆ ಸುಸ್ಥಳಾಗಿ, ಅದರೊಂದಿಗೆ ನಿನ್ನ ಅಣ್ಣನ ಆಸ್ತಿಯ ನಮ್ಮ ಕೈಬಿಟ್ಟು ಹೋಗದಿರುವುದಕ್ಕೆ ಏನು ಉಪಾಯವನ್ನು ಮಾಡ ಬೇಕೊ ಆ ಉಪಾಯವನ್ನು ಹುಡುಕಿ ಮಾಡಬೇಕು. ಇದರಿ೦ದ ನಮ್ಮ ಸಮಾಜ ದರದು ನಿಂದಿಸುವರೆಂದು ಹೆದರಬೇಡ ಎಂದು ಹೇಳಿದಳು,